ಭದ್ರಾವತಿಯಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದವರ ಬಂಧನ, ಮಾದಕ ವಸ್ತು ಸೀಜ್

 

 

ಸುದ್ದಿ ಕಣಜ.ಕಾಂ
ಭದ್ರಾವತಿ: ಹಳೆಸೀಗೆಬಾಗಿ ಹೊಳೆಹೊನ್ನೂರು ರಸ್ತೆಯ ಹತ್ತಿರ ದ್ವಿಚಕ್ರ ವಾಹನದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಆರು ಜನರನ್ನು ಬಂಧಿಸಲಾಗಿದೆ.

https://www.suddikanaja.com/2021/07/03/accused-arrested-5/

ಭದ್ರಾವತಿಯ ಹೊಸಮನೆ ನಿವಾಸಿಗಳಾದ ದಕ್ಷಿಣಾಮೂರ್ತಿ (37), ಸುದೀಪ್ ಕುಮಾರ್ (30), ವಿಜಯನಗರದ ಡ್ಯಾನಿಯಲ್ (25),ಸಂತೆ ಮೈದಾನದ ಕಿರಣ್ (23), ಜನ್ನಾಪುರದ ಪವನ್ ಕುಮಾರ್ (25), ಹೊಸ ಕೋಡಿಹಳ್ಳಿಯ ನವೀನ್ ಕುಮಾರ್ (26) ಬಂಧಿತರು.

ಆರೋಪಿಗಳಿಂದ ಅಂದಾಜು 35,000 ರೂಪಾಯಿ ಮೌಲ್ಯದ 1 ಕೆ.ಜಿ 375 ಗ್ರಾಂ ತೂಕದ ಗಾಂಜಾ ವಶಕ್ಕೆ ಪಡೆಯಲಾಗಿದೆ.‌ 800 ರೂಪಾಯಿ ನಗದು ಮತ್ತು ಕೃತ್ಯಕ್ಕೆ ಉಪಯೋಗಿಸಿದ ಎರಡು ದ್ವಿಚಕ್ರ ವಾಹನಗಳನ್ನು ಜಪ್ತಿ ಮಾಡಲಾಗಿದೆ‌.

ಗುರುವಾರ ಮಧ್ಯಾಹ್ನ ಗಾಂಜಾ ಮಾರಾಟ ಮಾಡುತಿದ್ದಾಗ ಬಂದ‌ ಖಚಿತ ಮಾಹಿತಿ ಮೇರೆಗೆ ಭದ್ರಾವತಿ ನಗರ ವೃತ್ತ ಸಿ.ಪಿ.ಐ ನೇತೃತ್ವದಲ್ಲಿ ಸಿಬ್ಬಂದಿ ಜೊತೆ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ.
ಭದ್ರಾವತಿ ಹಳೇ ನಗರ ಪೊಲೀಸ್ ಠಾಣೆಯಲ್ಲಿ ಆರೋಪಿತರ ವಿರುದ್ಧ ಎನ್.ಡಿ.ಪಿ.ಎಸ್. ಕಾಯಿದೆ ಅನ್ವಯ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗುತ್ತಿದೆ.

https://www.suddikanaja.com/2021/07/09/ganja-arrest/

error: Content is protected !!