Shivamogga dasara | ಯಾವಾಗ ಬರಲಿದೆ ಗಜಪಡೆ, ಯಾವ ಆನೆಗಳು ದಸರಾದಲ್ಲಿ ಭಾಗಿ?, ಮಕ್ಕಳ ದಸರಾ ಯಾವ ದಿನ ಯಾವ ಸ್ಪರ್ಧೆ?

shivamogga dasara elephant

 

 

ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಮಹಾನಗರ ಪಾಲಿಕೆಯಿಂದ ಹಮ್ಮಿಕೊಂಡಿರುವ ದಸರಾ ಉತ್ಸವದಲ್ಲಿ ಶ್ರೀ ಚಾಮುಂಡೇಶ್ವರಿ ದೇವಿಯ ವಿಗ್ರಹವನ್ನು ಸಕ್ರೆಬೈಲಿನ ಆನೆಬಿಡಾರದ ಮೂರು ಆನೆಗಳು ಅಂಬಾರಿ ಹೊತ್ತು ಮೆರವಣಿಗೆಯಲ್ಲಿ ಸಾಗುವುದು ವಿಶೇಷ ಆಕರ್ಷಣೆಯಾಗಿದೆ ಎಂದು ದಸರಾ ಉತ್ಸವ ಸಮಿತಿ ಅಧ್ಯಕ್ಷ ಯು.ಎಚ್.ವಿಶ್ವನಾಥ್ (H.U.Vishwanath) ತಿಳಿಸಿದರು.
ಪಾಲಿಕೆ ಆವರಣದಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಅರಣ್ಯ ಮತ್ತು ವನ್ಯಜೀವಿ ಸಂರಕ್ಷಣಾ ಇಲಾಖೆಯ ಸಹಕಾರದೊಂದಿಗೆ ಪ್ರತಿ ವರ್ಷವೂ ಮೂರು ಆನೆಗಳು ದಸರಾ ಉತ್ಸವದಲ್ಲಿ ಪಾಲ್ಗೊಳ್ಳುತ್ತಿವೆ. ಈ ವರ್ಷ ಪಾಲ್ಗೊಳ್ಳುವ ಸಾಗರ್, ನೇತ್ರಾವತಿ ಹಾಗೂ ಹೇಮಾವತಿ ಆನೆಗಳನ್ನು ಅ.20ರಂದು ಸಂಜೆ 5.30ಕ್ಕೆ ವಾಸವಿ ಪಬ್ಲಿಕ್ ಶಾಲೆ ಆವರಣದಲ್ಲಿ ಸ್ವಾಗತಿಸಲಾಗುವುದು ಎಂದರು.

UH Vishwanath
ದಸರಾ ಉತ್ಸವ ಸಮಿತಿ ಅಧ್ಯಕ್ಷ ಯು.ಎಚ್.ವಿಶ್ವನಾಥ್

READ | ಕರೋನಾ ನಿಯಮ ಉಲ್ಲಂಘನೆ, ಮೂರು ವರ್ಷಗಳಿಂದ ಕೋರ್ಟ್ ಅಲೆಯುತ್ತಿರುವ ವ್ಯಕ್ತಿ

ಮೂರು ದಿನಗಳ ಕಾಲ ಗಜಪಡೆ ತಾಲೀಮು
ಅ.20ರಂದು ಆಗಮಿಸಲಿರುವ ಆನೆಗಳು ಮೂರು ದಿನಗಳ ಕಾಲ ವಾಸವಿ ಪಬ್ಲಿಕ್ ಶಾಲೆ(vasavi public school) ಯಿಂದ ಫ್ರೀಡಂ ಪಾರ್ಕ್‍(Freedom park)ವರೆಗೆ ತಾಲೀಮು ನಡೆಸಲಿವೆ. ಅ.15ರಿಂದ 24ರ ವರೆಗೆ ನಡೆಯುವ ಎಲ್ಲಾ ಕಾರ್ಯಕ್ರಮಗಳಿಗೆ ರಕ್ಷಣೆ ಹಾಗೂ ಭದ್ರತೆ ಒದಗಿಸಲು ಪೊಲೀಸ್ ವರಿಷ್ಠಾಧಿಕಾರಿಗೆ ಮನವಿ ಮಾಡಿಕೊಳ್ಳಲಾಗಿದೆ ಎಂದರು.
ಅ.24ರ ಮಧ್ಯಾಹ್ನ 2.30ಕ್ಕೆ ದಸರಾ ಉತ್ಸವ ಮೆರವಣಿಗೆಗೆ ನಂದಿಧ್ವಜ ಪೂಜೆಯನ್ನು ಕೋಟೆ ಶ್ರೀ ಆಂಜನೇಯ ದೇವಸ್ಥಾನದ (Kote anjaneya swamy temple) ಎದುರು ಮೇಯರ್ ಎಸ್. ಶಿವಕುಮಾರ್ (shimoga mayor S.Shivakumar) ಸಲ್ಲಿಸುವುದರ ಮೂಲಕ ಚಾಲನೆ ನೀಡಲಿದ್ದಾರೆ. ಚುನಾಯಿತ ಪ್ರತಿನಿಧಿಗಳು, ಇಲಾಖೆಯ ಅಧಿಕಾರಿಗಳು ಹಾಗೂ ಗಣ್ಯರು ಪಾಲ್ಗೊಳ್ಳಲಿದ್ದಾರೆ. ನಂತರ ನಡೆಯುವ ರಾಜಬೀದಿ ಉತ್ಸವದಲ್ಲಿ ವೀರಗಾಸೆ, ಚಂಡೆ, ಕೀಲುಕುದುರೆ, ಡೊಳ್ಳು, ಯಕ್ಷಗಾನ ಬೊಂಬೆಗಳು ಸೇರಿದಂತೆ ವಿವಿಧ ಸಾಂಸ್ಕೃತಿಕ ತಂಡಗಳೊಂದಿಗೆ ಮೆರವಣಿಗೆ ಹೊರಟು ಬನ್ನಿ ಮುಡಿಯುವ ಸ್ಥಳವಾದ ಫ್ರೀಡಂ ಪಾರ್ಕಿಗೆ ತಲುಪಲಿದೆ ಎಂದರು.
ಸುಮಾರು 205 ದೇವಾನುದೇವತೆಗಳ ಉತ್ಸವ ಮೂರ್ತಿಗಳ ಪಲ್ಲಕ್ಕಿಯ ಅಲಂಕಾರಕ್ಕಾಗಿ ಪ್ರತಿ ವರ್ಷದಂತೆ ಗೌರವ ಧನ ನೀಡಲಾಗುತ್ತಿದೆ. ತಹಶೀಲ್ದಾರ್ ಅವರು ಸಂಜೆ 6.30ಕ್ಕೆ ಬನ್ನಿ ಮುಡಿಯುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದು, ನಂತರ ಆಕರ್ಷಕ ಪಟಾಕಿ, ಸಿಡಿಮದ್ದು, ರಾವಣದಹನ ನಡೆಯಲಿದೆ ಎಂದರು.
ಶಾಸಕ ಎಸ್.ಎನ್. ಚನ್ನಬಸಪ್ಪ, ಪಾಲಿಕೆ ಸದಸ್ಯರಾದ ಎಸ್. ಜ್ವಾನೇಶ್ವರ್, ಎಸ್.ಎನ್. ಮಂಜುನಾಥ್, ಎಸ್.ಜಿ. ರಾಜು, ಲಕ್ಷ್ಮೀ ಶಂಕರ ನಾಯಕ, ಅನಿತಾ ರವಿಶಂಕರ್, ರೇಖಾ ರಂಗನಾಥ್ ಇನ್ನಿತರರಿದ್ದರು.

ಮಕ್ಕಳ ದಸರಾದಲ್ಲಿ ವಿವಿಧ ಸ್ಪರ್ಧೆಗಳು

Rekha ranganath
ಮಕ್ಕಳ ದಸರಾ ಸಮಿತಿ ಅಧ್ಯಕ್ಷೆ ರೇಖಾ ರಂಗನಾಥ್

SHIMOGA: ನಮ್ಮೂರ ನಾಡ ಹಬ್ಬ ಶಿವಮೊಗ್ಗ ದಸರಾ (Shimoga dasara 2023) ಅಂಗವಾಗಿ ಮಕ್ಕಳ ದಸರಾ ವತಿಯಿಂದ ಅ.16, 17 ಹಾಗೂ 18ರಂದು ವಿವಿಧ ಕಾರ್ಯಕ್ರಮವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ ಎಂದು ಮಕ್ಕಳ ದಸರಾ ಸಮಿತಿ ಅಧ್ಯಕ್ಷೆ ರೇಖಾ ರಂಗನಾಥ್ (Rekha Ranganath) ತಿಳಿಸಿದರು.
ಪಾಲಿಕೆ ಕಚೇರಿಯಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಅ.16ರ ಬೆಳಗ್ಗೆ 10 ಗಂಟೆಗೆ ನೆಹರೂ ಒಳಾಂಗಣ ಕ್ರೀಡಾಂಗಣದಲ್ಲಿ 14ರಿಂದ 17 ವರ್ಷ ವಯಸ್ಸಿನ ಮಕ್ಕಳ ರಾಜ್ಯ ಮಟ್ಟದ ಸಬ್ ಜ್ಯೂನಿಯರ್ ಕರಾಟೆ ಪಂದ್ಯಾವಳಿಗಳು, ರಾಜ್ಯ ಮತ್ತು ಜಿಲ್ಲಾ ಕರಾಟೆ ಅಸೋಸಿಯೇಷನ್ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದೆ. ಆಡಳಿತ ಪಕ್ಷದ ನಾಯಕ ಎಸ್.ಜ್ಞಾನೇಶ್ವರ್ ಪಂದ್ಯಾವಳಿ ಉದ್ಘಾಟಿಸುವರು. ಮುಖ್ಯ ಅತಿಥಿಯಾಗಿ ರಾಜ್ಯ ಕರಾಟೆ ಅಸೋಸಿಯೇಷನ್ ಅಧ್ಯಕ್ಷ ಎಂ ಅಲ್ತಾಫ್ ಪಾಶಾ, ಜಿಲ್ಲಾ ಸೀನಿಯರ್ ಕರಾಟೆ ಮಾಸ್ಟರ್ ಸುರೇಂದ್ರ ಶಾಸ್ತ್ರಿ ಹಾಗೂ ಇನ್ನಿತರರು ಭಾಗವಹಿಸಲಿದ್ದಾರೆ ಎಂದರು.

READ | ತಾಳಗುಪ್ಪ-ಹೊಸೂರು ರೈಲ್ವೆ ಮೇಲ್ಸೇತುವೆ, ಚಿತ್ರದುರ್ಗ- ಶಿವಮೊಗ್ಗ, ಶಿಕಾರಿಪುರ ರಿಂಗ್ ರೋಡ್ ಸರ್ವೆ ಪೂರ್ಣಕ್ಕೆ ಡೆಡ್ ಲೈನ್ ನೀಡಿದ‌ ಡಿಸಿ

ಯಾವ ದಿನ ಯಾವ ಪಂದ್ಯಾವಳಿ?

  • ಅ.17ರ ಬೆಳಗ್ಗೆ 10.30ಕ್ಕೆ ನೆಹರೂ ಒಳಾಂಗಣ ಕ್ರೀಡಾಂಗಣದಲ್ಲಿ 6ರಿಂದ 16 ವರ್ಷ ವಯಸ್ಸಿನ ಮಕ್ಕಳ ರಾಜ್ಯ ಮಟ್ಟದ ಕುಡೊ ಮಾರ್ಷಲ್ ಆಟ್ರ್ಸ್ ಪಂದ್ಯಾವಳಿ ಆಯೋಜಿಸಿದ್ದು, ವಿಧಾನ ಪರಿಷತ್ ಸದಸ್ಯ ಡಿ.ಎಸ್ ಅರುಣ್ ಪಂದ್ಯಾವಳಿ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಯಾಗಿ ಜಿಲ್ಲಾ ಕುಡೊ ಸಂಸ್ಥೆಪ್ರಧಾನ ಕಾರ್ಯದರ್ಶಿ ಶಬ್ಬೀರ್ ಅಹ್ಮದ್, ಸೂಡಾ ಮಾಜಿ ಅಧ್ಯಕ್ಷ ಎನ್. ರಮೇಶ್ ಹಾಗೂ ಇನ್ನಿತರರು ಆಗಮಿಸಲಿದ್ದಾರೆ ಎಂದರು.
  • ಅ.18ರ ಸಂಜೆ 6.30ಕ್ಕೆ ಪ್ರೀಡಂ ಪಾರ್ಕ್‍ನಲ್ಲಿ ನಡೆಯುವ ಮಕ್ಕಳ ದಸರಾ ಸಮಾರೋಪ ಸಮಾರಂಭವನ್ನು ಶಿವಮೊಗ್ಗದವರಾದ ಜ್ಯೂನಿಯರ್ ಡ್ರಾಮಾ ಸೀಸನ್-4ರ ವಿಜೇತೆ ಎಸ್.ರಿಧಿ, ಸರಿಗಮಪ ಸೀಸನ್-14ರ ಹಿನ್ನೆಲೆ ಗಾಯಕಿ ಆರ್.ನೇಹಾ ಉದ್ಘಾಟಿಸಲಿದ್ದಾರೆ. ವಿಶೇಷ ಆಹ್ವಾನಿತರಾಗಿ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ, ಸಂಸದ ಬಿ.ವೈ. ರಾಘವೇಂದ್ರ, ಶಾಸಕರಾದ ಎಸ್.ಎನ್. ಚನ್ನಬಸಪ್ಪ, ಶಾರದಾಪೂರ್ಯಾ ನಾಯ್ಕ ಹಾಲಿ, ಮಾಜಿ ಜನಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ಶಿವಮೊಗ್ಗ ನಗರ ವ್ಯಾಪ್ತಿಯ ಶಾಲಾ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯ ಕ್ರಮ, ಕೊಡಗಿನ ಮ್ಯಾಜಿಕ್ ಸ್ಟಾರ್ ವಿಕ್ರಂ ಶೆಟ್ಟಿರವರಿಂದ ಮ್ಯಾಜಿಕ್ ಶೋ, ಹೆಣ್ಣು ಮಕ್ಕಳಿಂದ ಕರಾಟೆ ಹಾಗೂ ಮಾತನಾಡುವ ಗೊಂಬೆ ಪ್ರದರ್ಶನ ನಡೆಯಲಿದೆ. ಹಾಗೂ ಕ್ರೀಡಾ ವಿಜೇತರಿಗೆ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದರು.

ಶಾಸಕ ಎಸ್.ಎನ್. ಚನ್ನಬಸಪ್ಪ, ಸಮಿತಿಯ ಸದಸ್ಯರಾದ ಆಶಾ ಚಂದ್ರಪ್ಪ, ಆರ್.ಸಿ. ನಾಯಕ್, ಮಂಜುಳಾ ಶಿವಣ್ಣ, ಉಪಮೇಯರ್ ಲಕ್ಷ್ಮಿ ಶಂಕರ ನಾಯಕ್ ಉಪಸ್ಥಿತರಿದ್ದರು.

ಮೂರು ದಿನ ನಡೆಯುವ ಯುವ ದಸರಾದ ವಿಶೇಷಗಳೇನು?

Nagaraj kankari
ಯುವ ದಸರಾ ಸಮಿತಿ ಅಧ್ಯಕ್ಷ ನಾಗರಾಜ ಕಂಕಾರಿ

SHIMOGA: ಶಿವಮೊಗ್ಗ ದಸರಾದಲ್ಲಿ ಯುವ ದಸರಾ ವತಿಯಿಂದ ಅ.15 ಹಾಗೂ ಅ.17ರಿಂದ 21ರ ವರೆಗೆ ವಿವಿಧ ಸ್ಥಳಗಳಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ಯುವ ದಸರಾ ಸಮಿತಿ ಅಧ್ಯಕ್ಷ ನಾಗರಾಜ ಕಂಕಾರಿ (Nagaraj Kankari) ತಿಳಿಸಿದರು.
ಪಾಲಿಕೆ ಕಚೇರಿಯಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಅ.15ರ ಸಂಜೆ 4.30ಕ್ಕೆ ಕುವೆಂಪು ರಂಗಮಂದಿರದಲ್ಲಿ ನಡೆಯುವ ದೇಹದಾಢ್ರ್ಯ ಸ್ಪರ್ಧೆಯನ್ನು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್.ಎಸ್. ಸುಂದರೇಶ್ ಉದ್ಘಾಟಿಸಲಿದ್ದಾರೆ. ಅ.17ರ ಬೆಳಗ್ಗೆ 10.30ಕ್ಕೆ ಮಹಾನಗರ ಪಾಲಿಕೆ ಆವರಣದಲ್ಲಿ ನಡೆಯುವ ಟ್ರಸರ್ ಹಂಟ್ ಅನ್ನು ಜಿಲ್ಲಾ ರಕ್ಷಣಾಧಿಕಾರಿ ಜಿ.ಕೆ. ಮಿಥುನ್ ಕುಮಾರ್ ಉದ್ಘಾಟಿಸಲಿದ್ದಾರೆ ಎಂದರು.
ಅ.18ರ ಸಂಜೆ 5.30ಕ್ಕೆ ಶಿವಪ್ಪ ನಾಯಕ ಮಾಲ್‍ನಲ್ಲಿ ನಡೆಯುವ ಟ್ಯಾಲೆಂಟ್ ಹಂಟ್ ಅನ್ನು ಮೇಯರ್ ಎಸ್.ಶಿವಕುಮಾರ್ ಉದ್ಘಾಟಿಸಲಿದ್ದಾರೆ. 19ರಂದು ಸಂಜೆ 4 ಗಂಟೆಗೆ ನೆಹರೂ ಕ್ರೀಡಾಂಗಣದಲ್ಲಿ ನಡೆಯುವ ಕಬಡ್ಡಿ ಪಂದ್ಯಾವಳಿಯನ್ನು ಜೆಡಿಎಸ್ ಜಿಲ್ಲಾಧ್ಯಕ್ಷ ಎಂ. ಶ್ರೀಕಾಂತ್ ಉದ್ಘಾಟಿಸುವರು.
ಅ.20ರ ಸಂಜೆ 5 ಗಂಟೆಗೆ ಫ್ರೀಡಂ ಪಾರ್ಕ್‍ನಲ್ಲಿ ನಡೆ ಯುವ ಮ್ಯೂಸಿಕಲ್ ನೈಟ್ ಅನ್ನು ಜಿಲ್ಲಾ ಉಸ್ತುವಾರಿ ಸಚಿವ ಎಸ್. ಮಧುಬಂಗಾರಪ್ಪ ಉದ್ಘಾಟಿಸುವರು. ಬಸವ ಕೇಂದ್ರದ ಶ್ರೀ ಬಸವಮರುಳಸಿದ್ದ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ. ಮುಖ್ಯ ಅತಿಥಿಯಾಗಿ ಸಂಸದ ಬಿ.ವೈ. ರಾಘವೇಂದ್ರ, ಶಾಸಕರಾದ ಎಸ್.ಎನ್. ಚನ್ನಬಸಪ್ಪ, ಡಿ.ಎಸ್. ಅರುಣ್, ಎಸ್. ರುದ್ರೇಗೌಡ, ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಇನ್ನಿತರರು ಆಗಮಿಸಲಿದ್ದಾರೆ.
ಮ್ಯೂಸಿಕಲ್ ನೈಟ್’ನಲ್ಲಿ ಯಾರೆಲ್ಲ ಭಾಗಿ?
ಮ್ಯೂಸಿಕಲ್ ನೈಟ್‍ನಲ್ಲಿ ಖ್ಯಾತ ಗಾಯಕ ಚಂದನ್ ಶೆಟ್ಟಿ, ಅನನ್ಯ ಭಟ್, ಐಶ್ವರ್ಯ, ಅಜಯ್, ದೀಪುಜಯಶೀಲನ್ ಭಾಗವಹಿಸಲಿದ್ದಾರೆ. ಅ.21ಸಂಜೆ 5.30ಕ್ಕೆ ಫ್ರೀಡಂ ಪಾರ್ಕ್‍ನಲ್ಲಿ ನಡೆಯುವ ಜಿಲ್ಲಾಮಟ್ಟದ ನೃತ್ಯ ಸ್ಪರ್ಧೆಯನ್ನು ಶಾಸಕಿ ಶಾರದಾ ಪೂರ್ಯಾ ನಾಯ್ಕ ಉದ್ಘಾಟಿಸಲಿದ್ದಾರೆ ಎಂದರು.
ಶಾಸಕ ಎಸ್.ಎನ್. ಚನ್ನಬಸಪ್ಪ, ಉಪ ಮೇಯರ್ ಲಕ್ಷ್ಮಿ ಶಂಕರ ನಾಯ್ಕ, ಎಸ್. ಜ್ಞಾನೇಶ್ವರ್, ಅನಿತಾ ರವಿಶಂಕರ್, ರೇಖಾ ರಂಗನಾಥ್, ಮಂಜುಳಾ ಶಿವಣ್ಣ ಇನ್ನಿತರರಿದ್ದರು.

Shivamogga dasara | ಶಿವಮೊಗ್ಗ ದಸರಾ, ಬರಲಿದ್ದಾರೆ ನಟ, ನಟಿಯರು, ಇಲ್ಲಿದೆ ನಮ್ಮೂರು ದಸರಾದ ಪೂರ್ಣ ವೇಳಾಪಟ್ಟಿ

error: Content is protected !!