ಭದ್ರಾವತಿಯಲ್ಲಿ ಚಿರತೆ ಪ್ರತ್ಯಕ್ಷ, ಭೀತಿಯಲ್ಲಿ ಜನ

 

 

ಸುದ್ದಿ ಕಣಜ.ಕಾಂ | TALUK | WILD LIFE
ಭದ್ರಾವತಿ: ತಾಲೂಕಿನ ಕೋಮಾರಹಳ್ಳಿ ಗ್ರಾಮದಲ್ಲಿ ಚಿರತೆಯೊಂದು ಪ್ರತ್ಯಕ್ಷವಾಗಿದ್ದು, ನಾಯಿಯನ್ನು ಬೇಟೆಯಾಡಿದೆ. ಈ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಹೀಗಾಗಿ, ಅಕ್ಕಪಕ್ಕದ ಜನ ಭೀತಿಗೀಡಾಗಿದ್ದಾರೆ.
ಹಾಲಯ್ಯ ಎಂಬುವವರ ಆಲೆಮನೆಯ ಬಳಿ ಚಿರತೆ ಕಾಣಿಸಿಕೊಂಡಿದ್ದು, ನಾಯಿಯನ್ನು ಬೇಟೆಯಾಡಿದೆ. ರಾತ್ರಿ ಹೊತ್ತಲ್ಲಿ ಚಿರತೆ ಬಂದಿದ್ದು, ನಾಯಿಯನ್ನು ಅರ್ಧಂಬರ್ಧ ತಿಂದು ಬಿಸಾಡಿದೆ. ಸಾರ್ವಜನಿಕರು ನಾಯಿಯ ಶವ ನೋಡಿ ಗಾಬರಿಯಾಗಿದ್ದಾರೆ.
ಅರಣ್ಯ ಇಲಾಖೆಯವರಿಗೆ ಮಾಹಿತಿ ನೀಡಿದ್ದು, ಪರಿಶೀಲಿಸಿದ್ದಾರೆ. ಹೆಜ್ಜೆ ಗುರುತು ಆಧರಿಸಿ ಚಿರತೆ ಎಂದು ಖಚಿತ ಪಡಿಸಿದ್ದಾರೆ.

error: Content is protected !!