ಅಡ್ಡ ಬಂದ‌ ನಾಯಿಯಿಂದ ತಪ್ಪಿಸಲು ಹೋಗಿ ವ್ಯಕ್ತಿ ಸಾವು, ಇನ್ನೊಬ್ಬರಿಗೆ ಗಂಭೀರ ಗಾಯ

 

 

ಸುದ್ದಿ ಕಣಜ.ಕಾಂ | TALUK | CRIME
ಶಿವಮೊಗ್ಗ: ರಸ್ತೆಯ ಮೇಲೆ ನಾಯಿ ಅಡ್ಡ ಬಂದಿದ್ದು ಅದನ್ನು ತಪ್ಪಿಸಲು ಹೋಗಿ ಬೈಕ್ ಅನ್ನು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ವ್ಯಕ್ತಿಯೊಬ್ಬ ಮೃತಪಟ್ಟಿದ್ದಾನೆ.
ಚಿಕ್ಕಗಂಗೂರು ಚನ್ನಗಿರಿ ಗ್ರಾಮದ ಪ್ರದೀಪ್ ಮೃತಪಟ್ಟ ವ್ಯಕ್ತಿ. ತನ್ನ ತಂದೆಯನ್ನು ಹಿಂಬದಿ ಕೂರಿಸಿಕೊಂಡು ಬೈಕ್ ಅನ್ನು ಅತಿ ವೇಗವಾಗಿ ಚಾಲನೆ ಮಾಡಿದ್ದು, ಅಗರದಹಳ್ಳಿ ಸಿದ್ದರ ಕಾಲೊನಿ ಬಳಿ ರಾಷ್ಟ್ರೀಯ ಹೆದ್ದಾರಿ 13 ರಸ್ತೆಯಲ್ಲಿ ನಾಯಿ ಅಡ್ಡ ಬಂದಿದೆ.ಣ ಅದನ್ನು ತಪ್ಪಿಸಲು ಹೋಗಿ ಎಡ ಭಾಗದಲ್ಲಿ ಇದ್ದ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದ್ದು, ಪ್ರದೀಪ್ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಅವರ ತಂದೆಗೆ ತೀವ್ರ ಗಾಯ ಗಾಯಗಳಾಗಿವೆ.
ಹೊಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಐಪಿಸಿ ಕಲಂ 279, 337, 304(ಎ) ಅಮ್ವಯ ಪ್ರಕರಣ ದಾಖಲಾಗಿದೆ‌.

error: Content is protected !!