ಕುವೆಂಪು ನಗರದಲ್ಲಿ ಹಾಡಹಗಲೆ ಕಳ್ಳತನ ಯತ್ನ, ಸಿಸಿ ಕ್ಯಾಮೆರಾದಲ್ಲಿ ಸೆರೆಯಾಯ್ತು ದೃಶ್ಯ, ಜನರಲ್ಲಿ ಆತಂಕ

 

 

ಸುದ್ದಿ ಕಣಜ.ಕಾಂ | CITY | CRIME
ಶಿವಮೊಗ್ಗ: ಕುವೆಂಪು ನಗರದ ಮನೆಯೊಂದರಲ್ಲಿ ಹಾಡಹಗಲೇ ಕಳ್ಳತನಕ್ಕೆ ಯತ್ನಿಸಿದ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಮನೆಯಲ್ಲಿ ಯಾರೂ ಇಲ್ಲದಿರುವುದನ್ನು ಗಮನಿಸಿದ ಮೂವರು ಮುಖಕ್ಕೆ ಕೈ ವಸ್ತ್ರಗಳನ್ನು ಧರಿಸಿ ಗೇಟಿನ ಮೂಲಕ ಒಳಗೆ ಪ್ರವೇಶಿಸಿದ್ದಾರೆ. ಮನೆಯ ಬಾಗಿಲು ತೆಗೆಯಲು ಯತ್ನಿಸಿದ್ದಾರೆ. ಆದರೆ, ಸಾಧ್ಯವಾಗಿಲ್ಲ. ಹೀಗಾಗಿ, ವಾಪಸಾಗಿದ್ದಾರೆ.

IMG 20210905 005824 1ಸಿಟಿ ಕ್ಯಾಮೆರಾ ಫೂಟೇಜ್ ನೋಡಿದಾಗ ಶಾಕ್
ಮನೆಯಲ್ಲಿ ಯಾರೂ ಇಲ್ಲದಾಗ ಗೇಟ್ ಬಳಿ ಅನುಮಾನಾಸ್ಪದವಾಗಿ ಮೂವರು ಯುವಕರು ಓಡಾಡಿದ್ದಾರೆ. ನಂತರ, ಗೇಟ್ ತೆಗೆದು ಒಳಗೆ ಪ್ರವೇಶಿಸಿ ಮನೆಯ ಬಾಗಿಲು ತೆರೆಯಲು ಪ್ರಯತ್ನ ಮಾಡಿದ್ದಾರೆ. ಇದೆಲ್ಲ ಸಿಸಿ ಕ್ಯಾಮೆರಾದಲ್ಲಿ ರೆಕಾರ್ಡ್ ಆಗಿದೆ.

READ | ಪೆಸಿಟ್ ಕಾಲೇಜಿನ 4 ಬಸ್ಸುಗಳಿಂದ ಡೀಸೆಲ್ ಕಳವು ಮಾಡಿದವರು ಅರೆಸ್ಟ್, ಬಾಡಿಗೆ ಕಾರಲ್ಲೇ ಖತರ್ನಾಕ್ ಕೆಲಸ

ಬಡಾವಣೆಯವರಲ್ಲಿ ಆತಂಕ
ಹಾಡಹಗಲೆಯೇ ಈ ರೀತಿಯ ಕೃತ್ಯಗಳು ನಡೆಯುತ್ತಿದ್ದು, ರಾತ್ರಿ ಹೊತ್ತಲ್ಲಿ ಊಹಿಸಿಕೊಳ್ಳುವುದಕ್ಕೂ ಭಯವಾಗುತ್ತಿದೆ. ಹೀಗಾಗಿ, ಪೊಲೀಸ್ ಬೀಟ್ ವ್ಯವಸ್ಥೆ ಹೆಚ್ಚಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

error: Content is protected !!