ಟ್ರ್ಯಾಕ್ಟರ್ ನಿಂದ ಬಿದ್ದು ವ್ಯಕ್ತಿ ಸಾವು

 

 

ಸುದ್ದಿ ಕಣಜ.ಕಾಂ
ಶಿವಮೊಗ್ಗ: ತಾಲೂಕಿನ ಕುಂಸಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಟ್ರ್ಯಾಕ್ಟರ್ ಮಡ್ ಗಾರ್ಡ್ ಮೇಲೆ ಕುಳಿತು ಹೋಗುವಾಗ ಕೆಳಗೆ ಬಿದ್ದು ವ್ಯಕ್ತಿಯೊಬ್ಬ ಮೃತಪಟ್ಟಿದ್ದಾರೆ.

https://www.suddikanaja.com/2021/06/22/person-died-in-tunga-river/

ಕುಂಸಿ‌ ಗ್ರಾಮದ ಶಾಂತಪ್ಪ(75) ಮೃತಪಟ್ಟಿದ್ದಾರೆ. ಟ್ರ್ಯಾಕ್ಟರ್ ಚಾಲಕ ಪವನ್ ಕುಮಾರ್ ಟ್ರ್ಯಾಕ್ಟರ್ ಓಡಿಸುತ್ತಿದ್ದಾಗ ಮಡ್ ಗಾರ್ಡ್ ಮೇಲೆ ಶಾಂತಪ್ಪ ಎಂಬುವವರು ಕುಳಿತುಕೊಂಡಿದ್ದರು.

ಘಟನೆ ನಡೆದಿದ್ದು ಹೇಗೆ | ರಾಗಿಹೊಸಳ್ಳಿ ಹೋಗುವ ರಸ್ತೆಯಲ್ಲಿ ಟ್ರ್ಯಾಕ್ಟರ್ ಅನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಾಲನೆ ಮಾಡಿದ್ದರಿಂದ ಮಡ್ ಗಾರ್ಡ್ ಮೇಲೆ ಕುಳಿತಿದ್ದ ಶಾಂತಪ್ಪ ಟ್ರ್ಯಾಕ್ಟರ್ ಎಡ ಭಾಗಕ್ಕೆ ಬಿದ್ದಿದ್ದಾರೆ. ಬಲ ಭಾಗದ ಸೊಂಟ ಹಾಗೂ ರೊಂಡಿಗೆ ಪೆಟ್ಟು ಬಿದ್ದು ಗಾಯವಾಗಿದ್ದು, ಅಸ್ಪತ್ರೆಗೆ ಕರೆದೊಯ್ಯಲಾಗಿದೆ. ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿರುತ್ತಾರೆ.

READ | ಬಟ್ಟೆ ತೊಳೆಯಲು ಹೋದಾಗ ಪೋಷಕರ ಎದುರೇ ನೀರಲ್ಲಿ ಮುಳುಗಿ ಬಾಲಕ ಸಾವು

ಮೃತನ ಮಗ ರಮೇಶ್ ನೀಡಿದ ದೂರಿನ ಮೇರೆಗೆ ಕಲಂ 279, 304(ಎ) ಐಪಿಸಿ ರಿತ್ಯಾ ಕುಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

https://www.suddikanaja.com/2020/11/10/netherlands-parcel/

 

error: Content is protected !!