ಮನೆಗೆ ನುಗ್ಗಿ ಚಾಕು ಇರಿದು ದರೋಡೆ ಮಾಡಿದ್ದ ಆರೋಪಿಗಳು ಅರೆಸ್ಟ್, ಕೃತ್ಯ ಎಸಗಿದವರಲ್ಲಿದ್ದಾರೆ ಹೊರ ಜಿಲ್ಲೆಯವರು, ಬಂಧಿತರಲ್ಲಿ ಸಿಕ್ತು ಲಕ್ಷಾಂತರ ಹಣ

 

 

ಸುದ್ದಿ ಕಣಜ.ಕಾಂ | TALUK | CRIME
ಶಿವಮೊಗ್ಗ: ತಾಲೂಕಿನ ಚಿಕ್ಕಮರಡಿ ಗ್ರಾಮದಲ್ಲಿ ಮನೆಗೆ ನುಗ್ಗಿ ಚಾಕುವಿನಿಂದ ಇರಿದು ದರೋಡೆ ಮಾಡಿದ್ದ ಆರೋಪಿಗಳನ್ನು ಭಾನುವಾರ ಬಂಧಿಸಲಾಗಿದೆ.

https://www.suddikanaja.com/2021/08/05/attack-on-a-man-and-dacoit-in-shivamogga/

ಕಾಶಿಪುರದ ಹರಿಪ್ರಸಾದ್ ಅಲಿಯಾಸ್ ಅವಿನಾಶ್ (30), ಕೋಣೆ ಹೊಸೂರಿನ ಲೋಹಿತ್ ಶೆಟ್ಟಿ(32), ದಾವಣಗೆರೆ ಜಿಲ್ಲೆಯ ಸಂತೆಬೆನ್ನೂರಿನ ಧರ್ಮರಾಜ್(52), ಶಿವಮೊಗ್ಗದ ವಿನಾಯಕ ಸರ್ಕಲ್ ನಿವಾಸಿ ಕೆ.ಎಸ್. ನಾಗರಾಜ್ (19), ಕೊಪ್ಪಳದ ಭಾನುಪುರ ನಿವಾಸಿ ವೀರಯ್ಯ(25) ಎಂಬುವವರನ್ನು ಬಂಧಿಸಲಾಗಿದೆ.
ಆರೋಪಿಗಳ ಬಳಿ‌ ಸಿಕ್ತು ಲಕ್ಷಾಂತರ ಮೌಲ್ಯದ ಸಾಮಗ್ರಿ
ಬಂಧಿತ ಆರೋಪಿಗಳ ಬಳಿ ಲಕ್ಷಾಂತರ ರೂಪಾಯಿ ಮೌಲ್ಯದ ಸಾಮಗ್ರಿಗಳನ್ನು ಕಳವು ಮಾಡಲಾಗಿದೆ. 1 ದ್ವಿಚಕ್ರ ವಾಹನ, 1 ವ್ಯಾಗನಾರ್ ಕಾರು, 3 ಲಕ್ಷ ರೂಪಾಯಿ ನಗದು, ಅಂದಾಜು 5,70,700 ರೂಪಾಯಿ ಮೌಲ್ಯದ ಒಟ್ಟು 120 ಗ್ರಾಂ ಚಿನ್ನದ ಆಭರಣ ಮತ್ತು 340 ಗ್ರಾಂ ಬೆಳ್ಳಿಯ ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ.

https://www.suddikanaja.com/2021/06/08/accused-arrested-2/

ಅಂದು‌ ಚಿಕ್ಕಮರಡಿಯಲ್ಲಿ ನಡೆದಿದ್ದೇನು?
ಆಗಸ್ಟ್ 3ರಂದು ಸಂಜೆ ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ಚಿಕ್ಕಮರಡಿ ಗ್ರಾಮದ ಜಯ್ಯಣ್ಣ ಅವರ ವಾಸದ ಮನೆಗೆ ನಾಲ್ವರು ಅಪರಿಚಿತರು ನುಗ್ಗಿ, ಮನೆಯಲ್ಲಿದ್ದವರಿಗೆ ಬೆದರಿಕೆ ಹಾಕಿ ಮಾಂಗಲ್ಯ ಸರವನ್ನು ಕಿತ್ತುಕೊಂಡಿದ್ದರು.
ಮನೆಯ ಬೀರುವಿನಲ್ಲಿದ್ದ ನಗದು ಹಣ, ಬಂಗಾರ ಮತ್ತು ಬೆಳ್ಳಿ ಸಾಮಗ್ರಿಗಳನ್ನು ದರೋಡೆ ಮಾಡಿದ್ದು, ಮೇಘನ ಎಂಬುವವರಿಗೆ ಚಾಕುವಿನಿಂದ ಚುಚ್ಚಿ ಗಾಯಪಡಿಸಿರುವುದಾಗಿ ನೀಡಿದ ದೂರಿನ ಮೇರೆಗೆ ಐಪಿಸಿ ಕಲಂ 448, 397 ಸಹಿತ 34 ಅನ್ವಯ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿತ್ತು.
ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆ ಪಿಐ, ಪಿ.ಎಸ್.ಐ, ಸಿಬ್ಬಂದಿಯ ತಂಡವು ಆರೋಪಿಗಳನ್ನು ಬಂಧಿಸಿದ್ದಾರೆ.

https://www.suddikanaja.com/2021/01/28/four-person-arrested-in-shivamogga/

 

error: Content is protected !!