ಟಿಪ್ಪುನಗರ ಮರ್ಡರ್ ಕೇಸ್, ತನ್ನದೇ ಚಾಕುವಿನಿಂದ ಹತನಾದ ಇರ್ಫಾನ್, ರಾತ್ರೋರಾತ್ರಿ ಕಾರ್ಯಾಚರಣೆ ನಾಲ್ವರು ಅರೆಸ್ಟ್, ನಡೆಯುತ್ತಿದೆ ಉಳಿದವರ ಶೋಧ

 

 

ಸುದ್ದಿ ಕಣಜ.ಕಾಂ | CITY | CRIME NEWS
ಶಿವಮೊಗ್ಗ: ಟಿಪ್ಪುನಗರದಲ್ಲಿ ಶನಿವಾರ ರಾತ್ರಿ ಸಂಭವಿಸಿದ ಕೊಲೆ ಪ್ರಕರಣ ಸಂಬಂಧ ನಾಲ್ವರು ಜನ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಮಾರ್ನಾಮಿ ಬೈಲು ನಿವಾಸಿ ಇರ್ಫಾನ್ (28) ಎಂಬಾತನನ್ನು ಮಾರಕಾಸ್ತ್ರಗಳಿಂದ ಚುಚ್ಚಿ ಕೊಲೆ ಮಾಡಲಾಗಿದ್ದು, ಪೊಲೀಸರು ರಾತ್ರೋರಾತ್ರಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.

ಅವನ ಚಾಕುವಿನಿಂದಲೇ ಕೊಲೆ

ಇರ್ಫಾನ್ ತುಂಗಾನಗರ ಪೊಲೀಸ್ ಠಾಣೆ ವ್ಯಾಪ್ತಿಯ ಟಿಪ್ಪು ನಗರ ಏಳನೇ ಕ್ರಾಸ್ ನ 4ನೇ ಅಡ್ಡರಸ್ತೆ ಸಮೀಪ ಶನಿವಾರ ರಾತ್ರಿ ಬಂದಿದ್ದಾನೆ. ಆಗ ಇರ್ಫಾನ್ ಮೇಲೆ ಈ ಹಿಂದೆ ದಾಖಲಾದ ಗಾಂಜಾ ಪ್ರಕರಣಗಳ ವಿಚಾರದಲ್ಲಿ ಅಸಾದ್ ಮತ್ತು ಶಾಬೀರ್ ಎಂಬುವವರ ನಡುವೆ ಜಗಳವಾಗಿದೆ. ಆ ಸಮಯದಲ್ಲಿ ಅಲ್ಲೇ ಇದ್ದ 7 ರಿಂದ 8 ಜನ ಹುಡುಗರು ಸಹ ಜಗಳದಲ್ಲಿ ಸೇರಿಕೊಂಡಿದ್ದಾರೆ. ನಂತರ ಇರ್ಫಾನ್ ತನ್ನ ಬಳಿ ಇದ್ದ ಚಾಕುವಿನಿಂದ ಒಬ್ಬ ಆರೋಪಿಯ ಮೇಲೆ ಹಲ್ಲೆ ಮಾಡಿದ್ದಾನೆ. ತಕ್ಷಣ ಎದುರಾಳಿಗಳು ಚಾಕುವನ್ನು ಕಸಿದುಕೊಂಡು ಅದೇ ಚಾಕುವಿನಿಂದ ಈತನ ಎದೆಯ ಭಾಗಕ್ಕೆ ಚುಚ್ಚಿ ಕೊಲೆ ಮಾಡಲಾಗಿದೆ.

ಇರ್ಫಾನ್ ತಮ್ಮನಿಂದ ದೂರು

ಕೊಲೆಯಾದ ಇರ್ಫಾನನ ತಮ್ಮ ನೀಡಿದ ದೂರಿನ ಮೇರೆಗೆ ಗುನ್ನೆ ಐಪಿಸಿ ಕಲಂ 143, 344, 347, 148, 302, 149 ಅನ್ವಯಯ ಪ್ರಕರಣ ದಾಖಲಿಸಲಾಗಿದೆ. ತನಿಖೆ ಕೈಗೊಂಡು ಪ್ರಕರಣದಲ್ಲಿ ಒಟ್ಟು ನಾಲ್ವರು ಆರೋಪಿಗಳನ್ನು ಬಂಧಿಸಿದ್ದು, ಇನ್ನುಳಿದ ಆರೋಪಿತರ ಪತ್ತೆ ಕಾರ್ಯ ನಡೆದಿದೆ. ತುಂಗಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

https://www.suddikanaja.com/2021/07/18/pwtrol-theft/

error: Content is protected !!