ಖ್ಯಾತ ನಟ, ನಟಿಯರಿಂದ ಭದ್ರಾವತಿ ಶ್ವಾನ ಕೊಲೆ ಪ್ರಕರಣಕ್ಕೆ ವಿರೋಧ, ರಾಜ್ಯಮಟ್ಟದಲ್ಲಿ ಅಭಿಯಾನ ಸ್ವರೂಪ ಪಡೆದ ಕೇಸ್

 

 

ಸುದ್ದಿ ಕಣಜ.ಕಾಂ | KARNATAKA | DOGS KILLED
ಶಿವಮೊಗ್ಗ: ಇಷ್ಟು ದಿನ ಜಿಲ್ಲೆಗೆ ಮಾತ್ರ ಸೀಮಿತವಾಗಿದ್ದ ಪ್ರಕರಣವೊಂದು ಈಗ ರಾಜ್ಯಮಟ್ಟದಲ್ಲಿ ಸದ್ದು ಮಾಡಿದೆ. ಇದಕ್ಕೆ ಕಾರಣ, ನಟ, ನಟಿಯರು ಇದನ್ನು ಕಠೋರವಾಗಿ ವಿರೋಧಿಸಿದ್ದು.

Aindrita ray
ಬೀದಿ ನಾಯಿಗಳ ಕೊಲೆ ಪ್ರಕರಣ ಖಂಡಿಸಿ ಸಿನಿ ತಾರೆಯರ ಟ್ವಿಟ್

ಭದ್ರಾವತಿ ತಾಲೂಕಿನ ಕಂಬದಾಳ್ ಹೊಸೂರು ಗ್ರಾಮದಲ್ಲಿ ಇತ್ತೀಚೆಗೆ ನಡೆದಿದ್ದ ಶ್ವಾನಗಳ ಅಮಾನುಷ ಕೊಲೆ ಪ್ರಕರಣಕ್ಕೆ ಸಿನಿ ತಾರೆಯರು ಖಂಡಿಸಿದ್ದಾರೆ. ಇದು ಮನುಷ್ಯನ ವಿಕೃತಿಗೆ ಸಾಕ್ಷಿಯಾಗಿದೆ ಎಂದಿದ್ದಾರೆ.

ಟ್ವಿಟ್ಟರ್ ನಲ್ಲಿ ಐಂದ್ರಿತಾ, ರಕ್ಷಿತ್ ಶೆಟ್ಟಿ ವಿರೋಧ
ಎರಡು ದಿನಗಳ ಹಿಂದಷ್ಟೇ ಟ್ವಿಟ್ ಮಾಡಿರುವ ನಟಿ ಐಂದ್ರಿತಾ ರೇ ಅವರು ಭದ್ರಾವತಿಯಲ್ಲಿ ನಾಯಿಗಳನ್ನು ಕೊಲೆ ಮಾಡಿರುವುದಕ್ಕೆ ವಿರೋಧಿಸಿದ್ದಾರೆ. ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರಲ್ಲಿ ಮನವಿ‌ ಮಾಡಿದ್ದಾರೆ.
ಐಂದ್ರಿತಾ ರೇ ಅವರು ಪ್ರಕರಣದ ವಿರುದ್ಧ ದನಿ ಎತ್ತಿದ್ದೇ ಅದಕ್ಕೆ ನಟ ರಕ್ಷಿತ್ ಶೆಟ್ಟಿ ಅವರು ದನಿ ಗೂಡಿಸಿದ್ದಾರೆ.

https://www.suddikanaja.com/2021/01/10/chitradurga-won-first-place-in-dog-show-at-shivamogga/

error: Content is protected !!