ಸುದ್ದಿ ಕಣಜ.ಕಾಂ
ಶಿವಮೊಗ್ಗ: ರೈಲ್ವೆ ಪೊಲೀಸರ ಈ ವಿನೂತನ ಹೆಜ್ಜೆ ಪ್ರಯಾಣಿಕರಲ್ಲಿ ಭರವಸೆ ಮೂಡಿಸಿದೆ. ಜನಸ್ನೇಹಿ ರೈಲ್ವೆ ಪೊಲೀಸ್ ವಾತಾವರಣ ಸೃಷ್ಟಿಸುವಲ್ಲಿ ಸಹಕಾರಿಯಾಗಿದೆ.
ಶಿವಮೊಗ್ಗದಿಂದ ರೈಲು ಮೂಲಕ ಪ್ರಯಾಣಿಸುವ ಪ್ರಯಾಣಿಕರ ಸುರಕ್ಷತೆ ಹಾಗೂ ತುರ್ತು ಸ್ಪಂದನೆಯ ದೃಷ್ಟಿಯಿಂದ ‘ಸದಾ ನಿಮ್ಮ ಸೇವೆಯಲ್ಲಿ ರೈಲ್ವೆ ಪೊಲೀಸರು’ ಹೆಸರಿನ ವಿಸಿಟಿಂಗ್ ಕಾರ್ಡ್ ಆರಂಭಿಸಲಾಗಿದೆ.
https://www.suddikanaja.com/2021/06/02/police-shock-to-public-who-came-for-walking/
ರೈಲ್ವೆ ಪ್ರಯಾಣಿಕರ ಅನುಕೂಲಕ್ಕಾಗಿ ಶಿವಮೊಗ್ಗ ರೈಲ್ವೆ ಪೊಲೀಸರು ವಿಸಿಟಿಂಗ್ ಕಾರ್ಡ್ ಗಳನ್ನು ಪರಿಚಯಿಸಿದೆ. ಈ ಹಿಂದೆ ಶಿವಮೊಗ್ಗಕ್ಕೆ ಆಗಮಿಸಿದ್ದ ಹೆಚ್ಚುವರಿ ರೈಲ್ವೆ ಪೊಲೀಸ್ ಮಹಾನಿರ್ದೇಶಕ ಭಾಸ್ಕರ್ ರಾವ್ ಅವರ ಸೂಚನೆಯ ಮೇರೆಗೆ ಈ ಕ್ರಮಕೈಗೊಳ್ಳಲಾಗಿದೆ.
ಏನಿದು ಕಾರ್ಡ್, ಹೇಗೆ ಕಾರ್ಯನಿರ್ವಹಣೆ?
ಶಿವಮೊಗ್ಗ ರೈಲ್ವೆ ಪೊಲೀಸ್ ಠಾಣೆಯಲ್ಲಿ ಒಟ್ಟು 35 ಸಿಬ್ಬಂದಿ ಇದ್ದಾರೆ. ಅವರಿಗೆ ತಲಾ 100 ಕಾರ್ಡ್ ಗಳನ್ನು ವಿತರಿಸಲಾಗಿದೆ. ಅವರು ರೈಲ್ವೆ ಪ್ರಯಾಣಿಕರಿಗೆ ಭೇಟಿಯಾಗಿ ಕಾರ್ಡ್ ಪ್ರಾಮುಖ್ಯತೆ ತಿಳಿಸಿ ಅವುಗಳನ್ನು ವಿತರಿಸುತ್ತಿದ್ದಾರೆ. ಅದರ ಮೇಲೆ ಸಿಬ್ಬಂದಿಯ ಮೊಬೈಲ್ ನಂಬರ್, ಕಂಟ್ರೋಲ್ ರೂಮ್ ಸಂಖ್ಯೆ, ರೈಲ್ವೆ ಪೊಲೀಸ್ ಠಾಣೆ ಸಂಖ್ಯೆ ಮುದ್ರಣ ಮಾಡಲಾಗಿದೆ. ಪ್ರಯಾಣದ ವೇಳೆ ಯಾವುದೇ ರೀತಿಯ ಸಮಸ್ಯೆ ಎದುರಾದರೂ ತಕ್ಷಣ ವಿಸಿಟಿಂಗ್ ಕಾರ್ಡ್ ಮೇಲಿರುವ ಸಂಖ್ಯೆಗೆ ಕರೆ ಮಾಡಿದರೆ ಪೊಲೀಸರು ಅವರ ಸಹಾಯಕ್ಕೆ ಬರಲಿದ್ದಾರೆ.
ವಿಸಿಟಿಂಗ್ ಕಾರ್ಡ್ ನಲ್ಲಿರುವ ಸಂಖ್ಯೆಗಳಿಗೆ ಬರೀ ಪುಂಡ ಪೋಕರಿಗಳು ಚುಡಾಯಿಸಿದರೆ ಮಾತ್ರವಲ್ಲದೇ ಇನ್ನೂ ಹಲವು ಬಗೆಯ ತೊಂದರೆಗಳನ್ನು ತೋಡಿಕೊಳ್ಳಲು ಅವಕಾಶವಿದೆ. ಪ್ರಯಾಣದ ವೇಳೆ, ಕಳ್ಳರ ಕಾಟ, ಸ್ಪಚ್ಛತೆಯ ಕೊರತೆ, ಆಸನ, ಶೌಚ ಗೃಹ ಸೇರಿದಂತೆ ಇತ್ಯಾದಿ ಸಮಸ್ಯೆಗಳ ಬಗ್ಗೆ ದೂರು ನೀಡಬಹುದು.
ಈಗ ಬೇರೆ ರೈಲ್ವೆ ಪೊಲೀಸರಿಂದಲೂ ಕ್ರಮ
ಶಿವಮೊಗ್ಗ ಸೇರಿದಂತೆ ಬೆಂಗಳೂರು, ಅರಸೀಕೆರೆ, ಬೆಂಗಳೂರು, ದಾವಣಗೆರೆ ಹೀಗೆ ರಾಜ್ಯದ ವಿವಿಧ ರೈಲ್ವೆ ಪೊಲೀಸರು ವಿಸಿಟಿಂಗ್ ಕಾರ್ಡ್ ಮೂಲಕ ಪ್ರಯಾಣಿಕರೊಂದಿಗೆ ತಾವಿದ್ದೇವೆ ಎಂಬ ಭರವಸೆ ಮೂಡಿಸುವ ಕೆಲಸ ಮಾಡುತ್ತಿದ್ದಾರೆ.
https://www.suddikanaja.com/2021/04/20/police-department-distributed-mask-in-publick-place/