HESCOM JOBS | ಹೆಸ್ಕಾಂನಲ್ಲಿ‌ ಭರ್ಜರಿ ಉದ್ಯೋಗ ಅವಕಾಶ, ಅರ್ಜಿ ಸಲ್ಲಿಕೆ ಹೇಗೆ, ಕೊನೆ ದಿನಾಂಕ ಏನು, ಮಾಹಿತಿಗಾಗಿ ಕ್ಲಿಕ್ಕಿಸಿ

 

 

ಸುದ್ದಿ ಕಣಜ.ಕಾಂ‌ | KARNATAKA | JOB JUNCTION
ಬೆಂಗಳೂರು: ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ (ಹೆಸ್ಕಾಂ)ಯಲ್ಲಿ ಭಾರಿ ಉದ್ಯೋಗ ಅವಕಾಶ ಲಭ್ಯವಿದ್ದು, ಅರ್ಜಿಗಳನ್ನು ಆಹ್ವಾನಿಸಿದೆ.
2019, 2020 ಹಾಗೂ 2021ನೇ ಶೈಕ್ಷಣಿಕ ಸಾಲಿನಲ್ಲಿ ಬಿಇ ಪದವಿ ಹಾಗೂ ಡಿಪ್ಲೋಮಾ ಉತ್ತೀರ್ಣರಾದವರು ಕರೆಯಲಾಗಿರುವ ಶಿಶುಕ್ಷು ತರಬೇತಿಗೆ ಅರ್ಜಿ ಸಲ್ಲಿಸಬಹುದಾಗಿದೆ. ಇವರನ್ನು 2021-22ನೇ ಸಾಲಿಗೆ ನೇಮಕ ಮಾಡಲಾಗುವುದು.

READ | ಕಂದಾಯ ಇಲಾಖೆಯಲ್ಲಿ FDA, SDA ಹುದ್ದೆಗಳು ಖಾಲಿ,‌ ನಡೆಯಲಿದೆ ನೇಮಕಾತಿ

ಎಷ್ಟು ಹುದ್ದೆಗಳ ಭರ್ತಿ
ಬಿಇ (ಎಲೆಕ್ಟ್ರಿಕಲ್ ಆ್ಯಂಡ್ ಎಲೆಕ್ಟ್ರಾನಿಕ್ಸ್ ಎಂಜಿನಿಯರಿಂಗ್) ಪದವಿ 125 ಹಾಗೂ ಡಿಪ್ಲೋಮಾ (ಎಲೆಕ್ಟ್ರಿಕಲ್ ಆ್ಯಂಡ್ ಎಲೆಕ್ಟ್ರಾನಿಕ್ಸ್) 25 ಹುದ್ದೆಗಳ ನೇಮಕಾತಿ ಮಾಡಲಾಗುವುದು.
ಯಾರಿಗೆಷ್ಟು ಸ್ಟೈಫಂಡ್
ಆಯ್ಕೆಯಾದವರಿಗೆ ಸ್ಟೈಫಂಡ್ ನೀಡಲಾಗುವುದು. ಬಿಇ (ಎಲೆಕ್ಟ್ರಿಕಲ್ ಆ್ಯಂಡ್ ಎಲೆಕ್ಟ್ರಾನಿಕ್ಸ್ ಎಂಜಿನಿಯರಿಂಗ್) ಪದವಿ ಪೂರ್ಣಗೊಳಿಸಿದವರಿಗೆ ಮಾಸಿಕ ₹7,000 ಹಾಗೂ ಡಿಪ್ಲೋಮಾ (ಎಲೆಕ್ಟ್ರಿಕಲ್ ಆ್ಯಂಡ್ ಎಲೆಕ್ಟ್ರಾನಿಕ್ಸ್) ಪೂರ್ಣಗೊಳಿಸಿದವರಿಗೆ ಮಾಸಿಕ ₹5,000 ಪಾವತಿಸಲಾಗುವುದು.

READ | ಕಲ್ಯಾಣ ಕರ್ನಾಟಕದಲ್ಲಿ 20,000 ಉದ್ಯೋಗ ನೇರ ನೇಮಕಾತಿ, ಮಾಹಿತಿಗಾಗಿ ಕ್ಲಿಕ್ ಮಾಡಿ

ಶಾರ್ಟ್ ಲಿಸ್ಟ್ ಗೊಂಡವರಿಗೆ ನೇರವಾಗಿ ಇಮೇಲ್ ಮೂಲಕ ಮಾಹಿತಿ ನೀಡಲಾಗುವುದು. ಅವರು ದಾಖಲೆ ಪರಿಶೀಲನೆಗೋಸ್ಕರ ಕಾರ್ಯನಿರ್ವಾಹಕ ಎಂಜಿನಿಯರ್ (ವಿದ್ಯುತ್), ಐಟಿಐ, ಹೆಸ್ಕಾಂ, ಕಾರವಾರ ರಸ್ತೆ, ವಿದ್ಯುತ್ ನಗರ, ಹುಬ್ಬಳ್ಳಿ‌ ಈ‌ ವಿಳಾಸಕ್ಕೆ  ಹಾಜರಾಗುವಂತೆ ಸೂಚಿಸಲಾಗಿದೆ.
ಅರ್ಜಿ‌ ಸಲ್ಲಿಸಲು ಕೊನೆಯ ದಿನಾಂಕ
ಸೆಪ್ಟೆಂಬರ್‌ 27ರಿಂದ ಅರ್ಜಿ ಸಲ್ಲಿಕೆ ಆರಂಭವಾಗಿದೆ. ನ್ಯಾಟ್ಸ್ ಪೋರ್ಟಲ್ ನಲ್ಲಿ ಹೆಸರು ನೋಂದಾಯಿಸಲು ಅಕ್ಟೋಬರ್ 17 ಕೊನೆಯ ದಿನಾಂಕವಾಗಿದೆ ಹಾಗೂ ಹೆಸ್ಕಾಂ ವೆಬ್ ಸೈಟಿನಲ್ಲಿ ಅರ್ಜಿ ಸಲ್ಲಿಸಲು ಅಕ್ಟೋಬರ್ 10 ಅಂತಿಮ ದಿನವಾಗಿದೆ. ಅ.22ರಂದು ಶಾರ್ಟ್ ಲಿಸ್ಟ್ ಬಿಡುಗಡೆ ಹಾಗೂ ನವೆಂಬರ್ 9ರಿಂದ 12ರ ವರೆಗೆ ದಾಖಲೆ ಪರಿಶೀಲನೆ ನಡೆಯಲಿದೆ.ಅರ್ಜಿ ಸಲ್ಲಿಸಲು ಹೆಸ್ಕಾಂ ವೆಬ್‌ಸೈಟ್‌ https://hescom.karnataka.gov.in ಹಾಗೂ ಅರ್ಜಿ ಸಲ್ಲಿಸಲು NATS ವೆಬ್‌ಸೈಟ್‌ http://www.mhrdnats.gov.in/  ಲಿಂಕ್ ಬಳಸುವಂತೆ ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

https://www.suddikanaja.com/2021/01/17/jobs-in-kptcl-for-diploma-engineering-graduates/

error: Content is protected !!