ಕೈ ತೊಳೆದುಕೊಳ್ಳಲು ಕೆರೆಗೆ ಹೋದ ವ್ಯಕ್ತಿ ಶವವಾಗಿ ಪತ್ತೆ

 

 

ಸುದ್ದಿ ಕಣಜ.ಕಾಂ | TALUK | CRIME
ಸೊರಬ: ತಾಲೂಕಿನ ಆನವಟ್ಟಿ ಹೋಬಳಿಯ ಗೊಲ್ಲಾರಹಳ್ಳಿಯಲ್ಲಿ ಬುಧವಾರ ವ್ಯಕ್ತಿಯೊಬ್ಬರು ಕೆರೆಯಲ್ಲಿ ಮುಳುಗಿ ಮೃತಪಟ್ಟಿದ್ದಾರೆ.

READ | ಅಡಿಕೆ ಬೆಲೆ ಏರಿಕೆ ಬೆನ್ನಲ್ಲೇ ಶಿವಮೊಗ್ಗದಲ್ಲಿ‌ ಹೆಚ್ಚಿದ್ದ ಕಳ್ಳತನದ ಕಾಟ, ಹೊಳೆಹೊನ್ನೂರು ವ್ಯಾಪ್ತಿಯಲ್ಲೇ ಮೂರು‌ ಕೇಸ್ ದಾಖಲು

ಕಮ್ಮನಹಳ್ಳಿ ಗ್ರಾಮದ ರವಿ‌ ನಾಯ್ಕ್ (35) ಮೃತ ವ್ಯಕ್ತಿ. ಕೂಲಿ ಕೆಲಸ ಮುಗಿಸಿಕೊಂಡು‌ ವಾಪಸ್ ಬರಯವಾಗ ಈತ ಕೈ ತೊಳೆದುಕೊಳ್ಳುವುದಕ್ಕಾಗಿ ಎಣ್ಣೆಕೊಪ್ಪ ಗ್ರಾಮದ ಬುಟ್‌ ಕಟ್ಟೆ ಕೆರೆಗೆ ಹೋಗಿದ್ದಾನೆ. ಆಗ ಕಾಲು ಜಾರಿ ನೀರಿಗೆ ಬಿದ್ದಿದ್ದು ಮುಳುಗಿ ಮೃತಪಟ್ಟಿದ್ದಾನೆ.
ಅಗ್ನಿಶಾಮಕ ದಳ ಕಾರ್ಯಾಚರಣೆ
ಕೆರೆಯಲ್ಲಿ ಮುಳುಗಿದ್ದ ಶವವನ್ನು ಅಗ್ನಿಶಾಮಕ ದಳದ ಅಧಿಕಾರಿ ಮಹಾಬಲೇಶ್ವರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ‌ ಮೇಲೆತ್ತಲಾಗಿದೆ.
ಮೃತನ ತಂದೆ ನೀಡಿದ ದೂರಿನ ಮೇರೆಗೆ ಆನವಟ್ಟಿ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣ ಪ್ರಕರಣ ದಾಖಲಿಸಿದೆ.

error: Content is protected !!