ಶಿವಮೊಗ್ಗದ 100 ರಸ್ತೆ, ತುಂಗಾ ಸರ್ಕಲ್ ಹೆಸರು ಬದಲಾವಣೆ, ಯಾರ ಹೆಸರಿಡಲಾಗಿದೆ, ಕಾರಣವೇನು?

 

 

ಸುದ್ದಿ ಕಣಜ.ಕಾಂ | CITY | GANDHI JAYANTI
ಶಿವಮೊಗ್ಗ: ನಗರದ 100 ಅಡಿ ರಸ್ತೆಯ ಹೆಸರನ್ನು ಶನಿವಾರ ಅಧಿಕೃತವಾಗಿ‌ ಬದಲಾವಣೆ ಮಾಡಲಾಗಿದೆ. ಈ ಕಾರ್ಯಕ್ರಮಕ್ಕೆ ಸಚಿವ ಕೆ.ಎಸ್.ಈಶ್ವರಪ್ಪ ನೆರವೇರಿಸಿದ್ದಾರೆ.
100 ಅಡಿ ರಸ್ತೆಯ ಹೆಸರನ್ನು ಗಾಂಧಿ ಬಸಪ್ಪ ರಸ್ತೆ, ತುಂಗಾ ಚಾನಲ್ ವೃತ್ತಕ್ಕೆ ಗಾಂಧಿ ಬಸಪ್ಪ ವೃತ್ತ ಎಂದು ನಾಮಕರಣ ಮಾಡಲಾಗಿದೆ.
ನಗರದ ಕುವೆಂಪು ರಂಗಮಂದಿರದಲ್ಲಿ ಮಹಾನಗರ ಪಾಲಿಕೆ, ಗಾಂಧಿ ಬಸಪ್ಪ ಮತ್ತು ಹಳದಮ್ಮ ಪ್ರತಿಷ್ಠಾನ ಆಶ್ರಯದಲ್ಲಿ ಆಯೋಜಿಸಿದ್ದ ಗಾಂಧಿ ಜಯಂತಿ ಮತ್ತು ತುಂಗಾನಗರದ ೧೦೦ ಅಡಿ ರಸ್ತೆಗೆ ಉದ್ಘಾಟನಾ ಸಮಾರಂಭ ಆಯೋಜಿಸಲಾಗಿತ್ತು.

ಗಾಂಧಿ ಬಸಪ್ಪ ಅಪ್ಪಟ ರಾಷ್ಟ್ರಭಕ್ತ

ಈ ಮೂರು ಕಾರ್ಯಕ್ರಮಗಳನ್ನು ಉದ್ಘಾಟಿಸಿ ಸಚಿವ ಕೆ.ಎಸ್. ಈಶ್ವರಪ್ಪ ಮಾತನಾಡಿ, ಗಾಂಧಿ ಬಸಪ್ಪ ಸ್ವಾತಂತ್ರ್ಯ ಹೋರಾಟಗಾರರಾಗಿದ್ದರು. ಜೈಲು ಶಿಕ್ಷೆ ಅನುಭವಿಸಿದ್ದರು. ರಾಷ್ಟ್ರಭಕ್ತರಾಗಿದ್ದರು. ಅವರ ಹೆಸರನ್ನು ರಸ್ತೆಗೆ ಮತ್ತು ವೃತ್ತಕ್ಕೆ ಇಟ್ಟಿರುವುದು ಹೆಮ್ಮೆಯ ವಿಚಾರ ಎಂದರು.
ಮಹಾತ್ಮ ಗಾಂಧಿ ಹೆಸರು ದುರ್ಬಳಕೆ
ಇತ್ತೀಚೆಗೆ ಮಹಾತ್ಮ ಗಾಂಧೀಜಿ ಅವರ ಹೆಸರು ದುರುಪಯೋಗ ಆಗುತ್ತಿದೆ.‌ ಭಾರತೀಯ ಸಂಸ್ಕೃತಿಯ ಪ್ರತೀಕರಾದ ಅವರ ಹೆಸರು ಇತ್ತೀಚಿನ ದಿನಗಳಲ್ಲಿ ಬೇರೆ ರೀತಿಯ ಚರ್ಚೆಯಾಗುತ್ತಿರುವುದು ಬೇಸರದ ವಿಷಯ ಎಂದರು.
ನಿಜಶರಣ ಅಂಬಿಗರ ಚೌಡಯ್ಯ ಅವರ ಗುರುಪೀಠದ ಶಾಂತಭೀಷ್ಮ ಚೌಡಯ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಪ್ರಮುಖರಾದ ಡಿ.ಎಸ್. ಅರುಣ್, ಎಸ್.ಎಸ್. ಜ್ಯೋತಿಪ್ರಕಾಶ್, ದತ್ತಾತ್ರಿ, ಶಿವಕುಮಾರ್ ಎಸ್., ಸುವರ್ಣಾ ಶಂಕರ್, ಆರತಿ ಆ.ಮ. ಪ್ರಕಾಶ್, ಗಾಂಧಿ ಬಸಪ್ಪ ಮತ್ತು ಹಳದಮ್ಮ ಪ್ರತಿಷ್ಠಾನದ ಎಸ್.ಬಿ. ವಾಸುದೇವ್, ಎಸ್.ಬಿ. ಅಶೋಕ್ ಕುಮಾರ್ ಉಪಸ್ಥಿತರಿದ್ದರು. ಆಯುಕ್ತ ಚಿದಾನಂದ್ ವಟಾರೆ ಸ್ವಾಗತಿಸಿದರು.

https://www.suddikanaja.com/2021/07/15/major-surgery-in-traffic-rules/

error: Content is protected !!