KFD | ಮಂಗನ ಕಾಯಿಲೆ ತುರ್ತು ಚಿಕಿತ್ಸೆ ನಿರಾಕರಿಸಿದರೆ ಆಸ್ಪತ್ರೆ ಲೈಸೆನ್ಸ್ ರದ್ದು!

Dinesh Gundurao

 

 

ಸುದ್ದಿ ಕಣಜ.ಕಾಂ ಉಡುಪಿ
UDUPI: ಸರ್ಕಾರದೊಂದಿಗೆ ವಿವಿಧ ಯೋಜನೆಗಳ ಅಡಿ ಸಹಭಾಗಿತ್ವ ಪಡೆದರೂ ತುರ್ತು ಚಿಕಿತ್ಸೆ ನಿರಾಕರಿಸುವ ಖಾಸಗಿ ಆಸ್ಪತ್ರೆಗಳ ಪರವಾನಗಿಯನ್ನು ಕೆಪಿಎಂಎ ಕಾಯ್ದೆ ಅಡಿ ರದ್ದುಪಡಿಸಲಾಗುವುದು ಎಂದು ಆರೋಗ್ಯ ಇಲಾಖೆ ಸಚಿವ ದಿನೇಶ್ ಗುಂಡೂರಾವ್ (karnataka Health minister Dinesh Gundurao) ಎಚ್ಚರಿಸಿದರು.
ಉಡುಪಿಯ ಅಜ್ಜರಕಾಡಿನಲ್ಲಿ ನಡೆದ ಕೆಎಫ್.ಡಿ ಬಾಧಿತ ಜಿಲ್ಲೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.

Health tips

ಕೆಎಫ್‍ಡಿಗೆ ಹೊಸ ಲಸಿಕೆ ಸಂಶೋಧನೆಗಾಗಿ ಹೈದ್ರಾಬಾದಿನ ಸಂಶೋಧನಾ ಸಂಸ್ಥೆ ಜೊತೆಗೆ ಸರ್ಕಾರ ಒಪ್ಪಂದ ಮಾಡಿಕೊಂಡಿದೆ.
ದಿನೇಶ್ ಗುಂಡೂರಾವ್, ಆರೋಗ್ಯ ಸಚಿವ

ಕೆಎಫ್‍ಡಿ ಪಾಸಿಟಿವ್ ಇರುವ ಇಬ್ಬರು ರೋಗಿಗಳು ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 12 ಕೆಎಫ್‍ಡಿ ಪೀಡಿತ ಜಿಲ್ಲೆಗಳಲ್ಲಿ ಶಿವಮೊಗ್ಗ, ಚಿಕ್ಕಮಗಳೂರು, ಉತ್ತರ ಕನ್ನಡದಿಂದ 70 ಪ್ರಕರಣಗಳು ವರದಿಯಾಗಿವೆ. ವಿಡಿಎಲ್ ಶಿವಮೊಗ್ಗ ಮತ್ತು ಎಂಐವಿ ಮಣಿಪಾಲ ಪ್ರಯೋಗಾಲಯವನ್ನು ಕೆಎಫ್‍ಡಿ ಪರೀಕ್ಷೆಗೆ ಗುರುತಿಸಲಾಗಿದೆ ಎಂದು ತಿಳಿಸಿದರು.

READ | ಕೆಎಫ್‍ಡಿ ಕುರಿತು ಬೆಂಗಳೂರಿನಲ್ಲಿ ನಡೆಯಲಿದೆ ಪ್ರಮುಖ ಮೀಟಿಂಗ್, ಮಂಗಗಳ ಅಸಹಜ‌ ಸಾವು ಎಚ್ಚರಿಕೆ‌ಯ ಕರೆಗಂಟೆ!

ಆಂಬುಲೆನ್ಸ್ ಮೇಲೆ ನಿಗಾ ಇಡಲು ಹೊಸ ವ್ಯವಸ್ಥೆ
108 ಆಂಬುಲೆನ್ಸ್ ಸೇವೆಯಲ್ಲಿನ ಲೋಪಗಳನ್ನು ಸರಿಪಡಿಸಿ ಆಧುನೀಕರಣಗೊಳಿಸಲಾಗುತ್ತಿದೆ. ಅದಕ್ಕಾಗಿ ಮಾನಿಟರಿ ಮೆಕ್ಯಾನಿಸಂ ಸಿಸ್ಟಂ ಜಾರಿಗೆ ತರಲಾಗುತ್ತಿದೆ. 272 ಹೊಸ ಆಂಬುಲೆನ್ಸ್ ಕೊಡಲಾಗಿದೆ. ಚಾಲಕರು ಮತ್ತು ಸಿಬ್ಬಂದಿ ನಿರ್ವಹಣೆ ಸುಸೂತ್ರಗೊಳಿಸಲು ಹೊಸ ವ್ಯವಸ್ಥೆ ಜಾರಿಗೆ ತರಲಾಗುತ್ತಿದೆ ಎಂದರು.

error: Content is protected !!