KFD Updates | ಶಿವಮೊಗ್ಗದಲ್ಲಿ ಮಂಗನ ಕಾಯಿಲೆ ಸ್ಫೋಟ, ಇಂದು ಎಲ್ಲಿ ಎಷ್ಟು ಪಾಸಿಟಿವ್?

KFD

 

 

ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಜಿಲ್ಲೆಯಲ್ಲಿ ಮಂಗನ ಕಾಯಿಲೆ (kyasanur forest disease) ಸ್ಫೋಟಗೊಂಡಿದ್ದು, ಸೋಮವಾರ ಆರು ಜನರಿಗೆ ಪಾಸಿಟಿವ್ ಬಂದಿದೆ.

READ | ಮಲೆನಾಡಿನಲ್ಲಿ ಮಂಗನ ಕಾಯಿಲೆ ಉಲ್ಬಣ, ಎಷ್ಟು ಜನರಿಗೆ ಸೋಂಕು ತಗುಲಿದೆ?

ಜ್ವರದ ಲಕ್ಷಣ ಹೊಂದಿದವರ ರಕ್ತದ ಮಾದರಿಯನ್ನು ಶಿವಮೊಗ್ಗ ವಿಡಿಎಲ್ ನಲ್ಲಿ ಪರೀಕ್ಷಿಸಿದ್ದು, ಆರು ಜನರಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ಅವರನ್ನು ತೀರ್ಥಹಳ್ಳಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಡಿಎಚ್.ಓ ಡಾ.ರಾಜೇಶ್ ಸುರಗಿಹಳ್ಳಿ ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದರು.
ಚಿಕ್ಕಮಗಳೂರಲ್ಲಿ‌‌ ಏಳು ಪಾಸಿಟಿವ್
ಚಿಕ್ಕಮಗಳೂರಿನಲ್ಲಿ‌ ಏಳು‌ ಜನರಿಗೆ ಸೋಂಕು‌ ತಗುಲಿದೆ. ಇವರಲ್ಲೂ ಜ್ವರ ಕಾಣಿಸಿಕೊಂಡಿದ್ದು ಮಾದರಿ‌ ಪರೀಕ್ಷಿಸಿದಾಗ ಕೆಎಫ್.ಡಿ ದೃಢಪಟ್ಟಿದೆ. ಇದುವರೆಗೆ ಶಿವಮೊಗ್ಗ, ಚಿಕ್ಕಮಗಳೂರು ಮತ್ತು ಉತ್ತರ ಕನ್ನಡ ಸೇರಿ ಒಟ್ಟು 89 ಜನರಿಗೆ ಸೋಂಕು ತಗುಲಿದೆ.

error: Content is protected !!