ತುಂಗಾ ಹೊಳೆಗೆ ಹಾರಿದ ಮಹಿಳೆಯ ಶವ ಪತ್ತೆ

 

 

ಸುದ್ದಿ ಕಣಜ.ಕಾಂ | CITY | CRIME
ಶಿವಮೊಗ್ಗ: ತುಂಗಾ ಹೊಳೆಗೆ ಹಾರಿ ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆದರೆ, ಇದುವರೆಗೆ ಆಕೆಯ ಗುರುತು ಪತ್ತೆಯಾಗಿಲ್ಲ.

tunga river suicide 1ತುಂಗಾ ನದಿಯ ಬೈಪಾಸ್ ಬ್ರಿಡ್ಜ್ ನಿಂದ ಗುರುವಾರ ಸಂಜೆ 5.30ರ ಸುಮಾರಿಗೆ ಮಹಿಳೆಯು ನದಿಗೆ ಹಾರಿದ್ದಾರೆ. ನಂತರ, ಅಗ್ನಿಶಾಮಕ ಇಲಾಖೆ ಸಿಬ್ಬಂದಿ ಆರ್.ಎಫ್.ಒ. ಲಕ್ಕಪ್ಪ, ಡಿಎಫ್.ಒ ಅಶೋಕ್ ಕುಮಾರ್, ಠಾಣಾಧಿಕಾರಿ ಪ್ರವೀಣ್ ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆ ನಡೆಸಿದ್ದಾರೆ.

ಪೊದೆಯಲ್ಲಿ ಸಿಕ್ಕಿತು ಶವ
40 ವರ್ಷದ ಮಹಿಳೆಯ ಶವವು ಪೊದೆಯಲ್ಲಿ ಸಿಲುಕಿದ್ದು, ಅದನ್ನು ಹೊರ ತೆಗೆಯಲಾಗಿದೆ. ಆದರೆ, ಗುರುತು ಪತ್ತೆಯಾಗಿಲ್ಲ. ಶಶವು ಮೆಗ್ಗಾನ್ ಆಸ್ಪತ್ರೆಯಲ್ಲಿದೆ. ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

error: Content is protected !!