KS Eshwarappa | ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪಗೆ ನೋಟಿಸ್, ಮುಂದೇನಾಯ್ತು?

KS Eshwarappa

 

 

ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ರಾಷ್ಟ್ರದ್ರೋಹಿಗಳನ್ನು ಗುಂಡಿಕ್ಕಿ ಕೊಲ್ಲುವ ಕಾನೂನು ಜಾರಿಗೆ ತರಬೇಕೆಂದು ಹೇಳಿಕೆ ನೀಡಿದ್ದ ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪಗೆ ಶನಿವಾರ ದಾವಣಗೆರೆ ಪೊಲೀಸರು ನೋಟಿಸ್ ನೀಡಿದರು.
ಹನುಮಂತ್ ಎಂಬಾತ ದೂರು ನೀಡಿದ್ದು, ಅದರ ಆಧಾರದ ಮೇಲೆ ಉದ್ರೇಕಕಾರಿ ಹೇಳಿಕೆ ನೀಡಿರುವುದಾಗಿ ನೋಟಿಸ್ ನೀಡಲಾಗಿದೆ. ಐಪಿಸಿ ಕಲಂ 505(1)(ಸಿ), 505 (2) ಮತ್ತು 506 ಅಡಿ ಪ್ರಕರಣಗಳನ್ನು ದಾಖಲಿಸಲಾಗಿದೆ. ಇದನ್ನು ಮಲ್ಲೇಶ್ವರಂ ನಗರದಲ್ಲಿರುವ ಈಶ್ವರಪ್ಪ ಅವರ ಮನೆಗೆ ಶನಿವಾರ ಆಗಮಿಸಿದ ಪೊಲೀಸರು ನೀಡಿದ್ದಾರೆ. ಫೆ.15ರಂದು ದಾವಣಗೆರೆ ಬಡಾವಣೆ ಪೊಲೀಸ್ ಠಾಣೆಗೆ ಆಗಮಿಸುವಂತೆ ನೋಟಿಸ್ ನಲ್ಲಿ ಸೂಚನೆ ನೀಡಲಾಗಿದೆ.

READ | ಶಿವಮೊಗ್ಗದಲ್ಲಿ ಕೆಎಫ್‍ಡಿ ಸಹಾಯವಾಣಿ ರಿಲೀಸ್, ಏನೇ ಸಮಸ್ಯೆ ಇದ್ರೂ ಇಲ್ಲಿಗೆ ಕರೆ ಮಾಡಿ

ಇಂಥ ನೂರು ನೋಟಿಸ್ ಗಳಿಗೂ ಹೆದರಲ್ಲ
ಈ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿರುವ ಕೆ.ಎಸ್.ಈಶ್ವರಪ್ಪ, ದೇಶ ವಿಭಜನೆಯ ಬಗ್ಗೆ ಮಾತನಾಡುವವರ ಮೇಲೆ ಪ್ರಕರಣ ದಾಖಲಾಗಲ್ಲ, ನೋಟಿಸ್ ನೀಡಲ್ಲ. ಅದನ್ನು ಬಿಟ್ಟು ರಾಷ್ಟ್ರದ್ರೋಹಿಗಳನ್ನು ಗುಂಡಿಕ್ಕಿ ಕೊಲ್ಲಲಿ ಎಂಬ ಹೇಳಿಕೆ ನೀಡಿದ್ದಕ್ಕೆ ನೋಟಿಸ್ ನೀಡಲಾಗಿದೆ. ಇಂಥ ನೂರು ನೋಟಿಸ್ ಬಂದರೂ ನಾಣು ಹೆದರಲ್ಲ’ ಎಂದು ಹೇಳಿದರು.
‘ನಾನು ಡಿ.ಕೆ.ಸುರೇಶ್ ಅವರನ್ನು ಗುಂಡಿಕ್ಕಿ ಕೊಲ್ಲಿ ಎಂದು ಹೇಳಿಲ್ಲ. ಆ ರೀತಿಯಲ್ಲಿ ಹೇಳುವುದಿಲ್ಲ. ದೇಶದ್ರೋಹಿಗಳನ್ನು ಗುಂಡಿಕ್ಕಿ ಕೊಲ್ಲುವ ಕಾನೂನು ತನ್ನಿ ಎಂದು ಹೇಳಿದ್ದೆ. ಆದರೆ, ನನ್ನ ಹೇಳಿಕೆಯನ್ನು ತಿರುಚುವ ಪ್ರಯತ್ನ ನಡೆದಿದೆ’ ಎಂದು ಹೇಳಿದರು.
ದೇಶದ್ರೋಹಿಗಳನ್ನು ಗುಂಡಿಟ್ಟು ಕೊಲ್ಲುವ ಕಾನೂನು ಜಾರಿಗೆ ತನ್ನಿ ಎಂಬ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಪತ್ರ ಬರೆದು ಮನವಿ ಮಾಡುವೆ ಎಂದು ಹೇಳಿದರು.

error: Content is protected !!