ಕುವೆಂಪು ವಿವಿ ಪರೀಕ್ಷಾಂಗ ಕುಲಸಚಿವರ ವರ್ಗಾವಣೆ, ಪಿ.ಜಿ., ಪಿಎಚ್.ಡಿ ಪಡೆದ ವಿವಿಯಲ್ಲೇ ಪರೀಕ್ಷಾಂಗ ಕುಲಸಚಿವರಾಗಿ ನಿಯೋಜನೆ!

 

 

ಸುದ್ದಿ ಕಣಜ.ಕಾಂ
ಶಿವಮೊಗ್ಗ: ಮೂಲತಃ ಚಿಕ್ಕಮಗಳೂರಿನವರಾದ ಪ್ರೊ.ಸಿ.ಎಂ. ತ್ಯಾಗರಾಜ್ ಅವರನ್ನು ಕುವೆಂಪು ವಿಶ್ವವಿದ್ಯಾಲಯದ ಪರೀಕ್ಷಾಂಗ ಕುಲಸಚಿವರಾಗಿ ನಿಯೋಜನೆಗೊಂಡಿದ್ದಾರೆ.

READ | ರಾಜಕೀಯ ಚದುರಂಗದಲ್ಲಿ ಗೆದ್ದಿದ್ದು ರಾಜಾಹುಲಿ, ಬೊಮ್ಮಾಯಿಗೇಕೆ ಸಿಎಂ ಗದ್ದುಗೆ ಸಿಕ್ತು ಗೊತ್ತಾ?

ಡಿಪ್ಲೋಮಾ ಇನ್ ಮಾರ್ಕೆಟಿಂಗ್ ಮ್ಯಾನೇಜ್ಮೆಂಟ್ ವಿಷಯದಲ್ಲಿ ಕುವೆಂಪು ವಿವಿಯಿಂದ ಸ್ನಾತಕೋತ್ತರ ಪದವಿಯಲ್ಲಿ ಮೊದಲ ರ‌್ಯಾಂಕ್ ಪಡೆದರು. ನಂತರ, ಇದೇ ವಿವಿಯಿಂದ ಪಿಎಚ್.ಡಿ ಕೂಡ ಪಡೆದರು.
ಶೈಕ್ಷಣಿಕವಾಗಿ ಹಲವು ಸಾಧನೆಗಳನ್ನು ಮಾಡಿರುವ ಇವರು ಮಲೇಷಿಯಾ, ಸಿಂಗಾಪುರ, ದುಬೈ ಮತ್ತು ಜಕಾರ್ತ್ ದೇಶಗಳಿಗೆ ಶೈಕ್ಷಣಿಕ ಪ್ರವಾಸ ಕೂಡ ಕೈಗೊಂಡಿದ್ದಾರೆ.

https://www.suddikanaja.com/2021/03/04/drdo-meeting-in-kuvempu-university/


IMG 20210728 WA0001ಬೆಳಗಾವಿಯ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ವ್ಯವಹಾರ ನಿರ್ವಹಣೆ ವಿಭಾಗದ ಪ್ರಾಧ್ಯಾಪಕರಾಗಿ ತ್ಯಾಗರಾಜ್ ಕಾರ್ಯನಿರ್ವಹಣೆ ಮಾಡಿದ್ದಾರೆ. ಸ್ಕೂಲ್ ಆಫ್‌ ಬಿಜಿನೆಸ್ ಆ್ಯಂಡ್ ಎಕಾನಾಮಿಕ್ಸ್ ನ ನಿರ್ದೇಶಕರಾಗಿಯೂ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಬೆಂಗಳೂರಿನ ಕರ್ನಾಟಕ ವೊಕೇಷನಲ್ ಟ್ರೈನಿಂಗ್ ಆ್ಯಂಡ್ ಸ್ಕಿಲ್ ಡೆವಲಪ್ಮೆಂಟ್ ಕಾರ್ಪೋರೇಷನ್ ನಲ್ಲಿ ಕಾರ್ಯನಿರ್ವಾಹಕ ನಿರ್ದೇಶಕರಾಗಿಯೂ ಕೆಲಸ ಮಾಡಿದ್ದಾರೆ. ಈಗ ತಾವು ಸ್ನಾತಕೋತ್ತರ ಓದಿದ ವಿವಿಯ ಪರೀಕ್ಷಾಂಗದ ಜವಾಬ್ದಾರಿ ಹೊರಲಿದ್ದಾರೆ.
ಮಾತೃ ವಿವಿಗೆ ಕಣ್ಣನ್ | ಪ್ರಸ್ತುತ ಕುವೆಂಪು ವಿವಿ ಪರೀಕ್ಷಾಂಗ ಕುಲಸಚಿವರಾಗಿ ಕಾರ್ಯನಿರ್ವಹಿಸಿದ ಪ್ರೊ.ಪಿ.ಕಣ್ಣನ್ ಅವರು ತಮ್ಮ‌ ಮಾತೃ ವಿವಿ ಆಗಿರುವ ಅಕ್ಕಮಹಾದೇವಿ ವಿವಿಗೆ ವರ್ಗಾವಣೆಗೊಂಡಿದ್ದಾರೆ.

https://www.suddikanaja.com/2021/03/16/maintenance-of-ram-mandir-is-next-challenge-said-pejavara-shri/

error: Content is protected !!