ಶ್ರೀ ಶಿವಕುಮಾರ ಸ್ವಾಮೀಜಿ ಲಿಂಗೈಕ್ಯರಾದ ದಿನವನ್ನು ಇನ್ಮುಂದೆ `ದಾಸೋಹ ದಿನ’ವಾಗಿ ಆಚರಿಸಲು ಸರ್ಕಾರ ಆದೇಶ

 

 

ಸುದ್ದಿ ಕಣಜ.ಕಾಂ | KARNATAKA | RELIGION 
ಬೆಂಗಳೂರು: ತ್ರಿವಿಧ ದಾಸೋಹಿ ಶ್ರೀ ಡಾ.ಶಿವಕುಮಾರ ಸ್ವಾಮೀಜಿ ಅವರ ಲಿಂಗೈಕ್ಯರಾದ ದಿನವಾದ ಜನವರಿ 21 ಅನ್ನು `ದಾಸೋಹ ದಿನ’ವಾಗಿ ಆಚರಿಸುವ ಬಗ್ಗೆ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

https://www.suddikanaja.com/2021/07/24/basaveshwar-statue-installed-in-shivamogga-by-bs-yadiyurappa/

ಕಾಯಕವೇ ಕೈಲಾಸ ತತ್ವದಡಿ 1930ರಲ್ಲಿ ಸಿದ್ಧಗಂಗಾ ಮಠದ ಜವಾಬ್ದಾರಿಯನ್ನು ಹೊತ್ತು ಅಂದಿನಿಂದಲೂ ನಿರಂತರವಾಗಿ ಮಠಕ್ಕೆ ಬರುವ ಲಕ್ಷಾಂತರ ಬಡ ಮಕ್ಕಳಿಗೆ ಜಾತಿ, ಧರ್ಮದ ಬೇಧವಿಲ್ಲದೇ ವಿದ್ಯೆ, ವಸತಿ, ದಾಸೋಹ ನೀಡಿ ತ್ರಿವಿಧ ದಾಸೋಹಿಗಳಾಗಿದ್ದರು.

Dasoha diwas 1

ದೇಶ ಆಹಾರ ಕೊರತೆಯನ್ನು ಎದುರಿಸುತ್ತಿದ್ದಾಗ ಶ್ರೀಗಳು ಸ್ವತಃ ತಾವೇ ಜೋಳಿಗೆ ಹಿಡಿದು ಜನರಿಂದ ದಾನ ಪಡೆದು ಹಸಿವು ನೀಗಿಸಿದರು. ಶ್ರೀಗಳ ಪರಂಪರೆಯಂತೆ ಇಂದಿಗೂ ಸಾವಿರಾರು ಬಡ ಮಕ್ಕಳಿಗೆ ಹಾಗೂ ಭಕ್ತರಿಗೆ ನಿತ್ಯ ದಾಸೋಹ ಮಾಡಲಾಗುತ್ತಿದೆ. ಶ್ರೀಗಳು 9 ದಶಕಗಳಿಗೂ ಮೀರಿ ನಿತ್ಯ ದಾಸೋಹ ಮಾಡಿ ನಾಡಿನ ಇತರೆ ಎಲ್ಲರಿಗೂ ಮಾದರಿಯಾಗಿದ್ದು, ದಾಸೋಹ ಶ್ರೇಷ್ಠರಾಗಿದ್ದವರು.

ಶ್ರೀಗಳು ಸಮಾಜ ಸೇವಾ ಕಾರ್ಯಗಳಾದ ಸಾಮಾಜಿಕ, ಧಾರ್ಮಿಕ ಹಾಗೂ ಶೈಕ್ಷಣಿಕ ಕ್ಷೇತ್ರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಲಿಂಗೈಕ್ಯರಾದರು. ಇವರು ನಿತ್ಯಪೂಜ್ಯರು ಹಾಗೂ ಕಾಲಕಾಲಕ್ಕೂ ಅನುಸರಣೀಯರಾಗಿದ್ದಾರೆ. ಇವರ ಅಭೂತಪೂರ್ವ ಸೇವೆಯನ್ನು ಸಮರಿಸುವ ಸಲುವಾಗಿ ಶ್ರೀಗಳು ಲಿಂಗೈಕ್ಯರಾದ ದಿನವನ್ನು ದಾಸೋಹ ದಿನವಾಗಿ ಆಚರಿಸುವಂತೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಸರಕಾರದ ಅಧೀನ ಕಾರ್ಯದರ್ಶಿ ಎಂ.ಎಂ.ರಾಜು ಆದೇಶದಲ್ಲಿ ತಿಳಿಸಿದ್ದಾರೆ.

https://www.suddikanaja.com/2021/09/03/demand-fr-lingayat-community/

error: Content is protected !!