ಹಳೇ ನಾಣ್ಯ ಖರೀದಿಸುವ ನೆಪದಲ್ಲಿ ಮಹಿಳೆಗೆ ₹17.69 ಲಕ್ಷ ವಂಚನೆ, ಠಾಣೆ ಮೆಟ್ಟಿಲೇರಿದ ಕೇಸ್

 

 

ಸುದ್ದಿ ಕಣಜ.ಕಾಂ | DISTRICT | CYBER CRIME
ಶಿವಮೊಗ್ಗ: ಅಪರಿಚತ ವ್ಯಕ್ತಿಯೊಬ್ಬರು ಹಳೇ ನಾಣ್ಯ ಖರೀದಿಸುವುದಾಗಿ ನಂಬಿಸಿ ಮಹಿಳೆಯೊಬ್ಬರಿಗೆ ಮೋಸ ಮಾಡಿರುವ ಘಟನೆ ಇತ್ತೀಚೆಗೆ ನಡೆದಿದ್ದು, ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿದೆ.
ಭದ್ರಾವತಿ ತಾಲೂಕಿನ ಗಾಂಧಿನಗರದ ಮಹಿಳೆಯೊಬ್ಬರು ₹17,67,901 ಮೋಸ ಹೋಗಿದ್ದು, ಶಿವಮೊಗ್ಗ ಸಿಇಎನ್ ಪೊಲೀಸ್ ಠಾಣೆಗೆ ಅಕ್ಟೋಬರ್ 4ರಂದು ದೂರು ನೀಡಿದ್ದಾರೆ.

ಆನ್ಲೈನ್ ನಲ್ಲಿ ನಾಣ್ಯ ಜಾಹೀರಾತು

ಆನ್ಲೈನ್ ಆಪ್ ವೊಂದರಲ್ಲಿ ಮಹಿಳೆಯು ಹಳೇ ನಾಣ್ಯಗಳಿರುವುದಾಗಿ ಜಾಹೀರಾತು ಹಾಕಿದ್ದರು. ಅದನ್ನು ನೋಡಿ ಅಪರಿಚಿತ ವ್ಯಕ್ತಿಯೊಬ್ಬರು ಖರೀದಿಸುವುದಾಗಿ ಸಂಪರ್ಕಿಸಿದ್ದಾರೆ. ವಿವಿಧ ಕಾರಣಗಳನ್ನು ನೀಡಿ ಅವರಿಂದ 2021ರ ಜುಲೈ 14ರಿಂದ ಸೆಪ್ಟೆಂಬರ್ 29ರ ವರೆಗೆ ಹಂತ ಹಂತವಾಗಿ ವಿವಿಧ ಬ್ಯಾಂಕ್ ಖಾತೆಗಳಿಗೆ ₹17,67,901 ಹಣವನ್ನು ಹಾಸಿಕೊಂಡಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ವಂಚಿಸಿದ ವ್ಯಕ್ತಿಯ ವಿರುದ್ಧ ಸೂಕ್ತ ಕಾನೂನು ಕ್ರಮಕೈಗೊಳ್ಳಬೇಕು ಎಂದು ದೂರಿನಲ್ಲಿ ಮನವಿ ಮಾಡಿದ್ದಾರೆ.

https://www.suddikanaja.com/2020/12/12/fraud-in-the-name-of-jan-dhan-scheme-in-bengaluru/

error: Content is protected !!