‘ಸಿಗಂದೂರು ಚೌಡೇಶ್ವರಿ ದೇವಸ್ಥಾನ ವಿಚಾರಕ್ಕೆ ಕೈಹಾಕಿದ ಒಂದು‌ ವಿಕೆಟ್ ಹೋಗಿದೆ, ಇನ್ನೂ ಮೂರು‌ ಹೋಗಬೇಕಿದೆ’

 

 

ಸುದ್ದಿ ಕಣಜ.ಕಾಂ
ಶಿವಮೊಗ್ಗ: ಸಿಗಂದೂರು‌ ಚೌಡೇಶ್ವರಿ ದೇವಸ್ಥಾನದ ವಿಚಾರಕ್ಕೆ ಕೈಹಾಕಿದ ಒಂದು ವಿಕೆಟ್ ಹೋಗಿದೆ. ಇನ್ನೂ ಮೂರು ಹೋಗಬೇಕಿದೆ ಎಂದು ಮಾಜಿ‌ ಶಾಸಕ ಬೇಳೂರು ಗೋಪಾಲಕೃಷ್ಣ ಹೇಳಿದರು.

https://www.suddikanaja.com/2021/07/14/swamiji-prophesied-about-state-politics/

ನಗರದ‌ ಈಡಿಗರ ಭವನದಲ್ಲಿ ಭಾನುವಾರ ಆಯೋಜಿಸಿದ್ದ ಸಮುದಾಯದ ಬಂಧುಗಳ ಸಮಾಲೋಚನಾ ಸಭೆಯಲ್ಲಿ ಮಾತನಾಡಿದರು.
ಸಿಗಂದೂರು ಚೌಡೇಶ್ವರಿ ದೇವಸ್ಥಾನವನ್ನು‌ ಮುಜರಾಯಿ ಇಲಾಖೆಗೆ ವಹಿಸಬೇಕು ಎಂಬ ನಿರ್ಣಯ ಕೈಗೊಂಡಿದ್ದರ ಫಲವಾಗಿಯೇ ಹೀಗಾಗಿದೆ ಎಂದು ಅಭಿಪ್ರಾಯಪಟ್ಟರು.
ಮುಜರಾಯಿಗೆ ಸೇರಿಸಲು ಬಿಡುವುದಿಲ್ಲ‌
ಸಾನ್ನಿಧ್ಯ ವಹಿಸಿ ಆಶಿರ್ವಚನ ನೀಡಿದ ಸೋಲೂರು ಈಡಿಗ ಮಹಾಸಂಸ್ಥಾನದ ನಿಯೋಜಿತ ಪೀಠಾಧಿಪತಿ ಶ್ರೀ ವಿಖ್ಯಾತಾನಂದ ಸ್ವಾಮೀಜಿ, ಸಿಗಂದೂರು ದೇವಸ್ಥಾನವನ್ನು ಯಾವ ಕಾರಣಕ್ಕೂ ಸರಕಾರ ಮುಜರಾಯಿ ಇಲಾಖೆಗೆ ಸೇರಿಸಲು ಬಿಡುವುದಿಲ್ಲ. ಇದಕ್ಕೂ ಒಂದು ಪರಿಹಾರ ಸೂತ್ರವನ್ನು ಕಂಡುಕೊಳ್ಳಲಾಗುವುದು ಎಂದರು.
ಸಮುದಾಯದ ಧಾರ್ಮಿಕ ಕೇಂದ್ರದ ಬಗ್ಗೆ ಈಡಿಗ ಸಮುದಾಯಕ್ಕೆ ಇರುವ ನಂಬಿಕೆಗೆ ಸರಕಾರ ಗೌರವ ಕೊಡಬೇಕಾಗುತ್ತದೆ ಎಂದು ಹೇಳಿದರು.

https://www.suddikanaja.com/2021/03/31/ks-eshwarappa-wrote-latter-against-yadiyurappa-to-bjp-leaders/

ಯಾರೇ ಅನ್ಯಾಯ ಮಾಡಿದರೂ ತಕ್ಕ ಫಲ ಉಣ್ಣುತ್ತಾರೆ
ಶ್ರೀ ಕ್ಷೇತ್ರ ಸಿಗಂದೂರು ಧರ್ಮದರ್ಶಿ ಡಾ.ರಾಮಪ್ಪ ಮಾತನಾಡಿ, ಶಕ್ತಿವಂತೆ ದೇವತೆಯ ವಿಚಾರದಲ್ಲಿ ಅನ್ಯಾಯದ ಕೆಲಸ ಯಾರೇ ಮಾಡಿದರೂ ತಕ್ಕ ಫಲ ಉಣ್ಣುತ್ತಾರೆ. ಸರಕಾರ ಮುಜರಾಯಿ ಇಲಾಖೆಗೆ ಸೇರಿಸುವ ಪ್ರಕ್ರಿಯೆ ಮಾಡುತ್ತಿದ್ದರೆ ನಮ್ಮದೇ ಸಮುದಾಯದ ಸಚಿವರು ಮತ್ತು ಶಾಸಕರು ಸುಮ್ಮನೆ ಇರುವುದು ದುರಂತವೇ ಸರಿ ಎಂದು ಹೇಳಿದರು.
ಜಿಲ್ಲಾ ಈಡಿಗರ ಸಂಘದ ಅಧ್ಯಕ್ಷ ಶ್ರೀಧರ್‌ ಹುಲ್ತಿಕೊಪ್ಪ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಕಲಗೋಡು ರತ್ನಾಕರ್‌, ಮಾಜಿ ಸದಸ್ಯ ಬಂಡಿ ರಾಮಚಂದ್ರ, ರಾಜ್ಯ ಬಿಲ್ಲವರ ಸಂಘದ ಅಧ್ಯಕ್ಷ ವೇದ್ ಕುಮಾರ್‌, ಈಡಿಗ ಸಂಘದ ಯುವ ಘಟಕದ ದುಷ್ಯಂತ್‌, ಜಿಲ್ಲಾ ಬಿಲ್ಲವ ಸಂಘದ ಅಧ್ಯಕ್ಷ ಭುಜಂಗಯ್ಯ, ಮಹಿಳಾ ಸಂಘದ ಅಧ್ಯಕ್ಷೆ ಗೀತಾಂಜಲಿ ದತ್ತಾತ್ರೆಯ, ಡಾ.ರಾಜನಂದಿನಿ ಕಾಗೋಡು, ಸುರೇಶ್‌ ಬಾಳೇಗುಂಡಿ, ಪರಶುರಾಮಪ್ಪ, ಅಜ್ಜಪ್ಪ, ಪ್ರವೀಣ ಹಿರೇಇಡಗೋಡು, ನಾಗರಾಜ್‌ ಕೈಸೋಡಿ, ಕಲ್ಲಪ್ಪ ಇತರರಿದ್ದರು.

https://www.suddikanaja.com/2020/12/17/ediga-community-demand-for-separate-development-corporation/

error: Content is protected !!