Madhu Bangarappa | ಸಚಿವರಾದ ಬಳಿಕ ಮೊದಲ ಸಲ‌‌ ಶಿವಮೊಗ್ಗಕ್ಕೆ‌ ಆಗಮಿಸುತ್ತಿರುವ ಮಧು ಬಂಗಾರಪ್ಪಗೆ ಭರ್ಜರಿ ಸನ್ಮಾನಕ್ಕೆ ಸಿದ್ಧತೆ

Madhu Bangarappa 1

 

 

ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ (primary and higher education minister of karnataka)ರಾದ ಬಳಿಕ ಮಧು ಬಂಗಾರಪ್ಪ (Madhu Bangarappa) ಅವರು ಶಿವಮೊಗ್ಗಕ್ಕೆ ಮೊದಲ ಸಲ‌ ಆಗಮಿಸುತ್ತಿದ್ದು, ಅವರ ಸ್ವಾಗತಕ್ಕೆ ಶಿವಮೊಗ್ಗ ಸಿದ್ಧವಾಗಿದೆ.
ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್.ಎಸ್. ಸುಂದರೇಶ್ (HS Sundresh), ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. ಪೂರ್ಣ ಸಚಿವ ಸಂಪುಟ (Karnataka Cabinet) ಅಸ್ತಿತ್ವಕ್ಕೆ ಬಂದಿದೆ. ಶಿವಮೊಗ್ಗ ಜಿಲ್ಲೆಗೂ ಪ್ರಾತಿನಿಧ್ಯ ಸಿಕ್ಕಿದೆ. ಮಧು ಬಂಗಾರಪ್ಪ ಅವರು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವರಾಗಿ ಆಯ್ಕೆಯಾಗಿದ್ದಾರೆ. ಸಚಿವರಾದ ಮೇಲೆ ಮೊದಲ ಬಾರಿಗೆ ಶಿವಮೊಗ್ಗಕ್ಕೆ ಮೇ 31 ರಂದು ಬರಲಿದ್ದಾರೆ. ಅಂದು  ಅವರನ್ನು ಜಿಲ್ಲಾ ಕಾಂಗ್ರೆಸ್ ವತಿಯಿಂದ ಹೃತ್ಪೂರ್ವಕವಾಗಿ ಸ್ವಾಗತಿಸಿ ಸನ್ಮಾನಿಸಲಾಗುವುದು ಎಂದರು.

READ | ಶಿವಮೊಗ್ಗದಲ್ಲಿ ಬುಡಮೇಲಾಗಿ ಬಿದ್ದ ಮರಗಳು, ಮೆಸ್ಕಾಂ ಸಿಬ್ಬಂದಿ ಹೈರಾಣ, ಎಲ್ಲಿ ಏನಾಗಿದೆ?

ಮಧು ಬಂಗಾರಪ್ಪ ಎಲ್ಲೆಲ್ಲಿ‌ ಭೇಟಿ?
ಮಧು ಬಂಗಾರಪ್ಪ ಅವರು ಅಂದು ಬೆಳಗ್ಗೆ 9.30 ಕ್ಕೆ ಮಲವಗೊಪ್ಪದ ಸರ್ಕಾರಿ ಶಾಲೆಗೆ ಭೇಟಿ ನೀಡಲಿದ್ದಾರೆ. ಮಕ್ಕಳನ್ನು ಸ್ವಾಗತಿಸಿ ಶಾಲೆಯಲ್ಲಿ ಸಿಹಿ ಹಂಚಿ ಸೌಹಾರ್ದ ಭೇಟಿ ನೀಡಲಿದ್ದಾರೆ. ಅದಾದ ನಂತರ ಎಂ.ಆರ್.ಎಸ್. ವೃತ್ತದಿಂದ ಅವರನ್ನು ರ‌್ಯಾಲಿಯ ಮೂಲಕ ಮೆರವಣಿಗೆಯಲ್ಲಿ ಕರೆತರಲಾಗುವುದು. ಈಡಿಗ ಸಮುದಾಯ ಭವನದಲ್ಲಿ ಅಭಿನಂದಿಸಲಾಗುವುದು ಎಂದರು.
ಮಧು ಬಂಗಾರಪ್ಪ ಅವರ ಜೊತೆಗೆ ಶಾಸಕರಾಗಿ ಆಯ್ಕೆಯಾಗಿರುವ ಬೇಳೂರು ಗೋಪಾಲ ಕೃಷ್ಣ ಮತ್ತು ಬಿ.ಕೆ. ಸಂಗಮೇಶ್ ಅವರನ್ನು ಸನ್ಮಾನಿಸಲಾಗುವುದು. ಈ ಕಾರ್ಯಕ್ರಮಕ್ಕೆ ಪಕ್ಷದ ಹಿರಿಯ ಮುಖಂಡರಾದ ಕಾಗೋಡು ತಿಮ್ಮಪ್ಪ ಸೇರಿದಂತೆ ಎಲ್ಲ ಜನಪ್ರತಿನಿಧಿಗಳು, ಮಾಜಿ ಸಚಿವರು, ಶಾಸಕರು, ಪದಾಧಿಕಾರಿಗಳು, ಕಾಂಗ್ರೆಸ್ ಕಾರ್ಯಕರ್ತರು, ಚುನಾವಣೆಗೆ ಸ್ಪರ್ಧಿಸಿದ್ದ ಅಭ್ಯರ್ಥಿಗಳು ಆಗಮಿಸಲಿದ್ದಾರೆ ಎಂದರು.
ಪ್ರಮುಖರಾದ ಜಿ.ಡಿ. ಮಂಜುನಾಥ್, ಕಲಗೋಡು ರತ್ನಾಕರ್, ಇಸ್ಮಾಯಿಲ್ ಖಾನ್, ಚಂದ್ರ ಭೂಪಾಲ್, ರೇಖಾ ರಂಗನಾಥ್, ಯಮುನಾ ರಂಗೇಗೌಡ, ಆರ್.ಸಿ. ನಾಯ್ಕ್, ಕಾಶಿ ವಿಶ್ವನಾಥ್, ಅಕ್ರಂ ಪಾಶಾ, ರವಿಕುಮಾರ್, ಚಂದ್ರಶೇಖರ್ ಉಪಸ್ಥಿತರಿದ್ದರು.

Lightning | ಬೊಮ್ಮನಕಟ್ಟೆಯಲ್ಲಿ ಸಿಡಿಲು ಬಡಿದು ಮಹಿಳೆ ಸಾವು

error: Content is protected !!