ಹಿಂದೂ ಸಂಘಟನೆಗಳಿಂದ ‘ಬ್ಯಾನ್ ಫೇಸ್ಬುಕ್’ ಅಭಿಯಾನ, ಕಾರಣವೇನು ಗೊತ್ತಾ?

 

 

ಸುದ್ದಿ ಕಣಜ.ಕಾಂ
ಬೆಂಗಳೂರು: ಹಿಂದೂ ಜಾಗೃತಿ ಸಮಿತಿ(ಎಚ್.ಜೆ.ಎಸ್)ಯ ಫೇಸ್ಬುಕ್ ಪೇಜ್‍ಗಳನ್ನು ನಿಷೇಧಿಸಿದ್ದಾರೆಂಬ ಕಾರಣಕ್ಕೆ ರಾಷ್ಟ್ರದಾದ್ಯಂತ ಫೇಸ್ಬುಕ್ ಸಾಮಾಜಿಕ ಜಾಲತಾಣದಲ್ಲಿ ಅಭಿಯಾನವೊಂದು ಶುರುವಾಗಿದೆ. ಅದಕ್ಕೆ ಹಲವರು ದನಿಗೂಡಿಸಿದ್ದಾರೆ.

ಯಾವುದೇ ಪೂರ್ವ ಮಾಹಿತಿ ನೀಡದೇ ಎಚ್.ಜೆ.ಎಸ್.ನ ಮಿಲಿಯನ್ ಗಟ್ಟಲೇ ಫಾಲೋವರ್ರ್ಸ್ ಗಳನ್ನು ಹೊಂದಿರುವ 35 ಪೇಜ್ ಗಳ ಮೇಲೆ ನಿಷೇಧ ಹೇರಲಾಗಿದೆ. ಇದರ ವಿರುದ್ಧ ಟ್ವಿಟರ್‍ನಲ್ಲಿ ‘ಬ್ಯಾನ್ ಫೇಸ್ಬುಕ್’ ಅಭಿಯಾನ ಶುರುವಾಗಿದೆ.
ಫೇಸ್ಬುಕ್ ಗೆ ಪರ್ಯಾಯವಾದ ಇನ್ನೊಂದು ಭಾರತೀಯ ಮೂಲದ ಸಾಮಾಜಿಕ ಜಾಲತಾಣ ವೇದಿಕೆಯನ್ನು ಸಿದ್ಧಪಡಿಸುವ ನಿಟ್ಟಿನಲ್ಲಿ ಮೋದಿ ಸರ್ಕಾರ ಒತ್ತು ನೀಡಬೇಕು ಎಂದು ತೆಲಂಗಾಣದ ಬಿಜೆಪಿ ಶಾಸಕ ಟಿ.ರಾಜಾಸಿಂಗ್ ಅವರು ಮನವಿ ಮಾಡಿದ್ದಾರೆ.

error: Content is protected !!