ಆಗುಂಬೆ ಘಾಟಿ ರೀ ಓಪನ್, ವಾಹನ ಸಂಚಾರಕ್ಕೆ ಅವಕಾಶ, ಮಳೆ‌ ಬಂದರಷ್ಟೇ ಈ ನಿಯಮ ಅನ್ವಯ

 

 

ಸುದ್ದಿ ಕಣಜ.ಕಾಂ
ಶಿವಮೊಗ್ಗ: ಪ್ರಸ್ತುತ ಮಳೆ ಪ್ರಮಾಣ ಕಡಿಮೆ ಇರುವುದರಿಂದ ಸಾರ್ವಜನಿಕರ ಸುಗಮ ಸಂಚಾರದ ಹಿತದೃಷ್ಟಿಯಿಂದ ರಾಷ್ಟ್ರೀಯ ಹೆದ್ದಾರಿ 169ಎ ಆಗುಂಬೆ ಘಾಟಿಯಲ್ಲಿ ವಾಹನಗಳ ಸಂಚಾರಕ್ಕೆ ಅವಕಾಶ ನೀಡಿ ಜಿಲ್ಲಾಧಿಕಾರಿಗಳು ಆದೇಶಿಸಿದ್ದಾರೆ.

https://www.suddikanaja.com/2021/05/14/red-alert-in-shivamogga-avoid-bus-in-agumbe-ghat/

ಈ ಹಿಂದೆ ರಾಷ್ಟ್ರೀಯ ಹೆದ್ದಾರಿ 169-ಎ ತೀರ್ಥಹಳ್ಳಿ- ಉಡುಪಿ ವ್ಯಾಪ್ತಿಯಲ್ಲಿ ಹೆಚ್ಚು ಮಳೆಯಾಗುತಿತ್ತು. ಆಗುಂಬೆ ಘಾಟಿಯ ರಸ್ತೆಯು ಕಿರಿದಾಗಿದ್ದು, ರಸ್ತೆಯ ಇಕ್ಕೆಲಗಳಲ್ಲಿ ಭಾರ ತಡೆಯುವ ಕ್ಷಮತೆ ಕ್ಷೀಣಿಸುತ್ತಿತ್ತು. ಭಾರೀ ಸರಕು ಸಾಗಣೆ ವಾಹನಗಳು ಸಂಚರಿಸುವುದರಿಂದ ರಸ್ತೆಯ ಬದಿಯ ಮಣ್ಣು ಕುಸಿತ ಉಂಟಾಗಿ ರಸ್ತೆ ಸಂಚಾರಕ್ಕೆ ತೊಂದರೆ ಆಗಬಹುದು ಎಂಬ ಕಾರಣಕ್ಕೆ ವಾಹನ ಸಂಚಾರಕ್ಕೆ ನಿರ್ಬಂಧ ಹೇರಲಾಗಿತ್ತು.
ಅಧಿಕ ಮಳೆ ಇದ್ದಾಗ ಭಾರೀ ವಾಹನ ನಿಷೇಧ | ಅಧಿಕ ಮಳೆ ಪ್ರಮಾಣ ಇರುವ ದಿನಗಳಲ್ಲಿ ಭಾರೀ ವಾಹನಗಳ ಸಂಚಾರ ನಿಷೇಧಿಸಲಾಗುವುದು. ಆಗ, ಶಿವಮೊಗ್ಗ- ತೀರ್ಥಹಳ್ಳಿ- ಆಗುಂಬೆ- ಉಡುಪಿ ಮಾರ್ಗ ಹಾಗೂ ಶಿವಮೊಗ್ಗ- ತೀರ್ಥಹಳ್ಳಿ- ಉಂಟೂರುಕಟ್ಟೆ ಕೈಮರ -ಮಾಸ್ತಿಕಟ್ಟೆ- ಹುಲಿಕಲ್- ಕುಂದಾಪುರ ಹಾಗೂ ಶಿವಮೊಗ್ಗ-ತೀರ್ಥಹಳ್ಳಿ-ಕಮ್ಮರಡಿ-ಶೃಂಗೇರಿ-ಕೆರೆಕಟ್ಟೆ-ಕಾರ್ಕಳ ಈ‌ ಮಾರ್ಗದ ಮೂಲಕ ಸಂಚಾರಕ್ಕೆ ಅವಕಾಶ ನೀಡಲಾಗುವುದು ಎಂದು ಡಿಸಿ ಆದೇಶದಲ್ಲಿ ತಿಳಿಸಿದ್ದಾರೆ.

https://www.suddikanaja.com/2021/02/08/penalty-on-food-feeding-to-animals-in-agumbe-ghat/

error: Content is protected !!