KFD Updates | ಮಲೆನಾಡಿನಲ್ಲಿ ಕೆಎಫ್.ಡಿ ಉಲ್ಬಣ, ಒಂದೇ ದಿನ ಆರು ಪಾಸಿಟಿವ್, ಮೂರು ಜಿಲ್ಲೆಗಳಲ್ಲಿ ಹೇಗಿದೆ ಸ್ಥಿತಿ?

kfd

 

 

ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಮಲೆನಾಡಿನಲ್ಲಿ ದಿನೇ ದಿನೇ ಕ್ಯಾಸನೂರು ಅರಣ್ಯ ಕಾಯಿಲೆ (ಕೆಎಫ್.ಡಿ) ಪಾಸಿಟಿವ್ ಪ್ರಕರಣಗಳು ಪತ್ತೆಯಾಗುತ್ತಿವೆ. ಶನಿವಾರ ಒಂದೇ ದಿನ ಶಿವಮೊಗ್ಗ, ಚಿಕ್ಕಮಗಳೂರು ಸೇರಿ ಒಟ್ಟು ಆರು ಮಂದಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ.

READ | ಕೆಎಫ್‍ಡಿ ಕುರಿತು ಬೆಂಗಳೂರಿನಲ್ಲಿ ನಡೆಯಲಿದೆ ಪ್ರಮುಖ ಮೀಟಿಂಗ್, ಮಂಗಗಳ ಅಸಹಜ‌ ಸಾವು ಎಚ್ಚರಿಕೆ‌ಯ ಕರೆಗಂಟೆ!

ಶಿವಮೊಗ್ಗದಲ್ಲಿ ಹೇಗಿದೆ ಸ್ಥಿತಿ?
ಶಿವಮೊಗ್ಗದಲ್ಲಿ 124 ಮಾದರಿಗಳನ್ನು ಸಂಗ್ರಹಿಸಿದ್ದು, ಅದರಲ್ಲಿ ಒಂದು ಪಾಸಿಟಿವ್ ಬಂದಿದೆ. ಶನಿವಾರದಂದು ಆರು ಜನ ಚಿಕಿತ್ಸೆ ಪಡೆದು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಇದುವರೆಗೆ ಒಂದು ಸಾವು ಸಂಭವಿಸಿದೆ.
ಚಿಕ್ಕಮಗಳೂರಿನಲ್ಲಿ ಹೇಗಿದೆ ಸ್ಥಿತಿ?
ಚಿಕ್ಕಮಗಳೂರಿನಲ್ಲಿ ಸ್ಥಿತಿ ಗಂಭೀರವಾಗಿದೆ. 12 ಮಾದರಿಗಳಲ್ಲಿ ಐದು ಪಾಸಿಟಿವ್ ಬಂದಿವೆ. ಇದುವರೆಗೆ ಇಲ್ಲಿ ಒಟ್ಟು 12 ಪ್ರಕರಣಗಳು ದೃಢಪಟ್ಟಿವೆ. ಶನಿವಾರ ಒಬ್ಬರು ಡಿಸ್ಚಾರ್ಜ್ ಆಗಿದ್ದಾರೆ. ಇಲ್ಲೂ ಇದುವರೆಗೆ ಒಂದು ಸಾವು ಸಂಭವಿಸಿದೆ.
ಉತ್ತರ ಕನ್ನಡದ ಸ್ಥಿತಿ ಹೇಗಿದೆ?
ಉತ್ತರ ಕನ್ನಡದಲ್ಲಿ 4 ಮಾದರಿಗಳನ್ನು ಸಂಗ್ರಹಿಸಿದ್ದು, ಅದರಲ್ಲಿ ಯಾವುದೇ ಪಾಸಿಟಿವ್ ಬಂದಿಲ್ಲ. ಇದುವರೆಗೆ ರಾಜ್ಯದಲ್ಲೇ ಅತಿ ಹೆಚ್ಚು ಉತ್ತರ ಕನ್ನಡದಲ್ಲಿ 38 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಶನಿವಾರ ಮೂವರು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

error: Content is protected !!