
ಮಧು ಬಂಗಾರಪ್ಪ
ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ (Madhu Bangarappa) ಅವರ ಶಿವಮೊಗ್ಗ ಭೇಟಿ ಕಾರ್ಯಕ್ರಮ ದಿಢೀರ್ ರದ್ದು ಪಡಿಸಲಾಗಿದೆ. ಇದಕ್ಕೆ ಕಾರಣ ತಿಳಿದುಬಂದಿಲ್ಲ.
READ | ಶಿವಮೊಗ್ಗ-ಬೆಂಗಳೂರು ಮಾರ್ಗದಲ್ಲಿ 5 ಇ-ಬಸ್ಗಳ ಸಂಚಾರ ಪ್ರಾರಂಭ, ಎಷ್ಟಿದೆ ರೇಟ್?
ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರಾಗಿ ಆಯ್ಕೆಯಾಗಿದ ಬಳಿಕ ಮೊದಲ ಮಧು ಬಂಗಾರಪ್ಪ ಅವರು ಶಿವಮೊಗ್ಗಕ್ಕೆ ಆಗಮಿಸುತ್ತಿದ್ದರು. ಹೀಗಾಗಿ, ಅದ್ದೂರಿಯಾಗಿ ಸ್ವಾಗತಿಸಲು ಜಿಲ್ಲಾ ಕಾಂಗ್ರೆಸ್ ಭರ್ಜರಿ ಸಿದ್ಧತೆ ಕೂಡ ನಡೆಸಿತ್ತು.
ಮಧು ಬಂಗಾರಪ್ಪ ಅವರು ಬೆಳಗ್ಗೆ 9.30ಕ್ಕೆ ಮಲವಗೊಪ್ಪದ ಸರ್ಕಾರಿ ಶಾಲೆಗೆ ಭೇಟಿ ನೀಡಲಿದ್ದರು. ಮಕ್ಕಳನ್ನು ಸ್ವಾಗತಿಸಿ ಶಾಲೆಯಲ್ಲಿ ಸಿಹಿ ಹಂಚಿ ಸೌಹಾರ್ದ ಭೇಟಿ ನೀಡೆಸಲಿದ್ದರು. ಬಳಿಕ ಅವರಿಗೆ ಈಡಿಗ ಸಮುದಾಯ ಭವನದಲ್ಲಿ ಅಭಿನಂದನೆ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ಮಧ್ಯಾಹ್ನ 3.30ಕ್ಕೆ ಜಿಪಂ ಸಭಾಂಗಣದಲ್ಲಿ ಅನೌಪಚಾರಿಕ ಸಭೆ ಏರ್ಪಡಿಸಲಾಗಿತ್ತು. ಆದರೆ, ಕಾರಣಾಂತರಗಳಿಂದ ಸಚಿವರ ಪ್ರವಾಸವೇ ರದ್ದಾಗಿದೆ.