10 ವರ್ಷಗಳ ಬಳಿಕ ಕಮಲಕ್ಕೆ ಒಲಿದ ಹೊಸನಗರ

 

 

ಸುದ್ದಿ ಕಣಜ.ಕಾಂ ಹೊಸನಗರ: ಕುತೂಹಲ ಕೆರಳಿಸಿದ್ದ ಹೊಸನಗರ ಪಟ್ಟಣ ಪಂಚಾಯಿತಿ ಉಪಾಧ್ಯಕ್ಷರ ಸ್ಥಾನ ಬಿಜೆಪಿಗೆ ಒಲಿಯುವ ಮೂಲಕ ಹತ್ತು ವರ್ಷಗಳ ಬಳಿಕ ಪಪಂ ಮೇಲೆ ಕಮಲ ಅಧಿಪತ್ಯ ಸಾಧಿಸಿದೆ. ಮಂಗಳವಾರ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿಯ ಗುಲಾಬಿ ಮರಿಯಪ್ಪ, ಉಪಾಧ್ಯಕ್ಷರಾಗಿ ಕೃಷ್ಣವೇಣಿ ಆಯ್ಕೆಯಾಗಿದ್ದಾರೆ.
ಅಧ್ಯಕ್ಷ ಸ್ಥಾನ ಪರಿಶಿಷ್ಟ ಜಾತಿ (ಮಹಿಳೆ)ಗೆ ಮೀಸಲು ನಿಗದಿಯಾಗಿದ್ದರಿಂದ ಸರಾಗವಾಗಿ ಬಿಜೆಪಿ ತೆಕ್ಕೆಗೆ ಸಿಕ್ಕಿದೆ. ಆದರೆ, ಉಪಾಧ್ಯಕ್ಷರ ಗಾದಿಗಾಗಿ ತೀವ್ರ ಸ್ಪರ್ಧೆ ಏರ್ಪಟ್ಟಿತ್ತು. ಆದರೆ, ಜೆಡಿಎಸ್‌ನ ಕೃಷ್ಣವೇಣಿ ಮತ್ತು ಕಾಂಗ್ರೆಸ್‌ನ ನಾಗಪ್ಪ ಅವರನ್ನು ಬಿಜೆಪಿ ತನ್ನತ್ತ ಸೆಳೆಯಿತು. ಉಪಾಧ್ಯಕ್ಷ ಸ್ಥಾನದಲ್ಲಿ ಸ್ಪರ್ಧಿಸಿ ಕೃಷ್ಣವೇಣಿ ಆಯ್ಕೆಯಾದರು.
ಸಂಖ್ಯಾಬಲ: ಹೊಸನಗರ ಪಟ್ಟಣ ಪಂಚಾಯಿತಿಯಲ್ಲಿ ಒಟ್ಟು 11 ಸ್ಥಾನಗಳಿದ್ದು, ಅದರಲ್ಲಿ ಬಿಜೆಪಿ 4, ಕಾಂಗ್ರೆಸ್ 4 ಮತ್ತು ಜೆಡಿಎಸ್ 3 ಸ್ಥಾನ ಗಳಿಸಿದ್ದವು.
ನಂಬರ್ ಮ್ಯಾಜಿಕ್: ಕಾಂಗ್ರೆಸ್, ಜೆಡಿಎಸ್ ಹೊಂದಾಣಿಕೆ ಬಳಿಕ 7 ಸೀಟುಗಳಾಗಿದ್ದವು. ಆದರೆ, ಇಬ್ಬರು ಬಿಜೆಪಿಗೆ ಪಕ್ಷಾಂತರಗೊ0ಡಿದ್ದರಿoದ ಕಮಲ ಪಾಳಯದ ಸಂಖ್ಯಾಬಲ ಆರು ಆಯಿತು. 11 ಜನ ಚುನಾಯಿತ ಸದಸ್ಯರು, ಸಂಸದರು ಮತ್ತು ಶಾಸಕರು ಸೇರಿ ಒಟ್ಟು 13 ಮತ ಚಲಾವಣೆಗೊಂಡವು. ಅದರಲ್ಲಿ ಬಿಜೆಪಿಯ ಕೃಷ್ಣವೇಣಿ 8 ಮತ ಪಡೆದರೆ, ಪ್ರತಿಸ್ಪರ್ಧಿ ಕಾಂಗ್ರೆಸ್‌ನ ಚಂದ್ರಕಲಾ ಅವರು 5 ಮತ ಗಳಿಸಿದರು.

Leave a Reply

Your email address will not be published. Required fields are marked *

error: Content is protected !!