ಅದ್ಧೂರಿ ಶಿವಮೊಗ್ಗ ದಸರಾಗೆ ತೆರೆ, ಧಗ ಧಗನೇ ಹೊತ್ತಿ ಉರಿದ ರಾವಣ, ಹೇಗಿತ್ತು ನಾಡ ಹಬ್ಬ?

 

 

ಸುದ್ದಿ ಕಣಜ.ಕಾಂ | DISTRICT | SHIVAMOGGA DASARA
ಶಿವಮೊಗ್ಗ: ಮಹಾನಗರ ಪಾಲಿಕೆಯಿಂದ ಆಯೋಜಿಸಿದ್ದ ನಾಡಹಬ್ಬ ದಸರಾ ಅಂಬು ಕಡಿಯುವ ಮೂಲಕ ಶುಕ್ರವಾರ ಸಂಪನ್ನಗೊಂಡಿದೆ. ಅತ್ಯಂತ ವಿಜೃಂಬಣೆಯಿಂದ ನಡೆದ ಕಾರ್ಯಕ್ರಮದಲ್ಲಿ ನಗರದ ಜನ ಸಾಕ್ಷಿಯಾಗಿದರು.

ಅದ್ಧೂರಿ ಶಿವಮೊಗ್ಗ ದಸರಾ ಮೆರವಣಿಗೆ, ಅಂಬು ಕಡಿದು ಸಂಪನ್ನ. ಕಂಪ್ಲೀಟ್ ವಿಡಿಯೋ ರಿಪೋರ್ಟ್‍ಗಾಗಿ ಲಿಂಕ್ ಮೇಲೆ ಕ್ಲಿಕ್ಕಿಸಿ

ಸಕ್ರೆಬೈಲು ಆನೆಬಿಡಾರದ ಆನೆಗಳಾದ ಸಾಗರ ಮತ್ತು ಭಾನುಮತಿಯ ನೇತೃತ್ವದಲ್ಲಿ ನಡೆದ ತಾಯಿ ಚಾಮುಂಡೇಶ್ವರಿ ದೇವಿಯ ಮೆರವಣಿಗೆಯನ್ನು ಜನರು ಕಣ್ತುಂಬಿಕೊಂಡರು. ಸರ್ಕಾರದ ಸೂಚನೆ ಇದ್ದುದ್ದರಿಂದ ಈ ಸಲ ಜಂಬೂ ಸವಾರಿ ಇರಲಿಲ್ಲ. ಅಂಬಾರಿಯನ್ನು ವಾಹನದಲ್ಲಿಟ್ಟು ಮೆರವಣಿಗೆ ಮಾಡಿದರೆ, ಆನೆಗಳು ಅದರಲ್ಲಿ ಭಾಗಿಯಾಗಿದ್ದವು.
ಕೋಟೆ ಶ್ರೀ ಸೀತಾರಾಮಾಂಜನೇಯಸ್ವಾಮಿ ದೇವಸ್ಥಾನ ಮುಂದೆ ನಂದಿಕೋಲಿಗೆ ಪೂಜೆ ಸಲ್ಲಿಸಿ ಮೆರವಣಿಗೆಗೆ ಚಾಲನೆ ನೀಡಲಾಯಿತು. ಮೇಯರ್ ಸುನೀತಾ ಅಣ್ಣಪ್ಪ, ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಪುಷ್ಪಗಳಿಂದ ಅಲಂಕೃತವಾದ ಲಾರಿಯಲ್ಲಿ ಸಾಗಿದ ಅಂಬಾರಿ ಮೆರವಣಿಗೆಯು ನಗರದ ಕೋಟೆ ರಸ್ತೆಯಿಂದ ಹೊರಟ ಮೆರವಣಿಗೆಯು ರಾಮಣ್ಣ ಶ್ರೇಷ್ಠಿ ಪಾರ್ಕ್, ಗಾಂಧಿ ಬಜಾರ್ ಮುಖ್ಯರಸ್ತೆ, ಶಿವಪ್ಪ ನಾಯಕ ನೃತ್ತ, ನೆಹರೂ ರಸ್ತೆ, ದುರ್ಗಿಗುಡಿ ಮುಖ್ಯ ರಸ್ತೆ, ಜೈಲು ರಸ್ತೆ ಮೂಲಕ ಹಳೇ ಜೈಲು ಆವರಣಕ್ಕೆ ತಲುಪಿತು. ಮೆರವಣಿಗೆಯಲ್ಲಿ ವೀರಗಾಸೆ, ಮಂಗಳವಾದ್ಯಗಳನ್ನು ನುಡಿಸಲಾಯಿತು.

Shivamogga dasara 1 2
ಶಿವಮೊಗ್ಗದಲ್ಲಿ ಅಂಬಾರಿ ಮೆರವಣಿಗೆ.

ಫ್ರೀಡಂ ಪಾರ್ಕ್ ಆವರಣದಲ್ಲಿ ಅಂಬು ಕಡಿದು ದಸರಾ ಸಂಪನ್ನ
ಮೆರವಣಿಗೆಯು ಫ್ರೀಡಂ ಪಾರ್ಕ್ (ಹಳೇ ಜೈಲು) ಆವರಣಕ್ಕೆ ತಲುವುದಕ್ಕೆ ಮುನ್ನವೇ ಸಾವಿರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಸಮಾರಂಭ ಸ್ಥಳದಲ್ಲಿ ನೆರೆದಿದ್ದರು.
ಸಂಪ್ರದಾಯದಂತೆ ತಹಸೀಲ್ದಾರ್ ಅವರು ಅಂಬು ಕಡಿದು ವಿಜಯ ದಶಮಿಯನ್ನು ಸಂಪನ್ನಗೊಳಿಸಿದರು. ಅಂಬು ಕಡಿದಿದ್ದೇ ಜಯಘೋಷಗಳು ಮೊಳಗಿದವು. ಭಕ್ತಾದಿಗಳು ಆ ಕ್ಷಣವನ್ನು ಕಣ್ತುಂಬಿಕೊಂಡರು. ನಂತರ, ಬಾಣ ಬಿರುಸುಗಳನ್ನು ಹಾರಿಸಲಾಯಿತು.
ಸಚಿವ ಕೆ.ಎಸ್.ಈಶ್ವರಪ್ಪ, ಮೇಯರ್ ಸುನೀತಾ ಅಣ್ಣಪ್ಪ, ಪಾಲಿಕೆ ಸದಸ್ಯರು ಉಪಸ್ಥಿತರಿದ್ದರು.

https://www.suddikanaja.com/2021/10/15/heavy-rainfall-in-shivamogga-4/

error: Content is protected !!