ಶಿವಮೊಗ್ಗದಲ್ಲಿ‌ ಮಕ್ಕಳ‌ ಮೇಲೆ ನಡೆದ ಲೈಂಗಿಕ ದೌರ್ಜನ್ಯಗಳ ಸಂಖ್ಯೆ ಎಷ್ಟು ಗೊತ್ತಾ, ಅದರಲ್ಲಿ ಎಷ್ಟು ಮಂದಿಗೆ ಶಿಕ್ಷೆಯಾಗಿದೆ?

 

 

ಸುದ್ದಿ‌ ಕಣಜ.ಕಾಂ | SHIVAMOGGA | CRIME
ಶಿವಮೊಗ್ಗ: ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣ ಅಡಿ 2012ರ ಮಾರ್ಚ್ ನಿಂದ 2021 ರ ವರೆಗೆ ಒಟ್ಟು 780 ಪ್ರಕರಣ ದಾಖಲಾಗಿವೆ ಎಂದು ಜಿಲ್ಲಾ ಪ್ರಭಾರ ನಿರೂಪಣಾಧಿಕಾರಿ ಸುರೇಶ್ ಹೇಳಿದರು.

https://www.suddikanaja.com/2021/07/03/sexual-harassment-on-girl/

ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಶನಿವಾರ ಏರ್ಪಡಿಸಿದ್ದ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಹಾಗೂ ವಿವಿಧ ಯೋಜನೆಗಳ ಸಮಿತಿ ಸಭೆಯಲ್ಲಿ ಅಧಿಕಾರಿಗಳಿಗೆ ಮಾಹಿತಿ ನೀಡಿದರು.
ದಾಖಲಾದ ಒಟ್ಟು ಪ್ರಕರಣಗಳಲ್ಲಿ 309 ಖುಲಾಸೆಗೊಂಡಿವೆ. 30 ಪ್ರಕರಣಗಳಲ್ಲಿ ಶಿಕ್ಷೆ ನೀಡಿದ್ದು 38 ತನಿಖೆ ಹಂತದಲ್ಲಿವೆ. 351 ಪ್ರಕರಣ ನ್ಯಾಯಾಲಯ ವಿಚಾರಣೆಯಲ್ಲಿದೆ. 52 ಪ್ರಕರಣ ಚಾರ್ಜ್‌ ಶೀಟ್ ಹಂತದಲ್ಲಿದೆ ಎಂದರು.
ಎಡಿಸಿ‌ ನಾಗೇಂದ್ರ ಹೊನ್ನಳ್ಳಿ ಹೇಳಿದ್ದೇನು?
ಸಭೆಯ‌‌ ಅಧ್ಯಕ್ಷತೆ ವಹಿಸಿ ಮಾತನಾಡಿದ‌ ಅಪರ ಜಿಲ್ಲಾಧಿಕಾರಿ‌ ನಾಗೇಂದ್ರ ಹೊನ್ನಳ್ಳಿ, ಶಿವಮೊಗ್ಗ ನಗರದ ಕೊಳಚೆ ಪ್ರದೇಶಗಳಲ್ಲಿ ಬಾಲ್ಯ ವಿವಾಹ ಸಂಖ್ಯೆ ಹೆಚ್ಚುತ್ತಿದೆ.‌ ಇದರ ಬಗ್ಗೆ ಕೆಲವು ಸಂಘಟನೆಗಳು ತಿಳಿಸಿದ್ದು, ಅಧಿಕಾರಿಗಳು ಇಂತಹ ಪ್ರದೇಶಗಳಲ್ಲಿ ಹೆಚ್ಚಿನ ಗಮನ ಹರಿಸಬೇಕು ಎಂದು ತಿಳಿಸಿದರು.

READ | ರೈತರ ಮಕ್ಕಳ ಉನ್ನತ ಶಿಕ್ಷಣಕ್ಕೆ ಸರ್ಕಾರ ಬಂಪರ್ ಕೊಡುಗೆ, ಯಾರಿಗೆಷ್ಟು ಸ್ಕಾಲರ್‍ಶಿಪ್, ಇಲ್ಲಿದೆ ಪೂರ್ಣ ವಿವರ

ಕರ್ನಾಟಕ ರಾಜ್ಯ ಮಕ್ಕಳ ರಕ್ಷಣಾ ಆಯೋಗದ ಸದಸ್ಯರಾದ ಶಂಕರಪ್ಪ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಅಧಿಕಾರಿ ಗಂಗಾಬಾಯಿ ಮಾತನಾಡಿದರು. ಸಭೆಯಲ್ಲಿ ಡಿಎಚ್‍.ಒ ಡಾ.ರಾಜೇಶ್ ಸುರಗಿಹಳ್ಳಿ, ಎಲ್ಲಾ ತಾಲ್ಲೂಕುಗಳ ಸಿಡಿಪಿಓ, ವಿವಿಧ ಯೋಜನೆಗಳ ಅನುಷ್ಠಾನ ಅಧಿಕಾರಿಗಳು, ಜಿಲ್ಲಾ ಪಂಚಾಯತ್ ಅಧಿಕಾರಿಗಳು, ಮಕ್ಕಳ ಕಲ್ಯಾಣ ಸಮಿತಿ ಪದಾಧಿಕಾರಿಗಳು, ಪಾಲನಾ ಸಂಸ್ಥೆ ಮತ್ತು ಸ್ವಾಧಾರ ಗೃಹಗಳ ಸಿಬ್ಬಂದಿಗಳು ಹಾಜರಿದ್ದರು.

https://www.suddikanaja.com/2021/06/02/covid-cases-raise-in-bhadravathi-and-shivamogga-taluk/

error: Content is protected !!