SSLC Result | ಶೈಕ್ಷಣಿಕವಾಗಿ ಹೊಸ ದಾಖಲೆ ಸೃಷ್ಟಿಸಿದ ಶಿವಮೊಗ್ಗ, ಎಸ್.ಎಸ್.ಎಲ್.ಸಿನಲ್ಲಿ ಯಾವ ತಾಲೂಕು ಎಷ್ಟನೇ ಸ್ಥಾನದಲ್ಲಿದೆ?

SSLC Result

 

 

ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಕಳೆದ ವರ್ಷ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ 28ನೇ ಸ್ಥಾನದಲ್ಲಿದ್ದ ಶಿವಮೊಗ್ಗ ಜಿಲ್ಲೆ ಈ ಸಲ ಶೇ.88.67 ವಿದ್ಯಾರ್ಥಿಗಳು ಉತ್ತೀರ್ಣರಾಗುವ ಮೂಲಕ ಮೂರನೇ ಸ್ಥಾನ ಪಡೆದಿದೆ. ವಿಶೇಷವೆಂದರೆ, ಎಸ್.ಎಸ್.ಎಲ್.ಸಿ ಫಲಿತಾಂಶದಲ್ಲಿ ಇದೇ ಮೊದಲ ಸಲ ಈ ಸ್ಥಾನ ಗಳಿಸಿದೆ.
ಇತ್ತೀಚೆಗೆ ನಡೆದ ಲೋಕಸಭೆ ಚುನಾವಣೆಯಲ್ಲಿ ಹಿಂದಿನ ದಾಖಲೆಗಳನ್ನು ಮುರಿದಿದ್ದ ಶಿವಮೊಗ್ಗ ಈಗ ಶೈಕ್ಷಣಿಕವಾಗಿ ಹೊಸ ದಾಖಲೆಯನ್ನು ಸೃಷ್ಟಿಸಿದೆ.

READ | ಎಸ್ಎಸ್ಎಲ್ ಸಿ ಫಲಿತಾಂಶದಲ್ಲಿ ಶಿವಮೊಗ್ಗ ಉತ್ತಮ ಸಾಧನೆ, ಎಷ್ಟನೇ ಸ್ಥಾನದಲ್ಲಿದೆ? ಇಲ್ಲಿದೆ ಕಂಪ್ಲೀಟ್ ಮಾಹಿತಿ

132 ಶಾಲೆಗಳಲ್ಲಿ ಶೇ.100 ರಿಸಲ್ಟ್
ಜಿಲ್ಲೆಯಲ್ಲಿ 132 ಶಾಲೆಗಳಲ್ಲಿ ಶೇ.100 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಅದರಲ್ಲಿ ಸರಕಾರಿ ಶಾಲೆ 37, ಸಮಾಜ ಕಲ್ಯಾಣ ಇಲಾಖೆ ವ್ಯಾಪ್ತಿಯ 24 ಶಾಲೆ, ಅನುದಾನಿತ 10, ಅನುದಾನ ರಹಿತ 61 ಶಾಲೆಗಳಿವೆ.
ಯಾವ ತಾಲೂಕಿಗೆ ಯಾವ ಸ್ಥಾನ
ತೀರ್ಥಹಳ್ಳಿ ತಾಲೂಕು ಜಿಲ್ಲೆಯಲ್ಲಿ ಮೊದಲನೇ ಸ್ಥಾನದಲ್ಲಿದೆ. ಆದರೆ, ಭದ್ರಾವತಿ ಕೊನೆಯ ಸ್ಥಾನದಲ್ಲಿದೆ. ಅದರ ಪೂರ್ಣ ವಿವರ ಈ ಕೆಳಗಿನ ಪಟ್ಟಿಯಲ್ಲಿದೆ.
ತೀರ್ಥಹಳ್ಳಿ- ಶೇ.94
ಸೊರಬ- ಶೇ.92.79
ಹೊಸನಗರ- ಶೇ.92.66
ಸಾಗರ- ಶೇ.92.37
ಶಿಕಾರಿಪುರ- ಶೇ.90.34
ಶಿವಮೊಗ್ಗ- ಶೇ.85.56
ಭದ್ರಾವತಿ- ಶೇ.83.87
ಒಟ್ಟು- ಶೇ.88.67
ಗ್ರಾಮಾಂತರ ವಿದ್ಯಾರ್ಥಿಗಳ ಸಾಧನೆ
ಜಿಲ್ಲೆಯ ಗ್ರಾಮೀಣ ಭಾಗದಿಂದ 13,299 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಅದರಲ್ಲಿ 12,016 (ಶೇ.90.35) ಪಾಸಾಗಿದ್ದಾರೆ. ನಗರ ಭಾಗದಿಂದ 9,729ರಲ್ಲಿ 8,404 (ಶೇ.86.38) ವಿದ್ಯಾರ್ಥಿಗಳು ಪಾಸಾಗಿದ್ದಾರೆ.
ಬಾಲಕಿಯರೇ ಸ್ಟ್ರಾಂಗ್
ಬಾಲಕರು- 11,389 (ಹಾಜರು) 9,592 ಪಾಸ್ (ಶೇ.84.22)
ಬಾಲಕಿಯರು- 11,639 (ಹಾಜರು), 10,828 ಪಾಸ್ (ಶೇ.93.03)

error: Content is protected !!