ಸುದ್ದಿ ಕಣಜ.ಕಾಂ
ಶಿವಮೊಗ್ಗ: ಜೂನ್ ಮೊದಲ ವಾರದಲ್ಲಿ ಅಬ್ಬರಿಸಿದ್ದ ಮಳೆರಾಯ ನಂತರ ಮೌನಕ್ಕೆ ಜಾರಿದ್ದ. ಮುಂಗಾರು ನಂಬಿ ಬಿತ್ತನೆ ಮಾಡಿದ್ದ ರೈತರು ಮಳೆಯ ನಿರೀಕ್ಷೆಯಲ್ಲಿದ್ದರು. ಈಗ ಮತ್ತೆ ವರ್ಷಧಾರೆ ಆರಂಭವಾಗಿದೆ.
ಜೋಗದ ಪರಿಸರದಲ್ಲೂ ಮಳೆಯಾಗಿದ್ದು, ಜಲಪಾತಕ್ಕೆ ಜೀವಕಳೆ ಬಂದಿದೆ. ಪ್ರವಾಸಿಗರು ಪ್ರಕೃತಿ ಸೌಂದರ್ಯವನ್ನು ಆಸ್ವಾದಿಸಲು ಆಗಮಿಸುತ್ತಿದ್ದಾರೆ.