ಬ್ಯಾಕೋಡಿನಲ್ಲಿ ಗೆಳೆಯರ ಬಳಗದಿಂದ ವಿಭಿನ್ನ ಗಣೇಶೋತ್ಸವ, ಇವರ ಕಾರ್ಯ ಎಲ್ಲರಿಗೂ ಮಾದರಿ, ಮಾಡಿದ್ದೇನು ಗೊತ್ತಾ?

 

 

ಸುದ್ದಿ ಕಣಜ.ಕಾಂ | TALUK | FESTIVAL
ಸಾಗರ: ತಾಲೂಕಿನ ಬ್ಯಾಕೋಡ ಸಮೀಪದ ಕರೂರು ಹೋಬಳಿಯ ಕುದರೂರಿನಲ್ಲಿ ವಿನಾಯಕ ಗೆಳೆಯರ ಬಳಗದ ತಂಡವು ಮಾದರಿ ಗಣೇಶೋತ್ಸವ ಆಚರಿಸಿದೆ.

https://www.suddikanaja.com/2021/09/10/darshan-thoogudeepa-gave-good-news-to-fans/

3 ಗಂಟೆಯಲ್ಲಿ ಮೂರ್ತಿ ವಿಸರ್ಜನೆ
ಕೋವಿಡ್ ಹಿನ್ನೆಲೆಯಲ್ಲಿ ಕಳೆದ ವರ್ಷದಂತೆ ಈ ಬಾರಿಯೂ ಗಣೇಶ ಹಬ್ಬಕ್ಕೆ ಸಾಕಷ್ಟು ನಿರ್ಬಂಧ ವಿಧಿಸಲಾಗಿದೆ. ಸರ್ಕಾರದ ಮಾರ್ಗಸೂಚಿ ಅನ್ವಯ ಹಬ್ಬ ಆಚರಿಸಲಾಗಿದೆ.
ವಿನಾಯಕ ಗೆಳೆಯರ ಬಳಗದ ತಂಡವು ಸರಳವಾಗಿ ಮೂರ್ತಿ ಪ್ರತಿಷ್ಠಾಪನೆ ಮಾಡಿ ಕೇವಲ ಮೂರು ಗಂಟೆಗಳಲ್ಲಿ ಗಣೇಶ ವಿಸರ್ಜನೆ ಮಾಡಲಾಗಿದೆ.
ಶಾಲಾ ಆವರಣ ಸ್ವಚ್ಚಗೊಳಿಸಿದ ತಂಡ
ಶಾಲಾ ಆವರಣದಲ್ಲಿ ಸರಳವಾಗಿ ಶಾಲಾ ಆವರಣವನ್ನು ಸ್ವಚ್ಚ ಮಾಡುವ ಮೂಲಕ ಪರಿಸರ ಸ್ನೇಹಿ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡಿ ಸರಳ ಅಲಂಕಾರದೊಂದಿಗೆ ಯಾವುದೇ ಪಟಾಕಿ ಸಿಡಿಸದೇ. ಮಾಸ್ಕ್ ವಿತರಿಸುವ ಮೂಲಕ ಕೋವಿಡ್ ಬಗ್ಗೆ ಜಾಗೃತಿಯೊಂದಿಗೆ ಸಾಮಾಜಿಕ ಅಂತರದ ಮೂಲಕ ಆಚರಿಸಿದರು.
ಪ್ರತಿ ವರ್ಷವೂ ಸಾಕಷ್ಟು ವಿಭಿನ್ನವಾಗಿ ಗಣೇಶೋತ್ಸವ ಆಚರಿಸುತ್ತಿದ್ದು ಈ ಸಲ ಸಹ ಸರಳವಾಗಿ ಆಚರಿಸಲಾಯಿತು. ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಮುಕುಂದ ತೇಕಲೇ, ವಿನಾಯಕ ಸಂಘದ ಪ್ರಮುಖರಾದ ಸುಕುಮಾರ್ ಕುದರೂರು, ಪ್ರಕಾಶ್ ಮಾವಿನಕೈ, ಜಗದೀಶ್, ಪ್ರಶಾಂತ್ ಸಾಹಿತ್ಯ ಜೈನ್, ದರ್ಶನ್ ಸೇರಿದಂತೆ ಇನ್ನಿತರ ಸದಸ್ಯರು ಭಾಗವಹಿಸಿದರು.

https://www.suddikanaja.com/2021/09/04/haldi-ganesh-competation-in-shivamogga/

error: Content is protected !!