ತಮ್ಮ ಹೊಸ ಐಷಾರಾಮಿ ಕಾರಿನಲ್ಲೇ ಆರ್.ಸಿ.ಬಿ ಮ್ಯಾಚ್ ವೀಕ್ಷಿಸಿದ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ

 

 

ಸುದ್ದಿ ಕಣಜ.ಕಾಂ | KARNATAKA | POLITICAL NEWS
ಶಿವಮೊಗ್ಗ: ಜಿಲ್ಲಾ ಪ್ರವಾಸದಲ್ಲಿರುವ ನಿಕಟ ಪೂರ್ವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಶುಕ್ರವಾರ ರಾತ್ರಿ ನಡೆದ ಆರ್.ಸಿ.ಬಿ (ರಾಯಲ್ ಚಾಲೆಂಜರ್ಸ್ ಬೆಂಗಳೂರು) ಪಂದ್ಯಾವಳಿಯನ್ನು ತಮ್ಮ ಹೊಸ ಐಷಾರಾಮಿ ಕಾರಿನಲ್ಲಿ ಬಹು ಕುತೂಹಲದಿಂದ ವೀಕ್ಷಿಸಿದರು.
ದುಬೈ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಟಿ-20 ಪಂದ್ಯಾವಳಿಯ ರೋಚಕ ಕ್ಷಣಗಳನ್ನು ಯಡಿಯೂರಪ್ಪ ಅವರು ಶಿವಮೊಗ್ಗದಿಂದ- ಶಿಕಾರಿಪುರಕ್ಕೆ ಬರುವಾಗ ಕಾರಿನಲ್ಲಿಯೇ ವೀಕ್ಷಿಸಿದ್ದು ವಿಶೇಷವಾಗಿತ್ತು.

ಕೊನೆಯ ಎಸೆತದವರೆಗೂ ಭಾರೀ ಕುತೂಹಲಕ್ಕೆ ಕಾರಣವಾಗಿದ್ದ ಪಂದ್ಯಾವಳಿಯ ಮೈನವಿರೇಳಿಸುವ ದೃಶ್ಯಗಳನ್ನು ಯಡಿಯೂರಪ್ಪ ಅವರು ಆಸ್ವಾದಿಸಿದರು.

ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಮಣಿಸಿ ಪ್ಲೇ ಆಫ್ ಪ್ರವೇಶಿಸಿದ ಆರ್.ಸಿ.ಬಿ.ಯ ಗೆಲುವು ಕಂಡ ಪಂದ್ಯಾವಳಿಯನ್ನು ಅತ್ಯಂತ ತಲ್ಲೀನತೆಯಿಂದ ನೋಡಿದರು.
ರಿಲ್ಯಾಕ್ಸ್ ಮೂಡಿನಲ್ಲಿ ಯಡಿಯೂರಪ್ಪ
ಯಡಿಯೂರಪ್ಪ ಅವರೂ ಅತೀ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ಆರ್.ಸಿ.ಬಿ. ತಂಡದ ಅಭಿಮಾನಿಯಾಗಿದ್ದು, ವಿದೇಶಿ ನೆಲದಲ್ಲಿ ನಡೆಯುತ್ತಿರುವ ಪಂದ್ಯದ ವೀಕ್ಷಿಸಿದರು. ಸದಾ ರಾಜಕೀಯ ಪಕ್ಷದ ಕಾರ್ಯಕ್ರಮ, ಅಭಿವೃದ್ಧಿ ಕಾಮಗಾರಿ ಇತ್ಯಾದಿಗಳ ಕಡೆಗೆ ಚಿತ್ತ ನೆಟ್ಟಿರುವ ಯಡಿಯೂರಪ್ಪ ಅವರು ರಿಲ್ಯಾಕ್ಸ್ ಮೂಡ್ ನಲ್ಲಿ ಕ್ರಿಕೆಟ್ ಪಂದ್ಯವನ್ನು ನೋಡಿದರು.

https://www.suddikanaja.com/2021/08/25/bs-yediyurappa-purchased-new-car/

error: Content is protected !!