ಭದ್ರಾವತಿಯಲ್ಲಿ ಸ್ಯಾಚೆಟ್ ಗಳಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದವ ಅರೆಸ್ಟ್

 

 

ಸುದ್ದಿ ಕಣಜ.ಕಾಂ | TALUK | CRIME
ಭದ್ರಾವತಿ: ತಾಲ್ಲೂಕಿನ ಬಾರಂದೂರು ಕ್ರಾಸ್ ಬೈಪಾಸ್ ಮುಖ್ಯ ರಸ್ತೆಯ ಬಳಿ ಗಾಂಜಾ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಅಬಕಾರಿ ಪೊಲೀಸರು ಬಂಧಿಸಿದ್ದಾರೆ.
ಇರ್ಫಾನ್ ಬಂಧಿತ ಆರೋಪಿ. ಈತನ ಬಳಿ ಹೂವು ಕಾಯಿ ಬೀಜಗಳಿಂದ ಕೂಡಿದ ಒಣ ಗಾಂಜಾದ ಒಟ್ಟು 116 ಗ್ರಾಂ ಸ್ಯಾಚೇಟ್, ನಗದು ಹಣ ವಶಕ್ಕೆ ಪಡೆಯಲಾಗಿದೆ. ಆರೋಪಿ ವಿರುದ್ಧ ಎನ್.ಡಿ.ಪಿ.ಎಸ್ ಕಾಯ್ದೆ ಅನ್ವಯ ಪ್ರಕರ‌ಣ ದಾಖಲಾಗಿದೆ.
ಅಧಿಕಾರಿಗಳ ನೇತೃತ್ವದಲ್ಲಿ ಕಾರ್ಯಾಚರಣೆ
ಶಿವಮೊಗ್ಗದ ಅಬಕಾರಿ ಉಪ ಆಯುಕ್ತ ಕ್ಯಾಪ್ಟನ್ ಅಜಿತ್ ಕುಮಾರ್ ನೇತೃತ್ವದಲ್ಲಿ ಅಬಕಾರಿ ನಿರೀಕ್ಷಕ, ಸಿಬ್ಬಂದಿ‌, ಭದ್ರಾವತಿ ವಲಯದ ಅಬಕಾರಿ ನಿರೀಕ್ಷಕ ಸುನೀಲ್ ಕಲ್ಲೂರ, ಉಪ ನಿರೀಕ್ಷಕ ಕೆ.ಶಿವರಾಜ್, ಮುಖ್ಯಪೇದೆ ಸುಧಾಮಣಿ, ಪೇದೆಯಾದ ಜ್ಞಾನೇಶ್, ಶಿವಮೂರ್ತಿ, ಮಲ್ಲಿಕಾರ್ಜನ್, ಶಶಿಧರ ದಾಳಿ‌ ನಡೆಸಿದ್ದಾರೆ.

error: Content is protected !!