ಕೊರೊನಾ ಸೋಂಕು ಇಳಿಯುತ್ತಿದ್ದರೂ ಸಾವು ನಿಲ್ಲುತ್ತಿಲ್ಲ

 

 

ಸುದ್ದಿ ಕಣಜ.ಕಾಂ
ಶಿವಮೊಗ್ಗ: ಕೊರೊನಾ ವೈರಸ್ ಸೋಂಕಿತರ ಸಂಖ್ಯೆಯಲ್ಲಿ ದಿನೇ ದಿನೆ ಇಳಿಕೆಯಾಗುತ್ತಿದೆ. ಆದರೆ, ಸಾವಿನ ಪ್ರಮಾಣ ಮಾತ್ರ ನಿಂತಿಲ್ಲ. ಭಾನುವಾರ ಸಹ 4 ಜನ ಕೋವಿಡ್ ನಿಂದ ಮೃತಪಟ್ಟಿದ್ದಾರೆ.

https://www.suddikanaja.com/2021/06/18/increase-in-sample-collection-decline-in-positivity-rate-in-shivamogga/

ಇಲ್ಲಿಯವರೆಗೆ ಕೊರೊನಾ ಒಟ್ಟು 946 ಮಂದಿಯನ್ನು ಬಲಿ ಪಡೆದಿದೆ. ಸಾವಿರ ದಾಟುತಿದ್ದ ಪಾಸಿಟಿವ್ ಸಂಖ್ಯೆ ಈಗ ಇನ್ನೂರರ ಕೆಳಗಿಳಿದಿದೆ. ಆದರೆ, ಸಾವು ಮಾತ್ರ ನಾಲ್ಕು, ಐದು ಇದೇ ರೀತಿ ಮುಂದುವರಿದಿದೆ.
ಇಂದು 184 ಜನರಲ್ಲಿ ಸೋಂಕು ಪತ್ತೆಯಾಗಿದೆ. ಅದರಲ್ಲಿ ಒಬ್ಬರು ಕಾಲೇಜು ಸಿಬ್ಬಂದಿ ಇದ್ದಾರೆ. ಯಾವುದೇ ವಿದ್ಯಾರ್ಥಿಗಳಲ್ಲಿ ನಂಜು ದೃಢಪಟ್ಟಿಲ್ಲ. 406 ಜನ ಗುಣಮುಖರಾಗಿದ್ದಾರೆ.
ತಾಲೂಕುವಾರು ವರದಿ | ಶಿವಮೊಗ್ಗ 72, ಭದ್ರಾವತಿ 46, ತೀರ್ಥಹಳ್ಳಿ 16, ಶಿಕಾರಿಪುರ 16, ಸಾಗರ 12, ಹೊಸನಗರ 8, ಸೊರಬ 5, ಬಾಹ್ಯ ಜಿಲ್ಲೆಯ 9 ಜನ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ.

ಸಕ್ರಿಯ ಪ್ರಕರಣದಲ್ಲಿ ಇಳಿಕೆ | ಮೆಗ್ಗಾನ್ ಜಿಲ್ಲಾಸ್ಪತ್ರೆಯಲ್ಲಿ 304, ಡಿಸಿಎಚ್‍ಸಿನಲ್ಲಿ 147, ಕೋವಿಡ್ ಕೇರ್ ಸೆಂಟರ್‍ನಲ್ಲಿ 781, ಖಾಸಗಿ ಆಸ್ಪತ್ರೆಯಲ್ಲಿ 431, ಹೋಮ್ ಐಸೋಲೇಷನ್‍ನಲ್ಲಿ 557, ಟ್ರಿಯೇಜ್‍ನಲ್ಲಿ 398 ಸೋಂಕಿತರಿದ್ದಾರೆ. ಜಿಲ್ಲೆಯಲ್ಲಿ 2,618 ಸಕ್ರಿಯ ಪ್ರಕರಣಗಳಿವೆ. ಸೋಂಕಿತರ ಸಂಪರ್ಕದಲ್ಲಿದ್ದ ಹಾಗೂ ರೋಗದ ಲಕ್ಷಣಗಳನ್ನು ಹೊಂದಿರುವ 1,893 ಜನರ ಗಂಟಲು ದ್ರವದ ಮಾದರಿಯನ್ನು ಸಂಗ್ರಹಿಸಲಾಗಿದೆ. 2,788 ವರದಿಗಳು ನೆಗೆಟಿವ್ ಬಂದಿವೆ.

https://www.suddikanaja.com/2021/05/15/covid-positive-case-raise-in-shivamogga/

error: Content is protected !!