ONLINE BETTING | ಹುಷಾರ್, ಆನ್‍ಲೈನ್ ಬೆಟ್ಟಿಂಗ್ ಗೆ ಇನ್ಮುಂದೆ ಲಕ್ಷಾಂತರ ದಂಡ, 6 ತಿಂಗಳ ಜೈಲು, ಯಾವ ಅಪರಾಧಕ್ಕೆ ಏನು ಶಿಕ್ಷೆ, ಇಸ್ಪೀಟ್ ಆಡಲು ಸಾಲ ನೀಡಿದರೂ ಬೀಳುತ್ತೇ ಕೇಸ್!

 

 

ಸುದ್ದಿ ಕಣಜ.ಕಾಂ | KARNATAKA | ONLINE GAMBLING BETTING
ಬೆಂಗಳೂರು: ಲಾಟರಿ, ಕುದುರೆ ರೇಸ್ ಹೊರತಾಗಿ ಇನ್ನುಳಿದ ಎಲ್ಲ ಆನ್ ಲೈನ್ ಬೆಟ್ಟಿಂಗ್ ದಂಧೆ ನಿಷೇಧಕ್ಕೆ ರಾಜ್ಯ ಸರ್ಕಾರ ಮುಂದಾಗಿದೆ. ಅದಕ್ಕಾಗಿ, ಮಹತ್ವದ ವಿಧೇಯಕವೊಂದನ್ನು ವಿಧಾನಸಭೆಯಲ್ಲಿ ಮಂಡನೆ ಕೂಡ ಮಾಡಲಾಗಿದೆ.

ಶುಕ್ರವಾರ ಮಹತ್ವದ ವಿಧೇಯಕವೊಂದನ್ನು ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಅಧಿವೇಶನದಲ್ಲಿ ಕರ್ನಾಟಕ ಪೊಲೀಸ್ ತಿದ್ದುಪಡಿ ವಿಧೇಯಕವನ್ನು ಮಂಡನೆ ಮಾಡಿದ್ದಾರೆ.

ಹಳೇ ಮತ್ತು ಹೊಸ ವಿಧೇಯಕದಲ್ಲಿ ಭಾರಿ ಬದಲಾವಣೆಗಳನ್ನು ತರಲಾಗಿದ್ದು, ಖಡಕ್ ನಿಯಮಗಳನ್ನು ವಿಧಿಸಲಾಗಿದೆ. ಇದರನ್ವಯ, ಕಂಪ್ಯೂಟರ್, ಮೊಬೈಲ್, ಸೈಬರ್ ತಾಣಗಳಲ್ಲಿ ಆನ್ಲೈನ್ ಮೂಲಕ ಬೆಟ್ಟಿಂಗ್ ಮಾಡುವಂತಿಲ್ಲ. ಒಂದುವೇಳೆ, ಇದರಲ್ಲಿ ತೊಡಗಿದ್ದರೆ ಅಥವಾ ಪ್ರೋತ್ಸಾಸುವುದು, ಆಶ್ರಯ ನೀಡುವುದು ಕಂಡುಬಂದರೆ ಅಂತಹವರ ವಿರುದ್ಧವೂ ಕ್ರಮಕೈಗೊಳ್ಳುವ ಅವಕಾಶ ವಿಧೇಯಕದಲ್ಲಿ ನೀಡಲಾಗಿದೆ. 1 ಲಕ್ಷ ರೂಪಾಯಿ ದಂಡ ಹಾಗೂ ಆರು ತಿಂಗಳು ಜೈಲು ವಿಧಿಸಲಾಗುವುದು.

READ | ಚಿನ್ನಾಭರಣ ಪ್ರಿಯರಿಗೆ ಶುಭ ಸುದ್ದಿ, ಬಂಗಾರದ ಬೆಲೆಯಲ್ಲಿ ಭಾರೀ‌ ಇಳಿಕೆ

ಹೊಸ ವಿಧೇಯಕದಲ್ಲಿ ಏನಿದೆ?

  1. ಕಟ್ಟಡದಲ್ಲಿ ಆನ್‍ಲೈನ್ ಜೂಜಾಟ ಮಾಡಿದ್ದಲ್ಲಿ ಅಂತಹವರಿಗೆ ಈ ಮುಂಚಿನ ಕಾಯ್ದೆಯಲ್ಲಿ 1 ವರ್ಷ ಜೈಲು, 1000 ರೂಪಾಯಿ ದಂಡವಿತ್ತು. ಅದನ್ನು ಹೊಸ ವಿಧೇಯಕದಲ್ಲಿ 3 ವರ್ಷ ಜೈಲು, 1 ಲಕ್ಷ ದಂಡಕ್ಕೆ ಹೆಚ್ಚಿಸಲಾಗಿದೆ.
  2. ವ್ಯಕ್ತಿಯು ಜೂಜಾಡುವ ಜಾಗದಲ್ಲಿ ಉಪಸ್ಥಿತನಿದ್ದರೆ ಆತನಿಗೆ ಈ ಮುಂಚೆ 1 ತಿಂಗಳು ಜೈಲು, 500 ರೂ. ದಂಡ ಇತ್ತು. ಅದೀಗ, 6 ತಿಂಗಳ ಜೈಲು, 10,000 ರೂ. ದಂಡಕ್ಕೆ ಹೆಚ್ಚಿಸಲಾಗಿದೆ.
  3. ಸಾರ್ವಜನಿಕ ಬೀದಿ, ಜಾಗದಲ್ಲಿ ಜೂಜಾಡಿದ್ದಲ್ಲಿ ಮುಂಚೆ 3 ತಿಂಗಳು ಜೈಲು, 300 ರೂ. ದಂಡ ಇತ್ತು. ಹೊಸ ವಿಧೇಯಕದಲ್ಲಿ 1 ವರ್ಷ ಜೈಲು, 20,000 ರೂ. ದಂಡ ವಿಧಿಸುವ ಪ್ರಸ್ತಾವವಿದೆ.
  4. ಜೂಜಾಡುವುದಕ್ಕಾಗಿ ವ್ಯಕ್ತಿಗೆ ಹಣ ಸಹಾಯ ಮಾಡುವುದು, ಸಾಲ ನೀಡಿದ್ದಲ್ಲಿ 1 ವರ್ಷ ಜೈಲಿತ್ತು. ಈಗ 3 ವರ್ಷ ಜೈಲು 1 ಲಕ್ಷ ರೂ. ದಂಡ ವಿಧಿಸಲಾಗುವುದು.

https://www.suddikanaja.com/2020/12/25/cs-shadakshari-address-government-employee-in-shivamogga/

error: Content is protected !!