ಶಿವಮೊಗ್ಗ, ಭದ್ರಾವತಿಯಲ್ಲಿ ನಿರೀಕ್ಷಿತ ಮಟ್ಟದಲ್ಲಿ ತಗ್ಗದ ಕೊರೊನಾ ಸೋಂಕು

 

 

ಸುದ್ದಿ ಕಣಜ.ಕಾಂ
ಶಿವಮೊಗ್ಗ: ಜಿಲ್ಲೆಯ ಶಿವಮೊಗ್ಗ ಮತ್ತು ಭದ್ರಾವತಿ ಹೊರತಾಗಿ ಎಲ್ಲ ತಾಲೂಕುಗಳಲ್ಲಿ ಕೊರೊನಾ ಸೋಂಕು ನಿಯಂತ್ರಣಕ್ಕೆ ಬಂದಿದೆ. ಕಳೆದ ಎರಡು ವಾರಗಳಿಂದ ಸೋಂಕಿನಲ್ಲಿ ನಿರಂತರ ಕುಸಿತ ಕಾಣುತ್ತಿದೆ. ಆದರೆ, ಶಿವಮೊಗ್ಗ, ಭದ್ರಾವತಿ ತಾಲೂಕುಗಳಲ್ಲಿ ಪಾಸಿಟಿವ್ ಸಂಖ್ಯೆ ಇಳಿಮುಖವಾಗಬೇಕಿದೆ.

https://www.suddikanaja.com/2021/06/30/covid-cases-in-shivamogga-5/

ಗುರುವಾರ ಶಿವಮೊಗ್ಗದಲ್ಲಿ 54, ಭದ್ರಾವತಿಯಲ್ಲಿ 45 ಜನರಿಗೆ ಕೊರೊನಾ ಪಾಸಿಟಿವ್ ಇರುವುದು ದೃಢಪಟ್ಟಿದೆ. ತೀರ್ಥಹಳ್ಳಿಯಲ್ಲಿ 9, ಶಿಕಾರಿಪುರ 4, ಸಾಗರ 12, ಹೊಸನಗರ 6, ಸೊರಬ 10 ಮತ್ತು ಬಾಹ್ಯ ಜಿಲ್ಲೆಯ 9 ಜನರಲ್ಲಿ ಸೋಂಕು ಪತ್ತೆಯಾಗಿದೆ. ನಾಲ್ಕು ಜನ ಸೋಂಕಿತರು ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟಿದ್ದಾರೆ.
ಸೋಂಕಿತರ ಸಂಪರ್ಕದಲ್ಲಿದ್ದ ಹಾಗೂ ರೋಗದ ಲಕ್ಷಣಗಳನ್ನು ಹೊಂದಿರುವ 4,823 ಜನರ ಮಾದರಿಗಳನ್ನು ಸಂಗ್ರಹಿಸಲಾಗಿದೆ. 5,627 ವರದಿ ನೆಗೆಟಿವ್ ಇರುವುದು ದೃಢಪಟ್ಟಿದೆ.

ಗುರುವಾರ ಜಿಲ್ಲಾಡಳಿತ ಬಿಡುಗಡೆ ಮಾಡಿರುವ ವರದಿ ಪ್ರಕಾರ, 149 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. 187 ಜನ ಚಿಕಿತ್ಸೆ ಪಡೆದು ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ.

ಸಕ್ರಿಯ ಪ್ರಕರಣ ಇಳಿಕೆ | ಮೆಗ್ಗಾನ್ ಆಸ್ಪತ್ರೆಯಲ್ಲಿ 186, ಡಿಸಿಎಚ್‍ಸಿಯಲ್ಲಿ 69, ಕೋವಿಡ್ ಕೇರ್ ಸೆಂಟರ್ ನಲ್ಲಿ 199, ಖಾಸಗಿ ಆಸ್ಪತ್ರೆಯಲ್ಲಿ 144, ಹೋಮ್ ಐಸೋಲೇಷನ್ ನಲ್ಲಿ 355, ಟ್ರಿಯೇಜ್ ಸೆಂಟರ್ ನಲ್ಲಿ 51 ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. ಸಕ್ರಿಯ ಪ್ರಕರಣಗಳು 1,004 ಇವೆ.

https://www.suddikanaja.com/2021/04/19/covid-control-room-in-all-talukas-of-shivamogga/

error: Content is protected !!