ನೋ ನೆಟ್ವರ್ಕ್, ನೋ‌ ಓಟಿಂಗ್ ಅಭಿಯಾ‌ನದ ಪರ ಬೇಳೂರು‌ ಬ್ಯಾಟಿಂಗ್, ಗಂಭೀರ ಆರೋಪಗಳೇನು?

 

 

ಸುದ್ದಿ‌ ಕಣಜ.ಕಾಂ
ಶಿವಮೊಗ್ಗ: ಮಲೆನಾಡಿನಲ್ಲಿ‌ ಆರಂಭವಾಗಿರುವ ನೋ ನೆಟ್ವರ್ಕ್ ನೋ ವೋಟಿಂಗ್ ಅಭಿಯಾನಕ್ಕೆ ಕಾಂಗ್ರೆಸ್ ವಕ್ತಾರ ಬೇಳೂರು ಗೋಪಾಲಕೃಷ್ಣ ದನಿ ಗೂಡಿಸಿದರು.

READ | ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬೆನ್ನಿಗೆ ನಿಂತ ಶಿವಮೊಗ್ಗದ 21 ಮಠಾಧೀಶರು, ಸ್ವಾಮೀಜಿಗಳ ಬೇಡಿಕೆಗಳೇನು?

ಈ‌ ಕುರಿತು ಬುಧವಾರ ಕರೆದಿದ್ದ ಮಾಧ್ಯಮಗೋಷ್ಠಿಯಲ್ಲಿ ತಮ್ಮ ನಿರ್ಧಾರವನ್ನು‌ ಅವರು ಪ್ರಕಟಿಸಿದರು.

  1. ಆರೋಪಗಳೇನು?
    ನೆಟ್ವರ್ಕ್ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವಲ್ಲಿ ಸರ್ಕಾರ ಮತ್ತು ಸಂಸದ ಬಿ.ವೈ.ರಾಘವೇಂದ್ರ ಅವರು ವಿಫಲರಾಗಿದ್ದಾರೆ.
  2. ಜೋಗದ ಹಳೆಯ ಪ್ರವಾಸಿ ಕೇಂದ್ರವನ್ನು ತೆರವುಗೊಳಿಸಿ ಅಲ್ಲಿ‌ ತ್ರಿಸ್ಟಾರ್ ಹೋಟೆಲ್ ಮಾಡುವ ಹುನ್ನಾರ ಮಾಡಲಾಗುತ್ತಿದೆ.
  3. ಬಿ.ಎಸ್. ಯಡಿಯೂರಪ್ಪ ಅವರೇ ಸಿಎಂ ಆಗಿ ಮುಂದಿವರಿಯಲಿ ಎಂಬುವುದು ನನ್ನ ಅಪೇಕ್ಷೆ. ಆದರೆ, ಅವರ ಪಕ್ಷದಲ್ಲಿಯೇ ಅವರು ಮುಖ್ಯಮಂತ್ರಿಯಾಗಿರುವುದು ಕೆಲವರಿಗೆ ಇಷ್ಟವಿಲ್ಲ.

ಕರೂರು, ತುಮರಿ, ಬ್ಯಾಕೋಡು ಹೀಗೆ ಮಲೆನಾಡಿನ ಹಲವು ಹಳ್ಳಿಗಳಲ್ಲಿ ಅಭಿಯಾನ ಶುರುವಾಗಿದೆ. ಇದಕ್ಕೆ ತಮ್ಮ ಪೂರ್ಣ ಬೆಂಬಲ ಇದೆ.‌ ವರ್ಕ್ ಫ್ರಮ್ ಹೋಮ್ ಮಾಡುತ್ತಿರುವ ಅದೆಷ್ಟೋ ಉದ್ಯೋಗಿಗಳಿಗೆ ತೊಂದರೆ ಆಗುತಿದೆ ಎಂದು ತಿಳಿಸಿದರು.

READ | ನೂರೆಂಟು ಪ್ರಶ್ನೆಗಳನ್ನು ಹುಟ್ಟು ಹಾಕಿದ ಯಡಿಯೂರಪ್ಪ ಟ್ವಿಟ್, ಇದು ವಿದಾಯದ ಮುನ್ಸೂಚನೆಯೇ? ಅಭಿಮಾನಿಗಳಿಂದ ಸಂಚಲನ ಮೂಡಿಸುವ ಪ್ರತಿಕ್ರಿಯೆಗಳು

ಪ್ರಮುಖರಾದ ಹುಲ್ತಿಕೊಪ್ಪ ಶ್ರೀಧರ್, ಜಿ.ಡಿ. ಮಂಜುನಾಥ್, ರಾಜಶೇಖರ್ ಮಾಧ್ಯಮಗೋಷ್ಠಿಯಲ್ಲಿ‌ ಉಪಸ್ಥಿತರಿದ್ದರು.

error: Content is protected !!