ನಾಮಫಲಕ ಅಳವಡಿಸಲು ಹೋದ ಬಿಜೆಪಿ ಮುಖಂಡರಿಗೆ ಕಾದಿತ್ತು ಶಾಕ್, ಬೂತ್ ಅಧ್ಯಕ್ಷರ ರಾಜೀನಾಮೆಗೇನು ಕಾರಣ?

 

 

ಸುದ್ದಿ‌ ಕಣಜ.ಕಾಂ | CITY | POLITICS
ಶಿವಮೊಗ್ಗ: ಮಹಾನಗರ ಪಾಲಿಕೆಯ 26ನೇ ವಾರ್ಡ್‌ 199ನೇ ಬೂತ್‌ ಅಧ್ಯಕ್ಷ ಎಲ್.ಶೇಖರ್ ಅವರು ಬಿಜೆಪಿಗೆ ಬುಧವಾರ ರಾಜೀನಾಮೆ ನೀಡಿದ್ದಾರೆ.
ನಾಮಫಲಕ ಅಭಿಯಾನದಿಂದಾಗಿ ಬಿಜೆಪಿ‌ ಮುಖಂಡರು ಶೇಖರ್ ಮನೆಗೆ ಬಂದಿದ್ದಾರೆ. ಆಗ ನಾಮಪತ್ರ ಸ್ವೀಕರಿಸದೇ ರಾಜೀನಾಮೆ ಪತ್ರವನ್ನು ನೀಡಿದ್ದಾರೆ.
ಅಶೋಕ ನಗರ ವಾರ್ಡ್‌ ವ್ಯಾಪ್ತಿಯ ಬಿಜೆಪಿ ಬೂತ್‌ ಅಧ್ಯಕ್ಷ ಎಲ್‌.ಶೇಖರ್‌ ಅವರ ಮನೆಗೆ ಬಂದಾಗ ಅವರು ವಿಸ್ತೃತವಾಗಿ ಕೈಬರಹದಲ್ಲಿ ಬರೆದಿರುವ ರಾಜೀನಾಮೆ ಪತ್ರವನ್ನು ನೀಡಿದ್ದಾರೆ. ಪಕ್ಷ ಬಿಡುವುದರ ಹಿಂದಿನ ಕಾಎಣಗಳನ್ನು ವಿವರಿಸಿದ್ದಾರೆ.

ಪತ್ರದಲ್ಲಿ ತಿಳಿಸಿರುವ ಕಾರಣಗಳೇನು?

  • ಬಿಜೆಪಿ ಅಧಿಕಾರಕ್ಕೆ ಬರುವುದಕ್ಕೂ ಮುನ್ನ ಅಭಿವೃದ್ಧಿ ಮಾಡುವುದಾಗಿ ತಿಳಿಸಿದ್ದರು. ಆದರೆ, ಸಮಾಜದಲ್ಲಿ ಅದಕ್ಕೆ ವಿರುದ್ಧವಾದ ಬೆಳವಣಿಗೆಗಳಾಗುತ್ತಿವೆ.
  • ಅಡುಗೆ ಅನಿಲ, ವಿದ್ಯುತ್‌ ಪೆಟ್ರೋಲ್‌, ಡಿಸೇಲ್‌ ಬೆಲೆ ನಿರಂತರ ಏರಿಕೆ ಆಗುತ್ತಿರುವ ಕಾರಣದಿಂದ ಜನ ಸಂಕಷ್ಟಕ್ಕೆ ಸಿಲುಕಿದ್ದಾರೆ.

error: Content is protected !!