GOOD NEWS | ಶಿವಮೊಗ್ಗದಲ್ಲಿ‌ ಶುರುವಾಗಲಿದೆ ಹೊಸ ಎಫ್.ಎಂ.‌ರೇಡಿಯೋ, ಯಾವ ಫ್ರಿಕ್ವೆನ್ಸಿಯಲ್ಲಿ ಲಭ್ಯ?

 

 

ಸುದ್ದಿ ಕಣಜ.ಕಾಂ | DISTRICT | FM RADIO
ಶಿವಮೊಗ್ಗ: ಜಿಲ್ಲೆಯಲ್ಲಿ ಹೊಸದೊಂದು ಎಫ್.ಎಂ. ರೇಡಿಯೋ ಕೇಂದ್ರವನ್ನು ಕೊಡಚಾದ್ರಿ ಇಂಟಿಗ್ರೇಟೆಡ್ ಡೆವಲಪ್ ಮೆಂಟ್ ಸೊಸೈಟಿ (ಕಿಡ್ಸ್) ಸಂಸ್ಥೆ ಸ್ಥಾಪಿಸುತ್ತಿದೆ ಎಂದು ಸಂಸ್ಥೆಯ ಕಾರ್ಯದರ್ಶಿ ಜಿ.ಎಲ್.ಜನಾರ್ಧನ್ ಹೇಳಿದರು.

https://www.suddikanaja.com/2021/07/01/house-facility/

ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿ, ರೇಡಿಯೋ ಕೇಂದ್ರ ಸ್ಥಾಪಿಸಲು ಅನುಮತಿ ಸಿಕ್ಕಿದೆ. 90.8 ಎಂ.ಎಚ್. ಕಂಪನಾಂಕ(ಫ್ರಿಕ್ವೆನ್ಸಿ)ದಲ್ಲಿ ಪ್ರಸಾರ ಆಗಲಿದೆ. ಈಗಾಗಲೇ ಕೃಷಿ ಕಾಲೇಜು ಹತ್ತಿರ ಎಫ್‌.ಎಂ. ಕೇಂದ್ರ ಆರಂಭವಾಗಿ ಮುಂದಿನ ಆರು ತಿಂಗಳಲ್ಲಿ ಪ್ರಸಾರವಾಗಲಿದೆ ಎಂದು ಹೇಳಿದರು.
images 18 40-50 ಕಿ.ಮೀ.ವರೆಗೆ ಎಫ್.ಎಂ.ವ್ಯಾಪ್ತಿ
40-50 ಕಿಲೋ ಮೀಟರ್ ವ್ಯಾಪ್ತಿಯವರೆಗೆ ಎಫ್‌ಎಂ ಕೆಲಸ ಮಾಡಲಿದೆ. ಜಿಲ್ಲೆಯಲ್ಲಿರುವ ಪ್ರತಿಭೆಗಳನ್ನು ಗುರುತಿಸಿ ಅವರಿಗೆ ಅವಕಾಶ ನೀಡುವುದು ಎಫ್.ಎಂ ಉದ್ದೇಶವಾಗಿದೆ. ಪ್ರಮುಖವಾಗಿ, ಶಿಕ್ಷಣಕ್ಕೆ ಆದ್ಯತೆ ನೀಡುವುದು ನಮ್ಮ ಗುರಿಯಾಗಿದೆ. ಇದಕ್ಕಾಗಿ ವ್ಯಾಪ್ತಿಯ ಎಲ್ಲ ಶಾಲೆ, ಶಿಕ್ಷಣ ಸಂಸ್ಥೆಗಳನ್ನು ಸದಸ್ಯರನ್ನಾಗಿ ಮಾಡಲಾಗುವುದು. ಸ್ಥಳೀಯ ಸಂಸ್ಥೆಗಳ ಅಭಿವೃದ್ಧಿ ಕಾರ್ಯಕ್ರಮಗಳನ್ನು ರೂಪಿಸಲಾಗುವುದು.

READ | ಬಾಲಕಿಯನ್ನು ಚುಡಾಯಿಸಿದವರಿಗೆ ಬುದ್ಧಿ ಹೇಳಿದಕ್ಕೆ ಪರಿಸರ ಪ್ರೇಮಿಯ ಮೇಲೆ ನಡೀತು ಹಲ್ಲೆ

ಸರ್ಕಾರದ ಸುಮಾರು 27 ಇಲಾಖೆಗಳನ್ನು‌ ಒಳಗೊಂಡಂತೆ ಕಾರ್ಯಕ್ರಮ ರೂಪಿಸಿ ಜನರಿಗೆ ತಿಳಿಸಲಾಗುವುದು. ಎಫ್‌ಎಂ ಸಮುದಾಯ ರೇಡಿಯೋ ಕೇಂದ್ರಕ್ಕೆ ಜಿಲ್ಲೆಯ ಶಾಲೆ, ಕಾಲೇಜುಗಳು, ಗ್ರಾಮ ಪಂಚಾಯಿತಿಗಳು ಸದಸ್ಯತ್ವ ಪಡೆಯಬಹುದಾಗಿದೆ. ಇದಕ್ಕಾಗಿ, ವಾರ್ಷಿಕ ಸದಸ್ಯತ್ವ 1 ಸಾವಿರ ರೂಪಾಯಿ ಪಾವತಿಸಬೇಕಾಗುತ್ತದೆ. ಇದಕ್ಕಾಗಿ ಅವರು 30 ನಿಮಿಷಗಳ ಕಾರ್ಯಕ್ರಮವನ್ನು ವರ್ಷದಲ್ಲಿ ಒಮ್ಮೆ ನೀಡಬಹುದಾಗಿದೆ ಎಂದರು.
ಮಾಧ್ಯಮಗೋಷ್ಠಿಯಲ್ಲಿ ಕಿಡ್ಸ್ ಸಂಸ್ಥೆಯ ಪ್ರಮುಖರಾದ ಡಾ. ನಂದಾ, ಪ್ರೊ. ಹೂವಯ್ಯ ಗೌಡ, ಪ್ರೊ. ಚಂದ್ರಶೇಖರ್, ಸಿ.ಎಸ್. ಚಂದ್ರಶೇಖರ್ ಉಪಸ್ಥಿತರಿದ್ದರು.

https://www.suddikanaja.com/2021/01/18/new-kendriya-vidyalaya-start-in-shivamogga/

error: Content is protected !!