ಶಿವಮೊಗ್ಗ ನಗರದಲ್ಲಿ ತುಂಗೆ ಸೃಷ್ಟಿಸಿದ ಅನಾಹುತ, 2 ಮನೆ ಗೋಡೆ ಕುಸಿತ, ಎಲ್ಲೆಲ್ಲಿ ಏನಾಗಿದೆ?

 

 

ಸುದ್ದಿ ಕಣಜ.ಕಾಂ
ಶಿವಮೊಗ್ಗ: ಶುಕ್ರವಾರ ಎಡೆಬಿಡದೆ ಸುರಿದ ಪುಷ್ಯ ಮಳೆ ಶಿವಮೊಗ್ಗ ನಗರದಲ್ಲಿ ಭಾರಿ ಅನಾಹುತವನ್ನು ಸೃಷ್ಟಿಸಿದೆ.

https://www.suddikanaja.com/2021/07/11/smart-city/

ಹಲವು ಬಡಾವಣೆಗಳಿಗೆ ತುಂಗಾ ನದಿಯ ನೀರು ನುಗ್ಗಿದ್ದು, ಚರಂಡಿಯಲ್ಲಿನ ನೀರು ಉಕ್ಕಿ ಹರಿಯುತ್ತಿವೆ. ತಗ್ಗು ಪ್ರದೇಶದಲ್ಲಿರುವ ಬಡಾವಣೆಯ ರಸ್ತೆಗಳು ಜಲಾವೃತಗೊಂಡಿವೆ.
ಹಳೇ ಶಿವಮೊಗ್ಗದಲ್ಲಿ ಮಳೆ ಭಾರಿ ಅನಾಹುತ ಉಂಟು ಮಾಡಿದೆ. ಟಿಪ್ಪು ನಗರದಲ್ಲಿ ಎರಡು ಮನೆಗಳ ಗೋಡೆಗಳು‌ ಕುಸಿದಿವೆ. ಹಲವೆಡೆ ಮನೆಯೊಳಗೆ ನೀರು ನುಗ್ಗಿದ್ದು, ಮಲಗುವುದಕ್ಕೂ ಜಾಗವಿಲ್ಲ.
ಎಲ್ಲೆಲ್ಲಿ ಅನಾಹುತ | ಕುಂಬಾರಗುಂಡಿ, ಬಿ.ಬಿ.ಸ್ಟ್ರೀಟ್, ಟಿಪ್ಪುನಗರ, ಭಾರತಿ‌‌ ಕಾಲೊನಿ, ಇಮಾಮ್ ಬಡಾ, ಶಾಂತಮ್ಮ‌ ಲೇಔಟ್, ಸೀಗೆಹಟ್ಟಿ, ಮುರಾದಾನಗರ, ಮಂಡಕ್ಕಿ‌ಭಟ್ಟಿ, ಹರಕೆರೆ, ಮಲ್ಲೇಶ್ವರನಗರ, ಗುಂಡಪ್ಪಶೆಡ್ ಗಳಲ್ಲಿ ರಸ್ತೆಯ ಮೇಲೆಲ್ಲ ನೀರು ನಿಂತಿದ್ದು, ಮನೆಯೊಳಗೆ ನೀರು ನುಗ್ಗಿದೆ.

FLOODಕೆಟ್ಟ ವಾಸನೆ | ಚರಂಡಿಯ ನೀರು ಉಕ್ಕಿ ಹರಿಯುತ್ತಿದ್ದು ರಸ್ತೆ ಇಡೀ ವಾಸನೆ ಇದೆ. ಮನೆಯ ಮುಂದೆ ಹಾಗೂ ಆವರಣದಲ್ಲೆಲ್ಲ‌ ನೀರು ತುಂಬಿಕೊಂಡಿದ್ದು, ವಾಹನಗಳು ಓಡಾಡುವ ಸ್ಥಿತಿ ಇಲ್ಲ. ರಾತ್ರಿ ಒಂದು ಗಂಟೆಯಾದರೂ ಜನ ಮಲಗಿಲ್ಲ. ಮಳೆಯ ಪ್ರಮಾಣವೇನೋ‌ ಇಳಿಕೆಯಾಗಿದೆ. ಆದರೂ ಮತ್ತೆಲ್ಲಿ ನೀರು ನುಗ್ಗುತ್ತವೋ ಎನ್ನುವ ಭಯದಲ್ಲಿ ಜನರಿದ್ದಾರೆ.
ಸಂಜೆ ಮೇಯರ್ ಸುನೀತಾ ಅಣ್ಣಪ್ಪ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಆದರೆ, ಯಾವುದೇ ರೀತಿಯ ಪರಿಹಾರ ಕಾರ್ಯಗಳನ್ನು ಕೈಗೊಂಡಿಲ್ಲ ಎನ್ನುವುದು ಸಾರ್ವಜನಿಕರ ಆರೋಪವಾಗಿದೆ.

https://www.suddikanaja.com/2021/07/23/heavy-rainfall-created-flood-in-shivamogga-district/

error: Content is protected !!