JOBS IN NPCIL | ಎನ್‍ಪಿಸಿಐಎಲ್‍ನಲ್ಲಿ ಭರ್ಜರಿ ಉದ್ಯೋಗ ಅವಕಾಶ, ಅರ್ಜಿ ಸಲ್ಲಿಸಲು 11 ದಿನ ಮಾತ್ರ ಬಾಕಿ

 

 

ಸುದ್ದಿ ಕಣಜ.ಕಾಂ | KARNATAKA | JOB JUNCTION
ಬೆಂಗಳೂರು: ಕಾರವಾರದಲ್ಲಿರುವ ಕೈಗಾದ ನ್ಯೂಕ್ಲಿಯರ್ ಪವರ್ ಕಾರ್ಪೋರೇಷನ್ ಆಫ್ ಇಂಡಿಯಾ ಲಿಮಿಟೆಡ್(ಎನ್.ಪಿ.ಸಿ.ಐ.ಎಲ್)ನಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಕೆಗೆ ಅಕ್ಟೋಬರ್ 15 ಸಂಜೆ 6 ಗಂಟೆ ಕೊನೆಯಾಗಿದೆ.
ಒಟ್ಟು 75 ಹುದ್ದೆಗಳಿಗೆ ನೇಮಕಾತಿ ನಡೆಯಲಿದ್ದು, ಐಟಿಐ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳು ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಸೆಪ್ಟೆಂಬರ್ 30 ಬೆಳಗ್ಗೆ 10ರಿಂದ ಅರ್ಜಿ ಸಲ್ಲಿಕೆ ಆರಂಭವಾಗಿದೆ.

ಸಂಬಂಧಪಟ್ಟ ವಿಷಯದಲ್ಲಿ ಐಟಿಐ ವಿದ್ಯಾರ್ಹತೆ ಹೊಂದಿರುವವರು ಅರ್ಜಿಗಳನ್ನು ಸಲ್ಲಿಸಬಹುದಾಗಿದ್ದು, ಅಪ್ರೆಂಟಿಸ್ ಅವಧಿ ಒಂದು ವರ್ಷದ್ದಾಗಿರಲಿದೆ. ಕನಿಷ್ಠ 14ರಿಂದ ಗರಿಷ್ಠ 24 ವರ್ಷದೊಳಗಿನವರು ಅರ್ಜಿ ಸಲ್ಲಿಸಬಹುದು. ಹಿಂದುಳಿದ ವರ್ಗದವರಿಗೆ ವಯೋಮಿತಿ ಸಡಿಲಿಕೆ ಇರಲಿದೆ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

ಟ್ರೇಡ್’ವಾರು ಹುದ್ದೆಗಳ ಪೂರ್ಣ ವಿವರ
ಫಿಟ್ಟರ್ 20, ಟರ್ನರ್ 4, ಮೆಕ್ಯಾನಿಸ್ಟ್ 2, ಎಲೆಕ್ಟ್ರಿಷಿಯನ್ 30, ವೆಲ್ಡರ್ 4, ಎಲೆಕ್ಟ್ರಾನಿಕ್ ಮೆಕ್ಯಾನಿಕ್ 9, ಡ್ರಾಫ್ಟ್‍ಮನ್ (ಸಿವಿಲ್) 4, ಸರ್ವೇಯರ್ 2 ಸೇರಿ ಒಟ್ಟು 75 ಹುದ್ದೆಗಳ ನೇಮಕಾತಿ ನಡೆಯಲಿದೆ.

NOTIFICATION

CLICK HERE TO APPLY

https://www.suddikanaja.com/2021/09/26/hescom-job-recruitment/

error: Content is protected !!