ಮೊಗವೀರರಿಗೆ ಹೆಲ್ತ್ ಸೆಕ್ಯೂರಿಟಿ ಸ್ಕೀಮ್

 

 

ಸುದ್ದಿ ಕಣಜ.ಕಾಂ
ಶಿವಮೊಗ್ಗ: ಮೊಗವೀರರ ಯೋಗಕ್ಷೇಮಕ್ಕಾಗಿ ಜಿಲ್ಲಾ ಮೊಗವೀರರ ಮಹಾಜನ ಸಂಘದಿAದ ಜಿ. ಶಂಕರ್ ಆರೋಗ್ಯ ಸುರಕ್ಷಾ ವಿಮಾ ಯೋಜನೆ ನೀಡಲಾಗುತ್ತಿದೆ.
ಸಮಾಜದ ಜಿಲ್ಲಾಧ್ಯಕ್ಷ ಕೆ.ವಿ. ಅಣ್ಣಪ್ಪ ಅವರು ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಆರೋಗ್ಯ ಯೋಜನೆಯಲ್ಲಿ ಮಣಿ ಪಾಲ್ ಸಮೂಹ ಸಂಸ್ಥೆಯ ಆಸ್ಪತ್ರೆ ಸೇರಿವೆ. ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್ ಹಾಗೂ ಮೊಗವೀರರ ಮಹಾಜನ ಸಂಘ ಆಶ್ರಯದಲ್ಲಿ ಆರೋಗ್ಯ ವಿಮಾ ಯೋಜನೆ ಜಾರಿಗೆ ತರಲಾಗುತ್ತಿದೆ ಎಂದು ಹೇಳಿದರು.
ಸದಸ್ಯರಾಗುವುದು ಹೇಗೆ:
ಒಂದು ಕುಟುಂಬಕ್ಕೆ 1,500 ರೂ. ಪಾವತಿಸಿದರೆ ಸಾಕು ವಿಮಾ ಸೌಲಭ್ಯವನ್ನು ಪ್ರಾಪ್ತವಾಗಲಿದೆ. ಆಸಕ್ತರು ಆಧಾರ್, ಪಡಿತರ ಚೀಟಿ, ಈಗಾಗಲೇ ಹೊಂದಿದ್ದಲ್ಲಿ ಜಿ.ಶಂಕರ್ ಮಣಿಪಾಲ್ ಕಾರ್ಡ್ ನಕಲು ಪ್ರತಿಗಳೊಂದಿಗೆ ನ.15ರೊಳಗೆ ಮೊಗವೀರರ ಸಮಾಜದ ಮುಖಂಡರಿಗೆ ಸಂಪರ್ಕಿಸಬೇಕು.
ಆಸಕ್ತರು 9886800223, 9740265400, 9945543358 ಅಥವಾ 9845660085 ಮೊಬೈಲ್ ಸಂಖ್ಯೆಗೆ ಕರೆ ಮಾಡಿ.
ಏನು ಪ್ರಯೋಜನ:
50 ಸಾವಿರ ರೂ.ವರೆಗೆ ಆಸ್ಪತ್ರೆಯ ಖರ್ಚು ಭರಿಸಲಾಗುವುದು. ಒಂದು ಕುಟುಂಬದ ಐವರು ಆರೋಗ್ಯ ಸೌಲಭ್ಯ ಪಡೆಯಬಹುದು.
ಅಪಘಾತದಲ್ಲಿ ಸಾವಿಗೀಡಾದ್ದಲ್ಲಿ ಅಂತಹವರ ಕುಟುಂಬಕ್ಕೆ 50 ಸಾವಿರ ರೂ. ವಿಮಾ ಹಣ ಕೊಡಲಾಗುತ್ತದೆ.
ಆಸ್ಪತ್ರೆಯಲ್ಲಿ ಒಳ ಅಥವಾ ಹೊರ ರೋಗಿಯಾಗಿ ಚಿಕಿತ್ಸೆ ಪಡೆದರೂ ವಿಮಾ ಸೌಲಭ್ಯ ಅನ್ವಯಿಸುತ್ತದೆ.
ಸುದ್ದಿಗೋಷ್ಠಿಯಲ್ಲಿ ಪಾಲಿಕೆ ಸದಸ್ಯೆ ಸುನೀತಾ ಅಣ್ಣಪ್ಪ, ರಾಮು, ಸುರೇಶ್, ನಾಗರಾಜ್, ದಿನೇಶ್ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!