ಪಿಯುಸಿ ಪೂರ್ಣಗೊಳಿಸಿದವರಿಗೆ ಪೊಲೀಸ್ ಇಲಾಖೆಯಲ್ಲಿ ಉದ್ಯೋಗ, ಅರ್ಜಿ ಸಲ್ಲಿಕೆಗೆ ಇನ್ನೆರಡು ದಿನವಷ್ಟೇ ಬಾಕಿ

 

 

ಸುದ್ದಿ ಕಣಜ.ಕಾಂ | KARNATAKA | JOB JUNCTION
ಬೆಂಗಳೂರು: ಕಲ್ಯಾಣ ಕರ್ನಾಟಕ ಸ್ಥಳೀಯ ವೃಂದದ ಸೇರಿ ಮಿಕ್ಕುಳಿದ ಹುದ್ದೆಗಳ‌ ನೇಮಕಾತಿಗೆ ಅರ್ಜಿ‌ ಕರೆಯಲಾಗಿದೆ. ಆದರೆ, ಅರ್ಜಿ ಸಲ್ಲಿಕೆಗೆ ಸೆಪ್ಟೆಂಬರ್ 29 ಅಂತಿಮ ದಿನವಾಗಿದೆ. ಹಾಗೂ ಶುಲ್ಕ ಪಾವತಿಗೆ ಅಕ್ಟೋಬರ್‌ 1 ಕೊನೆಯ ದಿನವಾಗಿದೆ. ಹೀಗಾಗಿ, ಇದುವರೆಗೆ ಅರ್ಜಿ ಸಲ್ಲಿಸದಿರುವವರು ಅರ್ಜಿ ಸಲ್ಲಿಸಬಹುದು.

READ | ಪಿಯುಸಿ, ಡಿಗ್ರಿ, ಪಿಜಿ ಪೂರ್ಣಗೊಳಿಸಿದವರಿಗೆ ಉತ್ತಮ ಅವಕಾಶ, 3261 ಹುದ್ದೆಗಳ ಭರ್ತಿಗೆ ಅಧಿಸೂಚನೆ

ಪ್ರಸಂಸನೀಯ ಕ್ರೀಡಾಪಟುಗಳ ಪೊಲೀಸ್ ಕಾನ್ಸ್‌ಟೇಬಲ್‌ (ಸಿವಿಲ್) ಮತ್ತು ಪೊಲೀಸ್ ಸಬ್‌ ಇನ್ಸ್‌ಪೆಕ್ಟರ್ ಪುರುಷ ಮತ್ತು ಮಹಿಳೆ (ಸಿವಿಲ್) ಹಾಗೂ ಸೇವೆಯಲ್ಲಿರುವವರ ಮಿಕ್ಕುಳಿದ ವೃಂದದ ನೇಮಕಾತಿ ನಡೆಯಲಿದೆ.
80 ಸಿವಿಲ್ ಪೊಲೀಸ್‌ ಕಾನ್ಸ್‌ಟೇಬಲ್‌ ಹಾಗೂ 20 ಸಿವಿಲ್ ಪೊಲೀಸ್ ಸಬ್‌-ಇನ್ಸ್‌ಪೆಕ್ಟರ್ ಹುದ್ದೆಗಳಿಗೆ ಅರ್ಜಿಗಳ ಕರೆಯಲಾಗಿದೆ.
ಕಾನ್ಸ್ ಟೆಬಲ್ ಹುದ್ದೆಗೆ ಪಿಯುಸಿ ದ್ವಿತೀಯ ಉತ್ತೀರ್ಣರಾಗಿರಬೇಕು. ಸಬ್ ಇನ್ಸ್ ಪೆಕ್ಟರ್ ಹುದ್ದೆಗೆ ಯಾವುದಾದರೂ ಪದವಿ ಪೂರ್ಣಗೊಳಿಸಿರಬೇಕು. ಜತೆಗೆ, ರಾಜ್ಯ, ರಾಷ್ಟ್ರ, ಅಂತರ ರಾಷ್ಟ್ರೀಯ ಮಟ್ಟದಲ್ಲಿ ಪ್ರಶಸ್ತಿ ಪಡೆದಿರಬೇಕು. ಮಾಹಿತಿಗಳಿಗಾಗಿ www.recruitment.ksp.gov.in  ವೆಬ್ಸೈಟ್ ಗೆ ಭೇಟಿ ನೀಡಬಹುದು.

error: Content is protected !!