Good News | ಶಿವಮೊಗ್ಗ-ಬೆಂಗಳೂರು ಮಾರ್ಗದಲ್ಲಿ 5 ಇ-ಬಸ್‍ಗಳ ಸಂಚಾರ ಪ್ರಾರಂಭ, ಎಷ್ಟಿದೆ‌ ರೇಟ್?

EV Bus

 

 

ಸುದ್ದಿ‌ ಕಣಜ.ಕಾಂ ಶಿವಮೊಗ್ಗ
SHIVAMOGGA: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು ಮೇ 27 ರಿಂದ ಶಿವಮೊಗ್ಗ-ಬೆಂಗಳೂರು ಮಾರ್ಗದಲ್ಲಿ ಸುಸಜ್ಜಿತವಾದ ನೂತನ ಇವಿ ಪವರ್ ಪ್ಲಸ್ ಹವಾ ನಿಯಂತ್ರಿತ ಬಸ್‍ಗಳ ಸಂಚಾರ ಪ್ರಾರಂಭಿಸಿದೆ.
ಶಿವಮೊಗ್ಗ-ಬೆಂಗಳೂರು ಮಾರ್ಗದಲ್ಲಿ ಇ-ಬಸ್‍ನ ಪ್ರಯಾಣ ದರ ₹600 ಗಳಾಗಿದ್ದು, ಪ್ರಯಾಣಿಕರು ನಿಗಮದ ಅವತಾರ್ ವೆಬ್‍ಸೈಟ್ https://awatar.ksrtc.in ರಲ್ಲಿ ಆನ್‍ಲೈನ್ ಬುಕ್ಕಿಂಗ್ ಮಾಡಿಕೊಳ್ಳುವುದರ ಮೂಲಕ ಈ ವ್ಯವಸ್ಥೆಯ ಸದುಪಯೋಗ ಪಡೆದುಕೊಳ್ಳುವಂತೆ ನಿಗಮದ ವಿಭಾಗೀಯ ನಿಯಂತ್ರಣಾಧಿಕಾರಿ ವಿಜಯ್ ಕುಮಾರ್ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

READ | ಶಿವಮೊಗ್ಗದಲ್ಲಿ ದೇಶದ 5ನೇ ರಾಷ್ಟ್ರೀಯ ರಕ್ಷಾ ವಿವಿ ಕ್ಯಾಂಪಸ್ ಆರಂಭ, ಯಾವೆಲ್ಲ ಕೋರ್ಸ್’ಗಳು ಲಭ್ಯ? ಪೂರ್ಣ ಮಾಹಿತಿ ಇಲ್ಲಿದೆ 

ಬಸ್ ವಿಶೇಷಗಳೇನು?
ಶಿವಮೊಗ್ಗ- ಬೆಂಗಳೂರು ನಡುವೆ ಸಂಚರಿಸಲಿರುವ ಎಲೆಕ್ಟ್ರಿಕ್ ಬಸ್ ಅತ್ಯಾಧುನಿಕ ಬ್ಯಾಟರಿಯನ್ನು ಹೊಂದಿದೆ. ಎರಡೂವರೆ ಗಂಟೆಗಳಲ್ಲಿ ಚಾರ್ಜ್ ಆಗಲಿದೆ. ಒಮ್ಮೆ ಚಾರ್ಜ್ ಮಾಡಿದರೆ 300 ಕಿ.ಮೀ. ಸಂಚರಿಸಬಹುದು. ಶಿವಮೊಗ್ಗದಿಂದ ರಾಜಧಾನಿಯು 270 ಕಿ.ಮೀ. ಇದ್ದು, ಒಮ್ಮೆ ಚಾರ್ಜ್ ಮಾಡಿದರೆ ಶಿವಮೊಗ್ಗಕ್ಕೆ ರೀಚ್ ಆಗಬಹುದಾಗಿದೆ. ಶಿವಮೊಗ್ಗ ಡಿಪೋದಲ್ಲಿ ಬಸ್ ಚಾರ್ಜಿಂಗ್ ಗೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ.
ಬಸ್ ಒಳಗಡೆ ಏನೇನಿದೆ?
ಇ- ಬಸ್ ಸಂಪೂರ್ಣ ಹವಾನಿಯಂತ್ರಿತವಾಗಿದೆ. ಒಳಗಡೆ ಸಿಸಿ ಕ್ಯಾಮರಾ, ಅಗ್ನಿಶಾಮಕ ಸಾಧನ, ಎಮರ್ಜನ್ಸಿ ಬಟನ್ ಗಳು, ಫಸ್ಟ್ ಏಡ್ ಕಿಟ್, ಗ್ಲಾಸ್ ಹ್ಯಾಮರ್ ಇತ್ಯಾದಿ ಸೌಲಭ್ಯಗಳಿವೆ.

Shimoga Rain | ಶಿವಮೊಗ್ಗದಲ್ಲಿ ಬುಡಮೇಲಾಗಿ ಬಿದ್ದ ಮರಗಳು, ಮೆಸ್ಕಾಂ ಸಿಬ್ಬಂದಿ ಹೈರಾಣ, ಎಲ್ಲಿ ಏನಾಗಿದೆ?

error: Content is protected !!