ಶಿವಮೊಗ್ಗ ತಾಲೂಕಿನ 40 ಗ್ರಾಮ ಪಂಚಾಯಿತಿ, ತೀರ್ಥಹಳ್ಳಿಯ 38 ಮತ್ತು ಭದ್ರಾವತಿಯ 35 ಪಂಚಾಯಿತಿಗಳಿಗೆ ಡಿಸೆಂಬರ್ 22ರಂದು ಚುನಾವಣೆ ನಡೆಯಲಿದೆ. ಅದಕ್ಕಾಗಿ, ಎಲ್ಲ ಪೂರ್ವ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ.
ಶಿವಮೊಗ್ಗ ತಾಲೂಕು ವ್ಯಾಪ್ತಿಯ ಮಸ್ಟರಿಂಗ್ ಅನ್ನು ನಗರದ ಎನ್.ಇ.ಎಸ್.ನಲ್ಲಿ ಮಾಡಲಾಗಿತ್ತು. ಸೋಮವಾರ ಬೆಳಗ್ಗೆಯಿಂದಲೇ ಇಲ್ಲಿ ಚುನಾವಣೆ ವಾತಾವರಣ ಮನೆ ಮಾಡಿತ್ತು. ಚುನಾವಣೆಗಾಗಿ ನಿಯೋಜನೆಗೊಂಡಿರುವ ಸಿಬ್ಬಂದಿ ಮತ್ತು ಅಧಿಕಾರಿಗಳು ಕರ್ತವ್ಯಕ್ಕೆ ಹಾಜರಾದರು.
ಮತದಾರರ ಪಟ್ಟಿಯಲ್ಲಿ ಮತದಾರರ ಚಿತ್ರ ಸರಿಯಾಗಿ ಕಾಣದಿರುವುದು, ಗ್ರಾಪಂ ಚುನಾವಣೆ ಕೆಲಸಕ್ಕೆ ನಿಯೋಜನೆಗೊಂಡ ಕೆಲವರು ವಿಳಂಬವಾಗಿ ಬಂದಿದ್ದು, ಹೀಗೆ ಕೆಲವು ಗೊಂದಲಗಳ ನಡುವೆಯೇ ಮಸ್ಟರಿಂಗ್ ಕಾರ್ಯ ನಡೆಯುತ್ತಿದೆ. 50 ರೂಟ್ಗೆ 47 ಬಸ್, 7 ಜೀಪ್: ಶಿವಮೊಗ್ಗ ತಾಲೂಕಿಗೆ 50 ಮಾರ್ಗಗಳನ್ನು ಗುರುತಿಸಲಾಗಿದೆ. ಅದರಲ್ಲಿ 43 ಬಸ್ ಮಾರ್ಗಗಳಿದ್ದು, 47 ಬಸ್ಗಳನ್ನು ನಿಯೋಜಿಸಲಾಗಿದೆ. ಅದೇ ರೀತಿ, 8 ಮಾರ್ಗಗಳಿಗೆ 7 ಜೀಪ್ ನೀಡಲಾಗಿದೆ. ಅಧಿಕಾರಿಗಳ ಓಡಾಟಕ್ಕೆ ಜೀಪ್ ಸೌಲಭ್ಯ ಕಲ್ಪಿಸಲಾಗಿದೆ. ಬಸ್ನಲ್ಲಿ ಸಿಬ್ಬಂದಿ ಮತ್ತು ಬ್ಯಾಲೆಟ್ ಪೇಪರ್, ಬಾಕ್ಸ್ ಇನ್ನಿತರ ಸೌಲಭ್ಯಗಳನ್ನು ನೀಡಲಾಗಿದೆ.
ಬಿಗಿ ಭದ್ರತೆ: ಮಾಸ್ಟರಿಂಗ್ ಕೇಂದ್ರದಲ್ಲಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜನೆ ಮಾಡಿದರೆ, ಇಡೀ ರಾತ್ರಿ ಪಂಚಾಯಿತಿಯಲ್ಲೇ ಚುನಾವಣೆ ಸಿಬ್ಬಂದಿ ಇರಬೇಕಾಗಿರುವುದರಿಂದ ಅಲ್ಲಿ ಹೋಂ ಗಾಡ್ರ್ಸ್ ಮತ್ತು ಪೊಲೀಸರನ್ನು ನಿಯೋಜಿಸಲಾಗಿದೆ.
ಸುದ್ದಿ ಕಣಜ.ಕಾಂ ಶಿವಮೊಗ್ಗ SHIVAMOGGA: ಭದ್ರಾವತಿ – ಮಸರಹಳ್ಳಿ ರೈಲ್ವೆ ಮಾರ್ಗದಲ್ಲಿ ಸುಮಾರು 50 ರಿಂದ 55 ವರ್ಷದ ಅಪರಿಚಿತ ಪುರುಷ ರೈಲಿಗೆ ಸಿಕ್ಕು ಮೃತಪಟ್ಟಿರುತ್ತಾರೆ. ವ್ಯಕ್ತಿಯ ಗುರುತು ಈತನ ಚಹರೆ ಸುಮಾರು […]
ಸುದ್ದಿ ಕಣಜ.ಕಾಂ | DISTRICT | JOB JUCNTION ಶಿವಮೊಗ್ಗ: ಪಿಯುಸಿ ಮತ್ತು ಯಾವುದೇ ಪದವಿಯಲ್ಲಿ ಪಾಸ್ ಆದವರಿಗೆ ಶಿವಮೊಗ್ಗ ಮತ್ತು ಬೆಂಗಳೂರಿನಲ್ಲಿ ಉದ್ಯೋಗ ಅವಕಾಶವಿದೆ. ಮಾಹಿತಿಗಾಗಿ ಕೆಳಗಿನ ವಿವರಗಳನ್ನು ಓದಿ, ಸಂಪರ್ಕಿಸಿ. […]
ಸುದ್ದಿ ಕಣಜ.ಕಾಂ ತೀರ್ಥಹಳ್ಳಿ THIRTHAHALLI: ಚಿಡುವ ಗ್ರಾಮದ ಶ್ರೀ ವೀರಾಂಜನೇಯ ದೇವಸ್ಥಾನದ ಬಾಗಿಲು ಒಡೆದು ಕಳವು ಮಾಡಿದ ಪ್ರಕರಣ ಸಂಬಂಧ ಆರೋಪಿಗಳನ್ನು ಬಂಧಿಸಲಾಗಿದೆ. ಭದ್ರಾವತಿಯ ಹೊಸಬುಳ್ಳಾಪುರ ನಿವಾಸಿ ಅರುಣ್ ಕುಮಾರ್ ಜಿ ಅಲಿಯಾಸ್ […]