ಸುದ್ದಿ ಕಣಜ.ಕಾಂ
ಹೊಸನಗರ: ರಸ್ತೆಯ ಮೇಲೆ ಮಲಗಿದ್ದ ಜಾನುವಾರುಗಳ ಜೀವವನ್ನು ಉಳಿಸಲು ಹೋಗಿ ಅಕ್ಕಿ ಚೀಲಗಳನ್ನು ಸಾಗಿಸುತ್ತಿದ್ದ ಲಾರಿ ಚಾಲಕ ಮರಕ್ಕೆ ಡಿಕ್ಕಿ ಹೊಡೆದಿದ್ದು, ಆತನಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ಹೊಸನಗರ ತಾಲೂಕಿನ ಗೇರುಪುರ ಸಮೀಪ ಘಟನೆ ನಡೆದಿದ್ದು, ಲಾರಿ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ನಂತರ, ಅಕ್ಕಿಯ ಚೀಲಗಳನ್ನು ಬೇರೊಂದು ಲಾರಿಗೆ ಅನ್ ಲೋಡ್ ಮಾಡಿ ಅಲ್ಲಿಂದ ಸಾಗಿಸಲಾಗಿದೆ.