SSLC Result | ಎಸ್ಎಸ್ಎಲ್ ಸಿ ಫಲಿತಾಂಶದಲ್ಲಿ ಶಿವಮೊಗ್ಗ ಉತ್ತಮ ಸಾಧನೆ, ಎಷ್ಟನೇ ಸ್ಥಾನದಲ್ಲಿದೆ? ಇಲ್ಲಿದೆ ಕಂಪ್ಲೀಟ್ ಮಾಹಿತಿ

TET Key answer

 

 

ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಎಸ್ಎಸ್ಎಲ್ ಸಿ ಫಲಿತಾಂಶ (Karnataka SSLC results)/ಗುರುವಾರ ಪ್ರಕಟವಾಗಿದ್ದು, ಶಿವಮೊಗ್ಗ ರಾಜ್ಯಕ್ಕೆ ಮೂರನೇ ಸ್ಥಾನ ಗಳಿಸಿದೆ. ಕಳೆದ ಶೈಕ್ಷಣಿಕ ವರ್ಷದಲ್ಲಿ 28 ಸ್ಥಾನದಲ್ಲಿತ್ತು. ಯಾದಗಿರಿ ಶೇ.50.59 ಅಂಕ ಪಡೆದು ಕೊನೆಯ ಸ್ಥಾನದಲ್ಲಿದೆ.
ಮಾರ್ಚ್ 25 ರಿಂದ ಏಪ್ರಿಲ್ 26ರವರೆಗೂ ನಡೆದ ಎಸ್.ಎಲ್.ಎಲ್‌.ಸಿ ಪರೀಕ್ಷಾ ಫಲಿತಾಂಶವನ್ನು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ಪ್ರಕಟಿಸಿದೆ.

READ | ಇಂದು ಎಸ್.ಎಸ್.ಎಲ್.ಸಿ ಫಲಿತಾಂಶ ಪ್ರಕಟ, ಈ‌ ಲಿಂಕ್ ಬಳಸಿ‌ ರಿಸಲ್ಟ್ ನೋಡಿ

  • ಒಟ್ಟು 4,36,138 ವಿದ್ಯಾರ್ಥಿಗಳಲ್ಲಿ (ಗಂಡು) 2,87,416 ಮಂದಿ ಉತ್ತೀರ್ಣರಾಗಿದ್ದಾರೆ. (ಶೇ.65.90)
  • ಒಟ್ಟು 4,23,829 ವಿದ್ಯಾರ್ಥಿನಿಯರಲ್ಲಿ 3,41,778 ಮಂದಿ ಉತ್ತೀರ್ಣರಾಗಿದ್ದಾರೆ.
  • ನಗರ ಪ್ರದೇಶದಲ್ಲಿ 4,93,900 ವಿದ್ಯಾರ್ಥಿಗಳಲ್ಲಿ 35,97,703 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.
  • ಗ್ರಾಮೀಣ ಪ್ರದೇಶಗಳಲ್ಲಿ ಒಟ್ಟು 3.66.067 ಮಂದಿ ಉತ್ತೀರ್ಣರಾಗಿದ್ದಾರೆ.
  • ಒಟ್ಟು 5.906 ಸರ್ಕಾರಿ ಶಾಲೆಗಳಲ್ಲಿ ಶೇ.72.46, 3,666 ಅನುದಾನ ಶಾಲೆಗಳಲ್ಲಿ ಶೇ.72.22, 6.144 ಅನುದಾನ ರಹಿತ ಶಾಲೆಗಳು ಫಲಿತಾಂಶವಾಗಿದೆ.
  • 625ಕ್ಕೆ 625 ಬಾಗಲಕೋಟೆ ಜಿಲ್ಲೆಯ ಮುರಾರ್ಜಿ ದೇಸಾಯಿ ಶಾಲೆಯ ವಿದ್ಯಾರ್ಥಿನಿ ಅಂಕಿತಾ ಬಸಪ್ಪ ಕನ್ನೂರ ರಾಜ್ಯಕ್ಕೆ ಪ್ರಥಮ‌ ಸ್ಥಾನ ಪಡೆದಿದ್ದಾರೆ. 7 ಮಂದಿ ವಿದ್ಯಾರ್ಥಿಗಳು 624 ಅಂಕಗಳೊಂದಿಗೆ ಎರಡನೇ ಸ್ಥಾನ ಪಡೆದಿದ್ದಾರೆ.
  • 8,59,967 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, 6,31,204 ತೇರ್ಗಡೆಯಾಗಿದ್ದಾರೆ.

ಲಿಂಗವಾರು ಒಟ್ಟಾರೆ ಫಲಿತಾಂಶ
ಬಾಲಕರು- 2,87,416 (65.90%)
ಬಾಲಕಿಯರು- 3,43,788 (81.11%)

ರಾಜ್ಯದಲ್ಲಿ ಶೇಕಡವಾರು ಪ್ರಥಮ ಸ್ಥಾನ ಪಡೆದ ಜಿಲ್ಲೆ
1) ಉಡುಪಿ ಪ್ರಥಮ ಸ್ಥಾನ(94%)
2) ದಕ್ಷಿಣ ಕನ್ನಡ ,ದ್ವೀತಿಯ ಸ್ಥಾನ(92.12%)
3) ಶಿವಮೊಗ್ಗ (88.67%)

error: Content is protected !!