ಸಾಲದ ಹಣ ವಾಪಸ್‌ ಕೇಳಿದ್ದಕ್ಕೆ ನಡೀತು ಬರ್ಬರ ಕೊಲೆ

 

 

ಸುದ್ದಿ‌ ಕಣಜ.ಕಾಂ | CITY | CRIME NEWS
ಶಿವಮೊಗ್ಗ: ಕೈಗಡ ರೂಪದಲ್ಲಿ ನೀಡಿದ್ದ ಹಣ ವಾಪಸ್ ಕೇಳಿದ್ದಕ್ಕೆ ರಿಯಲ್ ಎಸ್ಟೇಟ್ ಉದ್ಯಮಿಯೊಬ್ಬರನ್ನು ಶುಕ್ರವಾರ ರಾತ್ರಿ ಕೊಲೆ ಮಾಡಲಾಗಿದೆ.
ಕಲ್ಲೂರು ಇಂಡಸ್ಟ್ರಿಯಲ್ ಏರಿಯಾ ಶಾರದಾ ಕಾಲೊನಿ ಚಾನೆಲ್ ಹತ್ತಿರ ಇಲಿಯಾಸ್ ನಗರ ನಿವಾಸಿ ಸಯ್ಯದ್ ಸಾದಿಕ್‌(38) ಎಂಬುವವರ ಕೊಲೆಯಾಗಿದೆ.
ವರ್ಷದಿಂದ ಹಣ ನೀಡದೇ ಸತಾಯಿಸುತ್ತಿದ್ದ
ತಲೆಯ ಮೇಲೆ ಕಲ್ಲನ್ನು ಎತ್ತಿ ಹಾಕಿ ಕೊಲೆ ಮಾಡಿದ್ದು, ಶಿವಮೊಗ್ಗ ನಗರದ ವ್ಯಕ್ತಿಯೊಬ್ಬರಿಗೆ ₹15,00,000 ಕೈ ಸಾಲವಾಗಿ ನೀಡಿದ್ದರು. ಆದರೆ ಆ ವ್ಯಕ್ತಿಯು ಹಣ ವಾಪಾಸ್ ನೀಡದೆ ಒಂದು ವರ್ಷದಿಂದ ಸತಾಯಿಸುತ್ತಿದ್ದ. ಹಣ ವಾಪಾಸ್ ಕೊಡಿ ಎಂದು ಒತ್ತಾಯ ಮಾಡಿದ್ದರಿಂದ ಕೊಡಬೇಕಾದ ಹಣದ ವಿಚಾರದ ದ್ವೇಷದಿಂದ ಕೊಲೆ ಮಾಡಿರಬಹುದು ಎಂದು ಮೃತನ ತಮ್ಮ ನೀಡಿದ ದೂರಿನ ಮೇರೆಗೆ ತುಂಗಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತನಿಖೆ ನಡೆಯುತ್ತಿದೆ.

error: Content is protected !!