ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಸಾಗರ ತಾಲೂಕು ಗೌರಿಹಳ್ಳ ಗ್ರಾಮದಲ್ಲಿ ಸರ್ಕಾರಿ ಪ್ರಾಥಮಿಕ ಶಾಲೆಯ ಎಲ್.ಕೆ.ಜಿ ವಿಭಾಗದ ಶೆಡ್ ಗಾಳಿಗೆ ಹಾರಿ ಹೋಗಿದ್ದು, ಐವರು ಮಕ್ಕಳು ಜೀವಭಯದಿಂದ ಪಾರಾಗಿದ್ದಾರೆ.
ಗೌತಮಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗೌರಿಹಳ್ಳ ಗ್ರಾಮದಲ್ಲಿ ಘಟನೆ ನಡೆದಿದೆ. ಮಕ್ಕಳಿಗೆ ಚಿಕ್ಕಪುಟ್ಟ ಗಾಯಗಳಾಗಿದ್ದು, ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಲಾಗಿದೆ. ಶಿಕ್ಷಕಿ ಸಹ ಸಂಭಾವ್ಯ ಅಪಾಯದಿಂದ ಪಾರಾಗಿದ್ದಾರೆ.
ಕೊಠಡಿ ಮಂಜೂರಾಗದ್ದಕ್ಕೆ ಶೆಡ್ ನಲ್ಲೇ ಪಾಠ
ಕಳೆದ ಎರಡು ವರ್ಷಗಳ ಹಿಂದೆ ಈ ಶಾಲೆಯಲ್ಲಿ ಎಲ್.ಕೆ.ಜಿ ಆರಂಭಿಸಲಾಗಿತ್ತು. ಸರ್ಕಾರದಿಂದ ಕೊಠಡಿ ಮಂಜೂರು ಆಗದ ಕಾರಣದಿಂದಾಗಿ ಗ್ರಾಮಸ್ಥರು ಮತ್ತು ಎಸ್.ಡಿಎಂಸಿ ತಾತ್ಕಾಲಿಕ ಶೆಡ್ ನಿರ್ಮಾಣ ಮಾಡಿತ್ತು. ಮಕ್ಕಳಿಗೆ ಅಲ್ಲಿಯೇ ಪಾಠ ಮಾಡಲಾಗುತ್ತಿತ್ತು. ಇಲಾಖೆಗೆ ಹಲವು ಸಲ ಮನವಿ ಮಾಡಿದರೂ ಕೊಠಡಿ ಮಂಜೂರು ಮಾಡಿರಲಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ.
READ | ಮಳೆ ಅನಾಹುತ, 7 ಮನೆ, 143 ಶಾಲೆ ಕಟ್ಟಡ ಡ್ಯಾಮೇಜ್, 3 ಸಾವು, ಜಿಲ್ಲೆಯಲ್ಲಿ ಇನ್ನೇನಾಗಿದೆ?